ಬಿಎಸ್ಸೆನ್ನೆಲ್ ಉಳಿವಿಗೆ ಹೋರಾಟ ಅಗತ್ಯ
Team Udayavani, Sep 11, 2017, 4:42 PM IST
ಲಿಂಗಸುಗೂರು: ಕೇಂದ್ರ ಸರಕಾರ ಹಾಗೂ ಹಿರಿಯ ಅಧಿಕಾರಿಗಳು ಬಿಎಸ್‌ಎನ್‌ಎಲ್ ಮುಚ್ಚುವ ಹುನ್ನಾರ ನಡೆಸುತ್ತಿದ್ದು, ಬಿಎಸ್ಸೆನ್ನೆಲ್ ಉಳಿವಿಗೆ ಹೋರಾಟ ಅಗತ್ಯವಾಗಿದೆ ಎಂದು ಬಿಎಸ್‌ಎನ್‌ಎಲ್ ನೌಕರರ
ಸಂಘದ ಕರ್ನಾಟಕ ವಲಯ ಕಾರ್ಯದರ್ಶಿ ಸಿ.ಕೆ. ಗುಂಡಣ್ಣ ಹೇಳಿದರು.
ಪಟ್ಟಣದ ಐಎಂಎ ಸಭಾಂಗಣದಲ್ಲಿ ಬಿಎಸ್‌ಎನ್ ಎಲ್ ನೌಕರರ ಸಂಘ ರವಿವಾರ ಆಯೋಜಿಸಿದ್ದ 6ನೇ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು, 2000ರಿಂದ ಈಚೆಗೆ ಬಿಎಸ್‌ಎನ್‌ಎಲ್ ಕಾರ್ಯಾರಂಭ ಮಾಡಲು ಯೋಜಿಸಿತ್ತು. ಆದರೆ ಇದಕ್ಕೂ ಮುಂಚೆ ಕೆಲ ಖಾಸಗಿ ಕಂಪನಿಗಳಿಗೆ ಕಾರ್ಯಾರಂಭ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿದ್ದರಿಂದ ಬಿಎಸ್ಸೆನ್ನೆಲ್ ನಷ್ಟ ಅನುಭವಿಸುವಂತಾಗಿದೆ. ಕೇಂದ್ರ ಸರಕಾರ ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಖಾಸಗಿ ಕಂಪನಿಗಳ ವ್ಯಾಮೋಹದಿಂದಾಗಿ ನಿಗಮದಲ್ಲಿ ಬೇಕಂತಲೇ ಕೆಲ ದೋಷಗಳನ್ನು ಹುಟ್ಟುಹಾಕಿ, ಬೇರೆ ಕಂಪನಿಯತ್ತ ಗ್ರಾಹಕರು ಗಮನಹರಿಸುವ ಕೆಲಸ ಮಾಡುತ್ತಿದ್ದಾರೆ. ಸರಕಾರ ನಿಗಮಕ್ಕೆ ಟೆಲಿಫೋನ್, ಬ್ರಾಡ್‌ಬ್ಯಾಂಡ್ ಮೋಡೆಮ್, ಕೇಬಲ್ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಪೂರೈಸುತ್ತಿಲ್ಲ. ಅಲ್ಲದೇ ಆದಾಯ ಬರುತ್ತಿಲ್ಲ ಎಂದು ನೌಕರರ ಮೇಲೆ ಹರಿಹಾಯುವುದು ಸರಿಯಲ್ಲ. ನಿಗಮ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ ಎಂದರು.
ರಾಯಚೂರಿನಲ್ಲಿ ನಿಗಮದ ನೌಕರರಿಗಾಗಿ 35 ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಇವು ಶಿಥಿಲಾವಸ್ಥೆಯಲ್ಲಿದ್ದು, ಹಂದಿಗಳ ತಾಣವಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೆ ನೀವೇ ದುರಸ್ತಿ ಮಾಡಿಸಿಕೊಳ್ಳಿ ಎಂದು ಬೇಜವಾಬ್ದಾರಿಯಿಂದ ಜಾರಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ನಿಗಮದ ನೌಕರರನ್ನು ಕೀಳುಮಟ್ಟದಿಂದ ಸರಕಾರ ಕಾಣುತ್ತಿದೆ ಎಂದು ಆರೋಪಿಸಿದರು.
ಟೆಲಿಕಾಂ ಜಿಲ್ಲೆಯ ಪ್ರಧಾನ ವ್ಯವಸ್ಥಾಪಕ ಜೆ.ನಿವಾಸರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಎಸ್.ಆಲೂರು, ಹಿರಿಯ ಮುಖಂಡ ಎನ್.ಪಿ. ಜಹಾಗೀರದಾರ, ಬಿ.ರಾಮಚಂದ್ರ, ಲಾಲಪ್ಪ, ಕೆ.ಗುರುರಾಜ, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ, ಜಿಲ್ಲಾ ಕಾರ್ಯದರ್ಶಿ ಡಿ.ಬಿ.ಸೋಮನಮರಡಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.