5ಎ ನಾಲೆ ಜಾರಿಗೆ ತಾಂತ್ರಿಕ ಸಲಹಾ ಸಮಿತಿ ರಚನೆಗೆ ಸಮ್ಮತಿ
Team Udayavani, Dec 30, 2020, 4:52 PM IST
ಮಸ್ಕಿ: ತಾಲೂಕಿನ 30 ಹಳ್ಳಿಗರಬೇಡಿಕೆಗೆ ಕೊನೆಗೂ ಸಮ್ಮತಿಸಿದಕೃಷ್ಣಭಾಗ್ಯ ಜಲ ನಿಮಗದಅಧಿಕಾರಿಗಳು 5ಎ ನಾಲೆ ಸಮಿತಿ ಜಾರಿಗೆ ರೈತ ಮುಖಂಡರನ್ನೊಳಗೊಂಡತಾಂತ್ರಿಕ ಸಲಹಾ ಸಮಿತಿ ರಚನೆಗೆ ಸಮ್ಮತಿಸಿದರು.
ತಾಲೂಕಿನ ಪಾಮನಕಲ್ಲೂರುಆದಿಬಸವೇಶ್ವರ ದೇವಸ್ಥಾನದಎದುರಿನಲ್ಲಿ ಕಳೆದ 40 ದಿನಗಳಿಂದ ರೈತರು ಅನಿರ್ದಿಷ್ಟ ಅವಧಿಯ ಧರಣಿ ನಡೆಸಿದ್ದರು. ಉಪಮುಖ್ಯಮಂತ್ರಿ,ಜಿಲ್ಲಾ ಉಸ್ತುವಾರಿ ಸಚಿವ ಲಕ್ಷŒಣ ಸವದಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸೇರಿ ಕೆಬಿಜಿಎನ್‌ಎಲ್‌ನಮುಖ್ಯ ಅಭಿಯಂತರ ರಂಗರಾಮ್ ಸೇರಿ ಚುನಾಯಿತ ಅಧಿಕಾರಿಗಳು ಪ್ರತ್ಯೇಕ ಎರಡ್ಮೂರು ಬಾರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸುವಪ್ರಯತ್ನ ಮಾಡಿದ್ದರು. 5 ಕಾಲುವೆಅನುಷ್ಠಾನ ಕಾರ್ಯ ಸಾಧುವಲ್ಲ.ಬದಲಾಗಿ ನಂದವಾಡಗಿ ಏತ ನೀರಾವರಿ ಎರಡನೇ ಹಂತದ ಮೂಲಕವೇ ಹನಿನೀರಾವರಿ ಬದಲು, ಹರಿ ನೀರಾವರಿ ಮಾಡುವುದಾಗಿ ಭರವಸೆ ನೀಡಿದ್ದರು.
ಆದರೆ ಇದಕ್ಕೆ ವಿರೋಧ ಮಾಡಿದ್ದ ಇಲ್ಲಿನ ರೈತರು 5ಎ ಕಾಲುವೆಯೇಜಾರಿ ಮಾಡಬೇಕು ಎಂದು ಪಟ್ಟುಹಿಡಿದಿದ್ದರು. ಹೀಗಾಗಿ ಮಂಗಳವಾರ ಸ್ವತಃ ಕೆಬಿಜಿಎನ್‌ಎಲ್‌ನ ವ್ಯವಸ್ಥಾಪಕನಿರ್ದೇಶಕ ಪ್ರಭಾಕರ ಚಿಣಿ ನೇತೃತ್ವದ ಅಧಿಕಾರಿಗಳ ತಂಡ ರೈತರ ಧರಣಿ ಸ್ಥಳಕ್ಕೆ ಆಗಮಿಸಿ 5ಎ ಶಾಖಾ ಕಾಲುವೆ ಬದಲು ನಂದವಾಡಗಿ ಯೋಜನೆಯನ್ನೇ ಪುನರುತ್ಛರಿಸಿದರು. ಆದರೆ ಇದಕ್ಕೆ ಕೋಪಾವೇಶಕೊಂಡ ರೈತರು, 5ಎ ಕಾಲುವೆಯೇ ಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ತಮ್ಮ ನಿಲುವು ಬದಲಾಯಿಸಿದ ಅಧಿಕಾರಿಗಳು ಈಗ ಮತ್ತೂಂದು ಹಾದಿ ಹಿಡಿದಿದ್ದಾರೆ.
ಸಲಹಾ ಸಮಿತಿಗೆ ಒಪ್ಪಿಗೆ: ನಾರಾಯಣಪುರ ಬಲದಂಡೆಕಾಲುವೆಯ 5ಎ ಶಾಖೆ ಕಾಲುವೆ ಅನುಷ್ಠಾನಕ್ಕೆ ಇರುವ ತೊಡಕುಗಳ ಕುರಿತು ವಿವರಣೆ ನೀಡಿದ ಅಧಿಕಾರಿಗಳು ಈ ಯೋಜನೆ ಜಾರಿಗೆ ಸರಕಾರಕ್ಕೆ ಹಲವು ಸವಾಲುಗಳಿವೆ.ಈ ಯೋಜನೆ ಸಮಗ್ರ ಪರಿಶೀಲನೆ,ಜಾರಿಗೆ ಇರುವ ತಾಂತ್ರಿಕ ತೊಡಕುಗಳಅಧ್ಯಯನ ಸರಕಾರಕ್ಕೆ ಮನವರಿಕೆಮಾಡಿಕೊಡುವ ಕುರಿತು ಪ್ರತ್ಯೇಕಸಲಹಾ ಸಮಿತಿಯನ್ನು ರಚನೆ ಮಾಡುವ ವಿಷಯವನ್ನು ಕೆಬಿಜಿಎನ್‌ಎಲ್ ಎಂಡಿ ಪ್ರಭಾಕರ ಚಿಣಿ ಪ್ರಸ್ತಾಪಿಸಿದ್ದು, ಸಮಿತಿಯಲ್ಲಿ ಹೋರಾಟದ ಮುಂಚೂಣಿಯಲ್ಲಿರುವ ಪ್ರಮುಖರೈತರನ್ನು ಸೇರಿಸಿಕೊಳ್ಳಲಾಗುತ್ತದೆ. ಸಮಗ್ರ ಅಧ್ಯಯನ ಮಾಡಿ ತಾಂತ್ರಿಕವರದಿಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ಅಲ್ಲಿಯವರೆಗೂರೈತರು ಹೋರಾಟ ನಿಲ್ಲಿಸುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ರೈತರು 5ಎ ನಾಲೆ ಜಾರಿಗೆ ಲಿಖೀತ ಭರವಸೆ ನೀಡುವವರೆಗೂ ಹೋರಾಟ ಹಿಂಪಡೆಯುವುದಿಲ್ಲ. ತಾಂತ್ರಿಕ ವರದಿಯನ್ನಾದರೂ ನೀಡಿ, ಡಿಪಿಆರ್ ಆದರೂ ನೀಡಿ 5ಎ ನಾಲೆ ಜಾರಿ ಬಗ್ಗೆ ಸ್ಪಷ್ಟ ಭರವಸೆ ನೀಡುವವರೆಗೂ ಹೋರಾಟ ಕೈ ಬಿಡುವುದಿಲ್ಲ. ಅನಿರ್ದಿಷ್ಠಾವಧಿ ಧರಣಿ ಮುಂದುವರಿಸುವುದಾಗಿ ಹೇಳಿದರು.
ಚರ್ಚೆ ಬಳಿಕ ತೀರ್ಮಾನ :
ರೈತರ ಸ್ಪಷ್ಟ ಪ್ರತಿಕ್ರಿಯೆ ಬಳಿಕ ಅಧಿಕಾರಿಗಳು ಧರಣಿ ಸ್ಥಳದಿಂದ ಹೊರಟರು. ಆದರೆ ಅಧಿಕಾರಿಗಳ ಭೇಟಿ ಬಳಿಕವೂ ಧರಣಿ ಮುಂದುವರಿಸಿದ ರೈತರು,ವಿವಿಧ ಮಠಾಧಿಧೀಶರ ನೇತೃತ್ವದಲ್ಲಿ ಮುಂದಿನ ಹೋರಾಟದ ಕುರಿತು ಚರ್ಚೆ ನಡೆಸಿದರು. ಅಲ್ಲದೇ ರೈತರೆಲ್ಲರೂ ಸೇರಿ ಚರ್ಚೆ ಮಾಡಿದ ಬಳಿಕ ತಾಂತ್ರಿಕ ಸಲಹಾ ಸಮಿತಿಯಲ್ಲಿ ರೈತರು ಇರಬೇಕೋ? ಬೇಡವೋ? ಒಂದು ವೇಳೆ ಇದ್ದಿದ್ದೇ ಆದರೆ ಯಾರನ್ನು ಸೇರಿಸಬೇಕು ಎನ್ನುವ ಕುರಿತು ಚರ್ಚೆ ನಡೆಸುವುದಾಗಿ ರೈತರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.