![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Mar 31, 2022, 2:53 PM IST
ರಾಯಚೂರು: ಅಧ್ಯಕ್ಷರ ಚುನಾವಣೆ ಕಾರಣಕ್ಕೆ ನಗರಸಭೆ ಸುತ್ತಲಿನ 500 ಮೀಟರ್‌ವರೆಗೆ ಬುಧವಾರ ಜಾರಿಗೊಳಿಸಿದ್ದ ನಿಷೇಧಾಜ್ಞೆ ಕೇವಲ ಜನರಿಗೆ ಮಾತ್ರ, ಪಕ್ಷದ ಕಾರ್ಯಕರ್ತರಿಗಲ್ಲ ಎನ್ನುವಂತಿತ್ತು.
ಕಾರ್ಯಕರ್ತರು ಕಚೇರಿ ಮುಂಭಾಗದಲ್ಲೇ ಗುಂಪುಗೂಡಿದರೂ ಪೊಲೀಸರು ಕಂಡು ಕಾಣದಂತಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು. ಚುನಾವಣೆ ಮುನ್ನ ಮುಖ್ಯರಸ್ತೆ ಬಂದ್ ಮಾಡಿ ಒಬ್ಬರನ್ನು ಬಿಟ್ಟುಕೊಳ್ಳದ ಪೊಲೀಸರು ಚುನಾವಣೆ ಶುರುವಾಗುತ್ತಿದ್ದಂತೆ ಮೌನಕ್ಕೆ ಶರಣಾದರು.
ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಬಣ್ಣ ಎರಚಿ ಸಂಭ್ರಮಿಸುತ್ತಿದ್ದರೂ ಪೊಲೀಸರು ಸುಮ್ಮನೆ ನಿಂತಿದ್ದರು. ಕೊನೆಗೆ ಸಿಪಿಐ ಫಸಿಯುದ್ದೀನ್ ಮೈಕ್ ಹಿಡಿದುಕೊಂಡು ಬಂದು ನಿಷೇಧಾಜ್ಞೆ ಜಾರಿಯಲ್ಲಿದೆ. ಮುಂದೆ ಹೋಗಿ ಎಂದು ಕೂಗಿದರು. ಆಮೇಲೆ ಪೊಲೀಸರು ಜನರನ್ನು ಚದುರಿಸಲು ಮುಂದಾದರು. ಒಂದೇ ಒಂದು ಬೈಕ್ ಬಿಡದ ಪೊಲೀಸರು ಮುಖಂಡರ ಹತ್ತಾರು ಕಾರುಗಳನ್ನು ರಸ್ತೆ ಮಧ್ಯೆ ನಿಲ್ಲಿಸಿದರೂ ಕ್ಯಾರೆ ಎನ್ನಲಿಲ್ಲ.
ನಗರಸಭೆ ಅಧ್ಯಕ್ಷರ ಚುನಾವಣೆಗೆ ಪ್ರಕ್ರಿಯೆಗೆ ಸಂಬಂಧಿ ಸಿದಂತೆ ಕಲಬುರಗಿಯ ಹೈಕೋರ್ಟ್ ಪೀಠವು ಅಧ್ಯಕ್ಷರ ಆಯ್ಕೆ ಸಂಬಂಧ ಗುಪ್ತವಾಗಿರಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಸೂಚಿಸಿದೆ. ಈ ಹಿಂದೆಯೂ ನ್ಯಾಯಾಲಯದ ಮಧ್ಯಂತರ ಆದೇಶದಂತೆ ಈಗಲೂ ನೀಡಿದೆ. ಮತದಾನ ಸೇರಿದಂತೆ ಚುನಾವಣೆ ಸಂಪೂರ್ಣ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ನಂತರ ಅಧ್ಯಕ್ಷರ ಆಯ್ಕೆ ಘೋಷಿಸಲಾಗುವುದು. –ರಜನಿಕಾಂತ, ಚುನಾವಣಾಧಿಕಾರಿ
You seem to have an Ad Blocker on.
To continue reading, please turn it off or whitelist Udayavani.