ಸಿಎಂ ಯಡಿಯೂರಪ್ಪ ಪೂರ್ಣಾವಧಿ ಪೂರೈಸುವ ವಿಶ್ವಾಸವಿದೆ : ರಂಭಾಪುರಿ ಶ್ರೀ
Team Udayavani, Jul 19, 2021, 12:51 PM IST
ರಾಯಚೂರು: ಯಾರು ಏನೇ ಹೇಳಿದರೂ ಇರುವಂತ ಅವಧಿವರೆಗೆ ಬಿ.ಎಸ್.ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯುವರು ಎಂಬ ಆತ್ಮವಿಶ್ವಾಸವಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠಾಧಿಪತಿ ಶ್ರೀ ಡಾ.ವೀರಸೋಮೇಶ್ವರ ಭಾಗವತ್ಪಾದರು ತಿಳಿಸಿದರು.
ನಗರದ ಕಿಲ್ಲೆ ಬೃಹನ್ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಸಂಘರ್ಷ ಇರುವುದು ಸಹಜ. ಆಕಸ್ಮಿಕವಾಗಿ ಸಿಎಂ ಬದಲಾವಣೆ ಮಾಡಿದಲ್ಲಿ ಬಿಜೆಪಿಗೆ ಬಹುದೊಡ್ಡ ಹೊಡೆತ ಬೀಳುವುದು ಖಚಿತ. ಯಡಿಯೂರಪ್ಪನವರು ಇಳಿಯ ವಯಸ್ಸಿನಲ್ಲಿಯೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ನಾಯಕತ್ವಕ್ಕೆ ಎಲ್ಲ ಜನಾಂಗದವರು ಬೆಂಬಲ ನೀಡಿದ್ದಾರೆ ಎಂದರು.
ಬಿಎಸ್ ವೈ ಜನಪರ ಕಾಳಜಿ ಬಗ್ಗೆ ಯಾರು ಅಲ್ಲೆಗಳೆಯುವಂತೆ ಇಲ್ಲ. ನಾವಷ್ಟೇ ಅಲ್ಲ ಸುತ್ತೂರು ಶ್ರೀಗಳು, ಆದಿಚುಂಚನಗಿರಿಯವರು ಸಹ ಬಿಎಸ್ ವೈ ನಾಯಕತ್ವಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು.
ಬಳಿಕ ಸಮೀಪದ ಯರಮರಸ್ ಕ್ಯಾಂಪ್ ನಲ್ಲಿ ಮಲ್ಲಮ್ಮ ಕರಿಬಸನಗೌಡ ಪೊಲೀಸ್ ಪಾಟೀಲ್ ದಂಪತಿ ದಾನ ನೀಡಿದ ಸ್ಥಳದಲ್ಲಿ ಪೀಠದಿಂದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.