ಬಿಜೆಪಿಗೆ ಸೋಲಿನ ಭೀತಿ: ಪ್ರತಾಪಗೌಡ
Team Udayavani, May 11, 2018, 1:44 PM IST
ಬಳಗಾನೂರು: ರಾಜ್ಯದಲ್ಲಿ ಬಿಜೆಪಿ ಸೋಲಿನ ಭೀತಿಯಿಂದ ಹತಾಶೆಗೊಂಡಿದ್ದು, ಅಭಿವೃದ್ಧಿ ಬಗ್ಗೆ ಮಾತನಾಡಲು ವಿಷಯಗಳಿಲ್ಲದೆ ಬಿಜೆಪಿ ನಾಯಕರು ಸುಳ್ಳಿನ ಕಂತೆಗಳನ್ನು ಹೇಳುತ್ತ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಪ್ರತಾಪಗೌಡ ಪಾಟೀಲ ಟೀಕಿಸಿದರು.
ಪಟ್ಟಣದಲ್ಲಿ ಬುಧವಾರ ರೋಡ್ ಶೋ ನಡೆಸಿ ಮತಯಾಚಿಸಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಮುಖಂಡರು ಅಂತರ್ಜಾಲ ತಾಣವನ್ನು ಬಳಸಿಕೊಂಡು ಕ್ಷುಲ್ಲಕ ವಿಷಯಕ್ಕೆ ಸಮಾಜದಲ್ಲಿನ ಶಾಂತಿಗೆ ಭಂಗ
ತರುವಂತ ಕಾರ್ಯದಲ್ಲಿ ತೊಡಗಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡುವುದಾದರೆ ನೇರವಾಗಿ ಬನ್ನಿ ಎಂದು ಸವಾಲು ಹಾಕಿದ ಶಾಸಕರು ಇಂತಹ ಅಪಪ್ರಚಾರದಲ್ಲಿ ತೊಡಗುವ ಕೋಮುವಾದಿ ಬಿಜೆಪಿಗೆ ಮೇ 12ರಂದು ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ಗೆ ಬೆಂಬಲಿಸಿ ಬಿಜೆಪಿಗೆ ಉತ್ತರ ನೀಡಬೇಕು ಎಂದರು.
ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಎರಡು ಬಾರಿ ಶಾಸಕನಾದ ತಾವು ಹೆಚ್ಚಿನ ಅನುದಾನ ತಂದು ಕ್ಷೇತ್ರದಲ್ಲಿ ನಿರೀಕ್ಷೆ ಮೀರಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ಕಾಂಗ್ರೆಸ್ 2013ರ ಚುನಾವಣೆಯಲ್ಲಿ ನೀಡಿದ ಭರವಸೆಗಳನನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ. ರೈತರ ಸಾಲ ಮನ್ನಾ, ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಅನ್ನಭಾಗ್ಯ, ವಿದ್ಯಾರ್ಥಿಗಳಿಗಾಗಿ ಕ್ಷೀರಭಾಗ್ಯ ವಿದ್ಯಾಸಿರಿ ಸೇರಿ ಅನೇಕ ಜನಪರ ಯೋಜನೆಗಳನ್ನು ನೀಡಿದ್ದು ಜನಮೆಚ್ಚಿದ ಸರಕಾರವಾಗಿದೆ ಎಂದರು.
ಈ ಕ್ಷೇತ್ರದಲ್ಲಿ ನಂದವಾಡಗಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡುವ ಮೂಲಕ ರೈತರ ಬಹುದಿನಗಳ ಬೇಡಿಕೆ ಈಡೇರಿತು. ಕ್ಷೇತ್ರದ ಸಾಕಷ್ಟು ಭೂಮಿ ಈ ಯೋಜನೆಯಿಂದ ನೀರಾವರಿಗೆ ಒಳಪಡಲಿದೆ. ನೂತನ ತಾಲೂಕು ರಚನೆ, ಸೇರಿ ಕ್ಷೇತ್ರದಲ್ಲಿ ಬಹುತೇಕ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಆದ್ಯತೆ ನೀಡಲಾಗಿದ್ದು, ಆರು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ.
ಸಿಂಧನೂರು-ಮಸ್ಕಿ, ಸಿಂಧನೂರು-ತಾವರಗೇರಾ ಹೆದ್ದಾರಿ ಅಭಿವೃದ್ಧಿ, ಬಳಗಾನೂರು ತುರ್ವಿಹಾಳ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಮಸ್ಕಿ ಬಳಗಾನೂರ ರಸ್ತೆ ಸುದಾರಣೆ ಸೇರಿ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದೇನೆ. ಮತದಾರರು ತಮಗೆ ಮತ ನೀಡುವ ಮೂಲಕ ರಾಜ್ಯದಲ್ಲಿ ಮತ್ತೇ ಕಾಂಗ್ರೆಸ್ ಅಧಿಕಾರಕ್ಕೆ ತಂದು ದೇಶವನ್ನು ಉಳಿಸಬೇಕು ಎಂದು ವಿನಂತಿಸಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಪ್ರಧಾನಿ ಮೋದಿ ಸರಕಾರ ಜನರಿಗೆ ಸುಳ್ಳು ಭರವಸೆ ನೀಡುತ್ತಿದೆ. ಕೋಮು ಗಲಭೆ ಸೃಷ್ಟಿಸಿ ದೇಶದಲ್ಲಿ ಅಶಾಂತಿ ನಿರ್ಮಿಸುತ್ತಿದೆ. ಆದ್ದರಿಂದ ಮತದಾರರು ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಪ್ರತಾಪಗೌಡರಿಗೆ ಹ್ಯಾಟ್ರಿಕ್ ಗೆಲುವು ದೊರಕಿಸಬೇಕು.
ಬಿಜೆಪಿ ತಿರಸ್ಕರಿಸಬೇಕು ಎಂದರು. ಮುಖಂಡರಾದ ಮಲ್ಲನಗೌಡ ಮಸ್ಕಿ, ಅಂದಾನೆಪ್ಪ ಗುಂಡಳ್ಳಿ, ಎಪಿಎಂಸಿ ಮಾಜಿ ನಿರ್ದೇಶಕ ಶೇಖರಪ್ಪ ಮೇಟಿ, ಡಾ| ಬಸವಲಿಂಗಪ್ಪ ದಿವಟರ, ಪಪಂ ಅಧ್ಯಕ್ಷೆ ಗಂಗಮ್ಮ ಲಡ್ಡೀನ, ಕಾಂಗ್ರೆಸ್ ತಾಲೂಕು ಮಹಿಳಾ ಅಧ್ಯಕ್ಷೆ ನಾಗಲಕ್ಷ್ಮೀ, ಬಸಪ್ಪ ಬ್ಯಾಳಿ, ಗ್ರಾಪಂ ಅಧ್ಯಕ್ಷ ಯಂಕಣ್ಣ ಕಮತರ, ಮಸ್ಕಿ ಯುವ ಕಾಂಗ್ರೆಸ್ ಅಧ್ಯಕ್ಷ ವೀರೇಶ ಕಮತರ, ಮಸ್ಕಿ ತಾಲೂಕು ಗ್ರಾಮೀಣ ಘಟಕದ ಬಸವರಾಜಸ್ವಾಮಿ ಹಸಮಕಲ್, ನಿರುಪಾದೆಪ್ಪ
ವಕೀಲರು, ಸೇರಿ ಗೌಡನಬಾವಿ, ಉದಾºಳ ಸುತ್ತಲಿನ ಗ್ರಾಮದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.