ಜ್ಞಾನ ಸಮೃದ್ಧಿಗೆ ಬುದ್ಧ ಮಾರ್ಗ ಅಗತ್ಯ
Team Udayavani, Jan 1, 2019, 9:31 AM IST
ದೇವದುರ್ಗ: ಜ್ಞಾನ ಸಮೃದ್ಧಿಗೆ ಬುದ್ಧನ ಮಾರ್ಗ ಬಹಳ ಅಗತ್ಯವಾಗಿದೆ ಎಂದು ಪೂಜ್ಯ ಬಂಥೆ ದಮಾನಂದ ಥೇರೂ ಅಣದೂರು ಬೀದರ್ ಹೇಳಿದರು. ಪಟ್ಟಣದ ಸಾರ್ವಜನಿಕ ಕ್ಲಬ್ ಆವರಣದಲ್ಲಿ ಹಮ್ಮಿಕೊಂಡಿದ ಧಮ್ಮ ದೀಪ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಂಚಶೀಲ ಸಮಾಜಕ್ಕೆ ಒಂದು ಉತ್ತಮ ಸಂದೇಶ ಸಾರಿದೆ. ಪಂಚಶೀಲ ತತ್ವಗಳನ್ನು ಬುದ್ಧನ ಅನುಯಾಯಿಗಳು ತಿಳಿದುಕೊಂಡು
ಬೇರೊಬ್ಬರಿಗೆ ತಿಳಿಸುವ ಕೆಲಸವಾಗಬೇಕು ಎಂದರು.
ಪ್ರಬುದ್ಧ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು. ಮಾನವ ಧರ್ಮ ಬಹಳ ಪವಿತ್ರವಾದದ್ದು. ಮೋಸ, ವಂಚನೆ ಮಾಡದೇ ಬೇರೊಬ್ಬರಿಗೆ ಆದರ್ಶ ವ್ಯಕ್ತಿಗಳಾಗಿ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು. ಡಾ| ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆ ಮೂಲಕ ಅನ್ಯ ಜಾತಿಗೆ ಸಮಾನತೆ ನೀಡಿದ್ದಾರೆ. ವಿಶ್ವ ಸಂಸ್ಥೆಯೇ ಡಾ| ಬಿ.ಆರ್. ಅಂಬೇಡ್ಕರ್ ಅವರನ್ನು ಮಹಾಜ್ಞಾನಿ ಎಂದು ಬಣ್ಣಿಸಿದೆ. ಇಂಥ ವ್ಯಕ್ತಿಯ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ನಡೆಯಬೇಕು.
ಹಿಂದುಳಿದ ಕುಟುಂಬಗಳು ಮೊದಲು ಮಕ್ಕಳಿಗೆ ಶಿಕ್ಷಣ ನೀಡಿ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಂದೆ ಬರಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಗಾಯಕಿ ಕಾಳಮ್ಮ ಎಸ್.ಛಲುವಾದಿ ಸೇರಿ ಹಲವು ಸಾಧಕರನ್ನು ಗೌರವಿಸಲಾಯಿತು. ಬೌದ್ಧ ಸಾಹಿತಿ
ದೇವೇಂದ್ರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಅಭಿಯೋಜಕರಾದ ಮೀನಾಕುಮಾರಿ ರಾಮದುರ್ಗ, ಎಂ.ಆರ್.ಭೇರಿ, ಗೌತಮ ಕಟ್ಟಿಮನಿ
ಶಕ್ತಿನಗರ, ಪುಣೆ ಮಹಾನಗರ ಮಾಜಿ ಸದಸ್ಯ ಹುಲಿಗೇಶ, ನರಸಿಂಹಲು ಜವಳಗೇರಾ, ಪಾಂಡುರಂಗ ಕಲಬುರಗಿ, ಪ್ರಕಾಶ ಪಾಟೀಲ ವಕೀಲ, ರಾಘವೇಂದ್ರ ಕೋಲ್ಕರ್, ಬಸವನಗೌಡ ದೇಸಾಯಿ, ಕಸಾಪ ಅಧ್ಯಕ್ಷ ಮೈನುದ್ದೀನ ಕಾಟಮಳ್ಳಿ, ತಾಪಂ ಸದಸ್ಯೆ ಪದ್ಮಾವತಿ, ಪರಮಾನಂದ
ದೇಸಾಯಿ, ಪಿಎಸ್‌ಐ ಅಗ್ನಿ ಸೇರಿ ಇತರರು ಇದ್ದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬುದ್ಧ, ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆಗೆ ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಸದಾಶಿವ ರಾತ್ರಿಕರ್ ಚಾಲನೆ ನೀಡಿದರು. ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕ ಕ್ಲಬ್ ಆವರಣಕ್ಕೆ ಆಗಮಿಸಿತು. ಮೆರವಣೆಗೆಯಲ್ಲಿ ಡಾ| ಬಿ.ಆರ್. ಅಂಬೇಡ್ಕರ್, ಬುದ್ಧ ಘೋಷಣೆಗಳನ್ನು ಕೂಗಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.