ಅಂಬೇಡ್ಕರ್ ಭವನ ಜಾಗಬದಲಿಗೆ ಒತ್ತಾಯ
Team Udayavani, Nov 5, 2017, 5:27 PM IST
ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣಕ್ಕೆ ಅಂಬೇಡ್ಕರ್ ಭವನ ಮಂಜೂರಾಗಿರುವುದು ಸ್ವಾಗತಾರ್ಹ. ಆದರೆ ಭವನ ನಿರ್ಮಿಸಲು ಉದ್ದೇಶಿಸಿರುವ ಸ್ಥಳ ಬದಲಿಸಿ ಬೇರೆಡೆ ಸ್ಥಳ ಆಯ್ಕೆ ಮಾಡಿ ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಭವನ ನಿರ್ಮಾಣಕ್ಕೆ ಮುಂದಾಗಬೇಕೆಂದು ಪ್ರಗತಿಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಹಟ್ಟಿಯಿಂದ ಲಿಂಗಸುಗೂರಿಗೆ ಹೋಗುವ ಮಾರ್ಗ ಮಧ್ಯೆ ಗುಡದನಾಳ ಕ್ರಾಸ್ ಪಕ್ಕದಲ್ಲಿರುವ ಭವನ ನಿರ್ಮಾಣಕ್ಕೆ ಆಯ್ಕೆ ಮಾಡಿರುವ ಸ್ಥಳ ಪಟ್ಟಣದಿಂದ 3 ಕಿ.ಮೀ. ಅಂತರದಲ್ಲಿದೆ. ಅಲ್ಲದೆ ಸ್ಮಶಾನ, ಜೆಸ್ಕಾಂ ಕಚೇರಿ ಹಾದು ಹೋಗಬೇಕು. ಮಾತ್ರವಲ್ಲದೆ ಸಮೀಪದಲ್ಲಿಯೇ ಗಣಿ ತ್ಯಾಜ್ಯ ಸಂಗ್ರಹಿಸಿರುವ ಸೈನೇಡ್ ಬೂದಿ ಸಂಗ್ರಹವಿದ್ದರೆ, ಮತ್ತೂಂದೆಡೆ ಗಣಿಯಲ್ಲಿ ಸ್ಪೂಟಿಸುವ ಮದ್ದಿನ ಮನೆ ಇದೆ. ಇಂತಹ ಭಯಾನಕ ಭಯಾನಕ ಸ್ಥಳದಲ್ಲಿ ಭವನ ನಿರ್ಮಾಣ ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಪಟ್ಟಣದ ರಾಘವೇಂದ್ರ ಸ್ವಾಮಿ ಮಠ ಹಾಗೂ ಬಸವ ಸೇವಾ ಸಮಿತಿ ಮಧ್ಯೆ ಇರುವ ಖಾಲಿ ಸ್ಥಳ, ಕೋ-ಅಪರೇಟಿವ್ ಸ್ಟೋರ್, ನಾಗಲಿಂಗೇಶ್ವರ ದೇವಸ್ಥಾನ ಸಮೀಪ ಹಾಗೂ ಅಬ್ದುಲ್ಲಾ ಕಿರಾಣಿ ಅಂಗಡಿ ಮುಂಭಾಗ, ಇಲ್ಲವೇ ಹೊಸ ಬಸ್ ನಿಲ್ದಾಣ ಹತ್ತಿರ ಹಾಗೂ ಮಳಿಗೆಗಳ ಹಿಂದೆ ಅನೇಕ ಖಾಲಿ ಸ್ಥಳಗಳಿವೆ. ಇವುಗಳನ್ನು ಪರಿಶೀಲಿಸಿ ಸೂಕ್ತ ಜಾಗೆಯಲ್ಲಿ ಭವನ ನಿರ್ಮಿಸಬೇಕು ಎಂದು ಜೈ ಭೀಮ ಯುವಸೇನೆಯ ಮಲ್ಲಿಕಾರ್ಜುನ ಚಿತ್ರನಾಳ, ಮಲ್ಲೇಶ ಹೆಮ್ಮಡಗಿ, ಸುರೇಶ ಮಾಚನೂರು, ಎಸ್ ಎಫ್‌ಐನ ಮಲ್ಲಿಕಾರ್ಜುನ, ದಸಂಸ ಹನುಮಂತಪ್ಪ ತವಗ, ಛಲವಾದಿ ಮಹಾಸಭಾದ ಗುಡದಪ್ಪ ಭಂಡಾರಿ, ಅಂಬೇಡ್ಕರ್ ಯುವಕ ಮಂಡಳಿ ಎಚ್.ಎ. ಲಿಂಗಪ್ಪ, ಲಿಂಗರಾಜ, ಮಂಜುನಾಥ, ಶಿವರಾಜಕುಮಾರ ಇತರರು ಹಟ್ಟಿ ಚಿನ್ನದ ಗಣಿ ಕಂಪನಿ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.