ಸ್ಮಶಾನಕ್ಕೆ ಸ್ಥಳ ಮಂಜೂರು ಮಾಡಿ
Team Udayavani, Feb 26, 2022, 3:18 PM IST
ರಾಯಚೂರು: ನಗರದ ಎಲ್‌ಬಿಎಸ್ ನಗರದಲ್ಲಿರುವ ರುದ್ರಭೂಮಿ ಸ್ಥಳ ಬಹಳ ಚಿಕ್ಕದಾಗಿದ್ದು, ಸಂಸ್ಕಾರ ಮಾಡಲು ಸಮಸ್ಯೆ ಎದುರಾಗಿದೆ. ಕೂಡಲೇ ಸ್ಮಶಾನಕ್ಕೆ ಸ್ಥಳ ಮಂಜೂರು ಮಾಡುವಂತೆ ಆಗ್ರಹಿಸಿ ಎಲ್‌ಬಿಎಸ್ ನಗರ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ರುದ್ರಭೂಮಿಗೆ ನಿಗದಿಪಡಿಸಿದ ಸ್ಥಳ ಮಾತ್ರ ಅಷ್ಟೇ ಇದೆ. ಇಲ್ಲಿ ಮೂರು ಎಕರೆ ಪ್ರದೇಶ ಮುನ್ನೂರುಕಾಪು ಸಮಾಜದವರ ಅಧೀನದಲ್ಲಿದೆ. ಉಳಿದ ಸ್ವಲ್ಪ ಸ್ಥಳದಲ್ಲಿ ಎಲ್‌ಬಿಎಸ್, ಮೈಲಾರ ನಗರ, ಜಲಾಲ್ ನಗರ, ಕಾಳಿದಾಸ ನಗರ, ಮಡ್ಡಿಪೇಟೆ, ಮಕ್ತಲ್ ಪೇಟೆ, ಸಿಯಾತಲಾಬ್ ಪ್ರದೇಶದಲ್ಲಿ ಜನ ಸಂಸ್ಕಾರ ಮಾಡುತ್ತಾರೆ. ಈ ಪ್ರದೇಶದ ಒಂದು ಎಕರೆಯಲ್ಲಿ ಕಸ ಹಾಕಲಾಗುತ್ತದೆ. ಶೌಚಗೃಹಕ್ಕೆ ಇದೇ ಸ್ಥಳವನ್ನು ಜನರು ಅವಲಂಬಿಸಿದ್ದಾರೆ ಎಂದು ವಿವರಿಸಿದರು.
ಇಕ್ಕಟ್ಟಾದ ಸ್ಥಳದಲ್ಲಿ ಹಿಂದೆ ಶವಸಂಸ್ಕಾರ ಮಾಡಿದ ಸ್ಥಳದಲ್ಲೇ ಮತ್ತೆ ಶವ ಹೂಳುವ ಸ್ಥಿತಿ ಇದೆ. ಹೀಗಾಗಿ ನಗರ ಸಮೀಪದಲ್ಲಿ ಸೂಕ್ತ ಸ್ಥಳ ಗುರುತಿಸಿ ಎಲ್‌ಬಿಎಸ್ ನಗರ ಸೇರಿ ಸುತ್ತಲಿನ ಜನರಿಗೆ ಶವ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ನಿವಾಸಿಗಳಾದ ಶೇಖರ ನರಸಪ್ಪ ನೀಲಗಂಟಿ, ನರಸಿಂಹಲು, ತಿಮ್ಮಣ್ಣ ಯಾದವ್, ನಾಗರಾಜ, ನಬಿಸಾಬ್, ಆರ್, ವೀರೇಶ, ಶರಣಪ್ಪ, ರವಿಕುಮಾರ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.