ಹಲ್ಲಿನ ಆರೋಗ್ಯಕ್ಕೆ ಕಾರ್ಡ್
Team Udayavani, Dec 20, 2021, 5:14 PM IST
ಸಿಂಧನೂರು: ಇಲ್ಲಿನ ಸ್ತ್ರೀಭವನ ಸಭಾಂಗಣದಲ್ಲಿ ರವಿವಾರ ನವೀನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ 700 ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಲ್ತ್ ಕಿಟ್ ವಿತರಿಸಲಾಯಿತು.
ಪತ್ರಕರ್ತ ಡಿ.ಎಚ್. ಕಂಬಳಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಜೀವ ಒತ್ತೆಯಿಟ್ಟು ಸೇವೆ ಸಲ್ಲಿಸಿದವರನ್ನು ಗುರುತಿಸಿ, ಅವರ ಆರೋಗ್ಯ ಕಾಳಜಿ ತೋರುವ ಶಿಬಿರ ನಡೆಸಿದ್ದು ಶ್ಲಾಘನೀಯ. ಡೆಂಟಲ್ ಕಿಟ್ ವಿತರಿಸಿದ ಬಳಿಕ ವಾರ್ಷಿಕ ಶೇ.40 ರಿಯಾಯಿತಿಯಲ್ಲಿ ಸೇವೆ ಸಲ್ಲಿಸಲು ಡಾ| ನವೀನ್ ಮುಂದಾಗಿದ್ದು, ಕೊರೊನಾ ವಾರಿಯರ್ Õಗೆ ನೀಡಿದ ಗೌರವ ಎಂದರು.
ಡಾ| ನವೀನ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಏನಾದರೂ ವೈದ್ಯಕೀಯ ನೆರವು ನೀಡಬೇಕೆಂಬ ಉದ್ದೇಶವಿತ್ತು. ವಾರಿಯರ್ ಗುರುತಿಸಿ ಅವರಿಗೆ ಹಲ್ಲಿನ ಚಿಕಿತ್ಸೆಗೆ ಸಂಬಂಧಿಸಿ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಈ ವೇಳೆ ವೈದ್ಯರಾದ ಡಾ| ಶರಣಬಸವ ದೇವರೆಡ್ಡಿ, ಡಾ| ನಾಗರಾಜ್ ಕಾಟ್ವಾ, ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಬೆನ್ನೂರು, ಜೀವ ಸ್ಪಂದನಾ ಸಂಸ್ಥೆ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ, ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್ ಕಾರ್ಯದರ್ಶಿ ಅಶೋಕ ನಲ್ಲಾ, ಕಾರುಣ್ಯಾಶ್ರಮದ ಆಡಳಿತಾಧಿಕಾರಿ ಚನ್ನಬಸವಸ್ವಾಮಿ ಹರೇಟನೂರು, ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ರಾಘವೇಂದ್ರ ಪಿ. ಬದಿ, ಸಿದ್ದೇಶ್ ಕೆ.ಪಿ. ನಂಬೋದರಿ, ನಿವೃತ್ತ ಎಸ್ಪಿ ಮನೋಹರ್, ಉದ್ಯಮಿ ಸುರೇಶ ಕುಮಾರ್, ಸ್ವಾಮಿ ವಿವೇಕಾನಂದ ಟ್ರಸ್ಟ್ ಸದಸ್ಯ ಚನ್ನವೀರನಗೌಡ, ಗ್ರಾಪಂ ಸದಸ್ಯ ಮಹಾಂತೇಶ ರೌಡಕುಂದಾ, ಪಾಲಾಕ್ಷಿಗೌಡ ಜವಳಗೇರಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.