ಬೆಂಬೆಲೆ ಹೆಚ್ಚಳ ನಿರೀಕ್ಷೆಯಲ್ಲಿ ತೊಗರಿ ಬೆಳೆಗಾರರು

ಕೇಂದ್ರ ಹೆಚ್ಚಿಸಿದರೂ ನೋಂದಣಿ ಹೆಚ್ಚಾಗಿಲ್ಲ. 12500 ಆಸು ಪಾಸಿಗೆ ನಿಂತು ಹೋಗಿದೆ.

Team Udayavani, Feb 3, 2021, 4:04 PM IST

ಬೆಂಬೆಲೆ ಹೆಚ್ಚಳ ನಿರೀಕ್ಷೆಯಲ್ಲಿ ತೊಗರಿ ಬೆಳೆಗಾರರು

ರಾಯಚೂರು: ತೊಗರಿ ಬೆಂಬಲ ಬೆಲೆ 6ರಿಂದ 8 ಸಾವಿರ ರೂ.ಗೆ ಹೆಚ್ಚಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ ಕತ್ತಿ ನೀಡಿದ್ದಾರೆ ಎನ್ನಲಾದ ಹೇಳಿಕೆ ರೈತರಲ್ಲಿ ಆಸೆಯ ಜತೆಗೆ ಗೊಂದಲ ಸೃಷ್ಟಿಸಿದೆ. ಹೀಗಾಗಿ ಖರೀದಿ ಕೇಂದ್ರಗಳಿಗೆ ರೈತರು ತೊಗರಿ ಮಾರುವ ಬದಲು ಬೆಲೆ ಹೆಚ್ಚಳ ಯಾವಾಗ ಎಂದು ಕೇಳಲು ಬರುವಂತಾಗಿದೆ.

ಸರ್ಕಾರ ಜಿಲ್ಲೆಯಲ್ಲಿ ಈ ಬಾರಿ 42 ತೊಗರಿ ಖರೀದಿ ಕೇಂದ್ರ ಆರಂಭಿಸಿದೆ. ಚೀಲಗಳಿಗೆ ಕ್ಯೂಆರ್‌ ಕೋಡ್‌ ಅಳವಡಿಸಿದ್ದರಿಂದ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ
ತಡವಾಗಿದ್ದು, ಫೆ.1ರಿಂದ ಶುರುವಾಗಿದೆ. ಖರೀದಿ ಕೇಂದ್ರಕ್ಕಿಂತ ಮುಕ್ತ ಮಾರುಕಟ್ಟೆಯಲ್ಲೇ ಕ್ವಿಂಟಲ್‌ ಗೆ 500 ರೂ. ದರ ಹೆಚ್ಚಾಗಿರುವ ಕಾರಣ ರೈತರು ಖರೀದಿ ಕೇಂದ್ರಗಳ ಆಸೆ ಕೈ ಬಿಟ್ಟಿದ್ದರು. ಈಚೆಗೆ ಸಚಿವರು ತೊಗರಿ ಬೆಲೆ ಹೆಚ್ಚಳದ ಕುರಿತು ನೀಡಿದ ಮುನ್ಸೂಚನೆ; ರೈತರಲ್ಲಿ ಮತ್ತೆ ಜಿಜ್ಞಾಸೆ ಮೂಡಿಸಿದೆ.

ಉಭಯ ಸಂಕಟದಲ್ಲಿ ರೈತರು: ಒಂದು ತಿಂಗಳ ಹಿಂದೆಯೇ ನೋಂದಣಿ ಮಾಡಿಸಿದರೂ ಕ್ಯೂಆರ್‌ ಕೋಡ್‌ ವಿಳಂಬದಿಂದ ತೊಗರಿ ಖರೀದಿ ಶುರುವಾಗಿರಲಿಲ್ಲ. ಹೇಗಿದ್ದರೂ ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ಇದೆಯಲ್ಲ ಎಂದು ಸಾಕಷ್ಟು ರೈತರು ಈಗಾಗಲೇ ಮಾರಾಟ ಮಾಡಿದ್ದಾರೆ. ಸಚಿವರು ತೊಗರಿ ಬೆಲೆ ಹೆಚ್ಚಳದ ಹೇಳಿಕೆ ನೀಡಿದ್ದಾರೋ ಆಗಿನಿಂದ ರೈತರಿಗೆ ಗೊಂದಲ ಏರ್ಪಟ್ಟಿದೆ. ಈ ಸುದ್ದಿಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ತೊಗರಿ ಮಾರಬೇಕೆಂದವರು ಹಿಂದೇಟು ಹಾಕುವಂತಾಗಿದೆ.

ಖರೀದಿ ಕೇಂದ್ರಗಳು ಭಣ ಭಣ: ಮೊದಲ ಬಾರಿಗೆ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳು ಭಣಗುಡುತ್ತಿವೆ. ಈ ಬಾರಿ ಪ್ರತಿ ಪಹಣಿಗೆ 10ರ ಬದಲು 20 ಕ್ವಿಂಟಲ್‌ ತೊಗರಿ ಖರೀದಿಸಲಾಗುತ್ತಿದೆ. ಖರೀದಿ ಕೇಂದ್ರಗಳನ್ನು 35ರಿಂದ 42ಕ್ಕೆ ಹೆಚ್ಚಿಸಲಾಗಿದೆ. ಖರೀದಿ ಶುರುವಾದರೂ ರೈತರು ಬಾರದ ಕಾರಣ ಕೇಂದ್ರಗಳು ಭಣಗುಡುತ್ತಿವೆ. ಕಳೆದ ವರ್ಷ ಖರೀದಿ ಕೇಂದ್ರಗಳಲ್ಲೇ 2.10 ಲಕ್ಷ ಕ್ವಿಂಟಲ್‌ ತೊಗರಿ ಖರೀದಿಯಾಗಿತ್ತು.

ಎಪಿಎಂಸಿಗೂ ಕುಗ್ಗಿದ ಆವಕ ಸರ್ಕಾರ 6 ಸಾವಿರ ರೂ. ಬೆಂಬಲ ಬೆಲೆ ನಿಗದಿ ಮಾಡಿದ್ದರೆ, ಮುಕ್ತ ಮಾರುಕಟ್ಟೆಯಲ್ಲಿ ಈಗಾಗಲೇ 6,500 ರೂ. ದರವಿದೆ. ಮಾರುಕಟ್ಟೆಗೆ ಆವಕ ಕೂಡ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಹೀಗಾಗಿ ವರ್ತಕರು ಹಿಂದಿನಂತೆ ಅರ್ಧ ಹಣ ಹಿಡಿದು ಕೊಡದೆ ಪೂರ್ತಿ ಹಣ ನೀಡುತ್ತಿದ್ದಾರೆ. ಇದು ಕೂಡ ರೈತರಿಗೆ ವರವಾಗಿದೆ. ಕೆಲ ದಿನಗಳ ಹಿಂದೆ ಎಪಿಎಂಸಿಗೆ ನಿತ್ಯ 7-8 ಸಾವಿರ ಕ್ವಿಂಟಲ್‌ ತೊಗರಿ ಆವಕವಾಗುತ್ತಿದ್ದರೆ, ಈಗ 5100 ಕ್ವಿಂಟಲ್‌ ಬರುತ್ತಿದೆ.

ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರ ಹೆಚ್ಚಿಸಿದರೂ ನೋಂದಣಿ ಹೆಚ್ಚಾಗಿಲ್ಲ. 12500 ಆಸು ಪಾಸಿಗೆ ನಿಂತು ಹೋಗಿದೆ. ಆದರೆ, ಸಚಿವರು ಬೆಲೆ ಹೆಚ್ಚಿಸುವ ಕುರಿತು ಹೇಳಿಕೆ ನೀಡಿದ್ದು, ಬೆಲೆ ಯಾವಾಗ ಹೆಚ್ಚಾಗಲಿದೆ ಎಂದು ರೈತರು ನಿತ್ಯ ಕೇಳುತ್ತಿದ್ದಾರೆ. ಈ ಕುರಿತು ನಮಗೆ ಯಾವುದೇ ಆದೇಶ ಬಂದಿಲ್ಲ. ಈಗ ನಾವು ಹಳೇ ದರಕ್ಕೆ ಖರೀದಿಸಲು ಸಿದ್ಧರಿದ್ದರೂ ರೈತರು ಮಾತ್ರ ಕೇಂದ್ರಗಳತ್ತ ಸುಳಿಯುತ್ತಿಲ್ಲ.
ನಾಗರಾಜ್‌, ಮಾರ್ಕೆಂಟಿಗ್‌ ಫೆಡರೇಶನ್‌, ರಾಯಚೂರು

ಈಗಾಗಲೇ ತೊಗರಿ ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಿದೆ. ಈಗ 8 ಸಾವಿರ ರೂ. ಬೆಲೆ ನಿಗದಿ ಮಾಡುವ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಬೆಲೆ ಹೆಚ್ಚಿಸುವುದಾದರೆ ಸರ್ಕಾರ ಕೂಡಲೇ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದರೆ ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದು, ರೈತರು ಅಲ್ಲಿಯೇ ಮಾರಾಟ ಮಾಡುತ್ತಾರೆ.
ಷಣ್ಮುಖಯ್ಯ ಸ್ವಾಮಿ, ರೈತ, ದೇವಸುಗೂರು

*ಸಿದ್ದಯ್ಯಸ್ವಾಮಿ ಕುಕುನೂರು

ಟಾಪ್ ನ್ಯೂಸ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

ರಾಯಚೂರು: ರೈತರ ನಿದ್ದೆಗೆಡಿಸಿದ ಬೆಳೆದು ನಿಂತ “ಬಿಳಿ ಬಂಗಾರ’ ಹತ್ತಿ

3-raichur

Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

1-wewqewq

Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-asss

Udupi; ಸಾಧಕ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮ

2(7

Udupi; ಎಂಜಿಎಂ ಅಮೃತೋತ್ಸವ: ಕಣ್ಮನ ಸೆಳೆದ ವಸ್ತು ಪ್ರದರ್ಶನ

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.