ಹಾರೋಹಳ್ಳಿ ಪಪಂಗೆ ಆಡಳಿತಾಧಿಕಾರಿ ನೇಮಕ
Team Udayavani, May 31, 2021, 5:27 PM IST
ಕನಕಪುರ: ಗ್ರಾಪಂನಿಂದ ಮೇಲ್ದರ್ಜೆಗೇರಿರುವಹಾರೋಹಳ್ಳಿ ಪಟ್ಟಣ ಪಂಚಾಯಿತಿಗೆ ಆಡಳಿತಾತ್ಮಕದೃಷ್ಟಿಯಿಂದ ಸರ್ಕಾರ ಆಡಳಿತಾಧಿಕಾರಿಯನ್ನುನೇಮಕ ಮಾಡಿ ಸರ್ಕಾರದ ನಗರಾಭಿವೃದ್ಧಿಇಲಾಖೆ ಅಧೀನ ಕಾರ್ಯದರ್ಶಿ ಎ. ವಿಜಯ್‌ಕುಮಾರ್ ಆದೇಶ ಹೊರಡಿಸಿದ್ದಾರೆ.
ಪಟ್ಟಣ ಪಂಚಾಯ್ತಿಯಾಗಿ ಮೇಲ್ದಜೇìಗೇರಿಸಿ ಅಸ್ತಿತ್ವಕ್ಕೆ ತರಲು ಮೇ.27 ರಂದು ಪಪಂ ಮುಂದಿನಆಡಳಿತಾತ್ಮಕ ದೃಷ್ಟಿಯಿಂದ ಕನಕಪುರ ತಾಲೂಕುತಹಶೀಲ್ದಾರ್ ಅವರನ್ನು ಹಾರೋಹಳ್ಳಿ ಪಪಂಗೆಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿಸರ್ಕಾರದ ನಗರಾಭಿವೃದ್ಧಿ ಇಲಾಖೆ ಅಧೀನಕಾರ್ಯದರ್ಶಿ ಆದೇಶಿಸಿದ್ದಾರೆ.
ಹಾಲಿ ಇರುವಅಭಿವೃದ್ಧಿ ಅಧಿಕಾರಿ ಶಾಮೀದ್ ಹುಸೇನ್‌ಓಲೆಕಾರ್, ಕಾರ್ಯದರ್ಶಿ ನರಸಿಂಹೇಗೌಡ,ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಪುಟ್ಟ ಸ್ವಾಮಿಸೇರಿದಂತೆ ಮೂವರು ಅಧಿಕಾರಿಗಳನ್ನುಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆಮಾಡಿದ್ದು, ಉಳಿದ ಸಿಬ್ಬಂದಿ ಮತ್ತು ನೀರುಗಂಟಿಗಳು ಪಪಂನಲ್ಲೇ ಮುಂದುವರಿಯಲಿದ್ದಾರೆ.ಸರ್ಕಾರ ಹಾರೋಹಳ್ಳಿ. ಕೊಳ್ಳಿಗನಹಳ್ಳಿ.ಕಗ್ಗಲಹಳ್ಳಿ. ದ್ಯಾವಸಂದ್ರ.ಟಿ.ಹೊಸಹಳ್ಳಿ ಗ್ರಾಮಪಂಚಾಯಿತಿಗಳ ಕೆಲ ಗ್ರಾಮಗಳು ಪಪಂಗೆಒಳಪಡುವುದರಿಂದ ಈ ಐದು ಗ್ರಾಪಂಚುನಾವಣೆಯ ಮುಂದೂಡಲಾಯಿತು.
ಹಾರೋಹಳ್ಳಿ ಪಪಂಗೆ ಪೂರ್ವಕ್ಕೆ ಕೊನಸಂದ್ರಗ್ರಾಮದ ಗಡಿ, ಪಶ್ಚಿಮಕ್ಕೆ ಮಾಗಡಿ ವಿಧಾನಸಭಾಕ್ಷೇತ್ರದ ಗಡಿ, ಉತ್ತರಕ್ಕೆ ಪರುವಯ್ಯನ ಪಾಳ್ಯಗ್ರಾಮದ ಗಡಿ , ದಕ್ಷಿಣಕ್ಕೆ ಕೀರಣಗೆರೆ ಗ್ರಾಮದಗಡಿಯನ್ನು ಗುರುತಿಸಲಾಗಿದೆ.ಪಪಂನಲ್ಲಿ ಪ್ರಸ್ತುತ ಚುನಾಯಿತ ಆಡಳಿತಕೌನ್ಸಿಲ್ ಅಸ್ತಿತ್ವದಲ್ಲಿಲ್ಲ. ಕೋವಿಡ್ ಇರುವುದರಿಂದಸದ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ.
ಹಿಗಾಗಿ 2021ರ ಅಂತ್ಯದವರೆಗೂ ಆಡಳಿತಅಧಿಕಾರಿಗಳೇ ಪಟ್ಟಣ ಪಪಂನಲ್ಲಿಮುಂದುವರಿಯಲಿದ್ದಾರೆ.ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರುಕಳೆದ ಎರಡು ವರ್ಷಗಳ ಹಿಂದೆ 2019 ಫೆ.8ರಂದು ಮಂಡಿಸಿದ ಬಜೆಟ್‌ನಲ್ಲಿ ಹಾರೋಹಳ್ಳಿಯನ್ನು ತಾಲೂಕು ಕೇಂದ್ರವಾಗಿ ಘೋಷಣೆಮಾಡಿದ್ದರು. ಆದರೆ ಅದು ಇನ್ನೂಘೋಷಣೆಯಾಗಿಯೇ ಉಳಿದಿದೆ ಅಸ್ತಿತ್ವಕ್ಕೆ ಮಾತ್ರಬಂದಿಲ್ಲ. ಬಳಿಕ ಬಂದ ಬಿಜೆಪಿ ಸರ್ಕಾರ ಕಳೆದಆರು ತಿಂಗಳ ಹಿಂದೆ ಹಾರೋಹಳ್ಳಿ ಗ್ರಾಮಪಂಚಾಯತಿಯನ್ನು ಪಟ್ಟಣ ಪಂಚಾಯಿತಿಯಾಗಿಮೇಲ್ದರ್ಜೆಗೇರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.