ಎಂಎಲ್ಸಿ ಇಟಗಿ ಅನುದಾನದಲ್ಲಿ ಆಂಬ್ಯುಲೆನ್ಸ್ ವಿತರಣೆ
Team Udayavani, Jan 3, 2022, 3:40 PM IST
ಸಿರವಾರ: ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ ಅವರ 25 ಲಕ್ಷ ರೂ. ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ ಹಸ್ತಾಂತರ ಮಾಡಲಾಯಿತು.
ಈ ವೇಳೆ ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಭೋಸರಾಜ ಮಾತನಾಡಿ, ಎಂಎಲ್‌ಸಿ ಇಟಗಿಯವರು ಬಡವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯಬೇಕು ಎಂಬ ದೃಷ್ಟಿಯಿಂದ ತಮ್ಮ ವಿಶೇಷ ಅನುದಾನಲ್ಲಿ ದೇವದುರ್ಗ ಹಾಗೂ ಸಿರವಾರ ತಾಲೂಕಿಗೆ ಆಂಬ್ಯುಲೆನ್ಸ್ ವಿತರಣೆ ಮಾಡಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಮಾನ್ವಿಯಲ್ಲಿ ತಾಯಿ ಮಗು ಆಸ್ಪತ್ರೆ ಹಾಗೂ ಸಿರವಾರದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಮಾಡಿದ್ದೇವೆ. ಹಾಲಿ ಶಾಸಕರು ಆರೋಗ್ಯ ಕೇಂದ್ರಕ್ಕೆ ಸಲಕರಣೆ ಹಾಗೂ ವೈದ್ಯರನ್ನು ನೇಮಕ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಡಾ| ಸುನೀಲ್ ಸರೋದೆ, ಡಾ| ಪರಿಮಳಾ ಮೈತ್ರಿ, ಮಾಜಿ ಶಾಸಕ ಜಿ. ಹಂಪಯ್ಯನಾಯಕ, ಚುಕ್ಕಿ ಸೂಗಪ್ಪ ಸಾಹುಕಾರ, ಶರಣಯ್ಯ ನಾಯಕ ಗುಡದಿನ್ನಿ, ರಮೇಶ ದರ್ಶನಕರ್, ತಾಪಂ ಮಾಜಿ ಅಧ್ಯಕ್ಷ ದಾನನಗೌಡ, ಚಂದ್ರು ಕಳಸ, ಶಿವಕುಮಾರ ಚುಕ್ಕಿ, ಕಿರಿಲಿಂಗಪ್ಪ ಕವಿತಾಳ, ಉಮಾಶಂಕರ, ಶಿವಶರಣ ಅರಕೇರಿ, ಶ್ರೀನಿವಾಸ ಜಾಲಾಪೂರು, ಸೂರಿ ದುರುಗಣ್ಣ ನಾಯಕ, ಹಸೇನ್ ಅಲಿ, ಹಾಜಿಚೌದ್ರಿ, ಮೌಲಾಸಾಬ ವರ್ಚಸ್, ಬಸವರಾಜ ಗಡ್ಲ, ಎಚ್.ಕೆ. ಅಮರೇಶ, ಎನ್.ಚಂದ್ರಶೇಖರ, ನಾಗಪ್ಪ ಪತ್ತಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.