ಜೇನು ಕೃಷಿ ಲಾಭದಾಯಕ ಉದ್ದಿಮೆ
Team Udayavani, Aug 21, 2017, 3:01 PM IST
ಲಿಂಗಸುಗೂರು: ತಾಲೂಕಿನ ನಾಗರಹಾಳ ಗ್ರಾಮದಲ್ಲಿ ವಿಶ್ವ ಜೇನು ಕೃಷಿ ದಿನಾಚರಣೆ ಹಾಗೂ ಸೂರ್ಯಕಾಂತಿ ಬೆಳೆ
ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು. ಕೃಷಿ ವಿಸ್ತರಣಾ ಘಟಕದ ಮುಖಂಡ ಡಾ| ಶ್ಯಾಮರಾವ್ ಕುಲಕರ್ಣಿ ಮಾತನಾಡಿ, ಜೇನು ಕೃಷಿ ಎಲ್ಲ ಪ್ರದೇಶಗಳ ಉಪ ಕಸುಬಾಗಿ ಅಥವಾ ಮುಖ್ಯ ಕಸುಬಾಗಿ ಕಡಿಮೆ ಬಂಡವಾಳದಿಂದ ನಿರ್ವಹಿಸಬಹುದಾದ ಒಂದು ಲಾಭಾದಾಯಕ ಉದ್ದಿಮೆಯಾಗಿದೆ. ಜೇನು ಕೃಷಿಗೆಂದೇ ಪ್ರತ್ಯೇಕ ಜಮೀನು, ನೀರು, ವಿದ್ಯುತ್ಛಕ್ತಿಯ ಅವಶ್ಯಕತೆ ಇಲ್ಲ. ಅಲ್ಲದೆ ಈ ಉದ್ದಿಮೆಯು ಅರಣ್ಯ, ಕೃಷಿ ಪಶುಪಾಲನೆ ಮುಂತಾದ ಯಾವುದೇ ಸಮ್ಮಿಶ್ರ ಕೃಷಿ ಪದ್ಧತಿಗಳ ಸಂಪನ್ಮೂಲಗಳಿಗೆ ಸ್ಪರ್ಧೆಯೊಡ್ಡದೇ, ನಿಸರ್ಗದಲ್ಲಿ ವ್ಯರ್ಥವಾಗಬಹುದಾದ ಸಂಪನ್ಮೂಲಗಳಾದ ಪರಾಗ ಮತ್ತು ಮಕರಂದವನ್ನು ಬಳಸಿಕೊಂಡು ಕೃಷಿಕರಿಗೆ ಲಾಭವನ್ನು ತಂದುಕೊಡುತ್ತದೆ. ಸುಲಭ ತಾಂತ್ರಿಕತೆ ಇರುವ ಇದನ್ನು ಆಸಕ್ತಿ ಇರುವ ಯಾರು ಬೇಕಾದರೂ ಮಾಡಬಹುದು ಎಂದು ಹೇಳಿದರು. ಜೇನು ಕುಟುಂಬದ ಮುಖ್ಯ ಉತ್ಪನ್ನವಾದ ಜೇನುತುಪ್ಪವು ಹಲವಾರು ಔಷಧಿ ಗುಣಗಳನ್ನು ಹೊಂದಿದ್ದು, ಇದರ ನಿಯಮಿತ ಸೇವನೆ ಆರೋಗ್ಯ ವರ್ಧಿಸುತ್ತದೆ. ಜೇನುಗೂಡಿನಿಂದ ದೊರೆಯಬಹುದಾದ ಇನ್ನಿತರ ಉತ್ಪನ್ನಗಳಾದ ಮೇಣ, ಜೇನುಅಂಟು, ಜೇನು ವಿಷ, ಪರಾಗ, ಮುಂತಾದವು ಕೂಡಾ ಕೃಷಿಕರ ಆದಾಯ ಹೆಚ್ಚಿಸುವಲ್ಲಿ ಸಹಕಾರಿಯಾಗಬಲ್ಲವು ಎಂದರು. ರಾಷ್ಟ್ರೀಯ ಎಣ್ಣೆಕಾಳು ಹಾಗೂ ತಾಳೆ ಬೆಳೆ ಯೋಜನೆ ಅಡಿಯಲ್ಲಿ ಸೂರ್ಯಕಾಂತಿ ಉತ್ಪಾದಕತೆ ಹೆಚ್ಚಿಸುವ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಡುಗಡೆಗೊಂಡ ಆಧುನಿಕ ತಂತ್ರಜ್ಞಾನಗಳಾದ ಸುಧಾರಿತ ಸಂಕರಣ ತಳಿಗಳು, ಜೈವಿಕ ಗೊಬ್ಬರದಿಂದ ಬೀಜೋಪಚಾರ, ಸಮತೋಲಿತ ಪೋಷಕಾಂಶಗಳ ಬಳಕೆ, ಸಮಗ್ರ ಪೀಡೆ ನಿರ್ವಹಣಾ ಕ್ರಮಗಳನ್ನು ಅನುಸರಿಸಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದರು. ಕೀಟ ತಜ್ಞರಾದ ಡಾ| ರೇಣುಕಾ ಬಿರಾದಾರ, ಗ್ರಾಮದ ಮುಖಂಡರಾದ ಕರಿಯಪ್ಪ ಕನಕೇರಿ, ದೊಡ್ಡಪ್ಪ ರಾಂಪುರು, ಮುರುಗೇಶ, ಬಾಲಪ್ಪ ಕನಕೇರಿ, ನಿಂಗಪ್ಪ, ದ್ಯಾಮಣ್ಣ ಬಡಿಗೇರ, ಸುಭಾಶ, ಕರಿಯಪ್ಪ ಸೇರಿದಂತೆ ರೈತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.