ಅಂತ್ಯಸಂಸ್ಕಾರಕ್ಕೆ ತಪ್ಪದ ಅಲೆದಾಟ
Team Udayavani, Jul 25, 2022, 5:53 PM IST
ದೇವದುರ್ಗ: 188 ಕಂದಾಯ ಗ್ರಾಮಗಳ ವ್ಯಾಪ್ತಿಯಲ್ಲಿ ಸ್ಮಶಾನ ಸಂಕಟ ಎದುರಾಗಿದ್ದು, ಅಂತ್ಯಸಂಸ್ಕಾರಕ್ಕೆ ಅಲೆದಾಡುವ ಸ್ಥಿತಿ ಇದೆ. ತಾಂಡಾ, ದೊಡ್ಡಿಯಲ್ಲಿ ಸ್ಮಶಾನ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಅವರವರ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡುವ ಅನಿವಾರ್ಯತೆ ಇದೆ.
ತಾಲೂಕು ವ್ಯಾಪ್ತಿಯಲ್ಲಿ 60ರಿಂದ 70 ಅಧಿಕ ತಾಂಡಾ, ದೊಡ್ಡಿಗಳಿವೆ. ಮಸರಕಲ್ ಗ್ರಾಮದ ಸರ್ವೇ ನಂಬರ್ 4ರಲ್ಲಿ ರುದ್ರಭೂಮಿಗೆ ಕಾಯ್ದಿರಿಸಿದ ಜಾಗದಲ್ಲಿ ಸರಕಾರ ಕಟ್ಟಡಗಳನ್ನು ನಿರ್ಮಿಸಿದ್ದರಿಂದ ಜಾಗ ಒತ್ತುವರಿ ಆಗಿದೆ.
ಸ್ಮಶಾನಭೂಮಿ ಒತ್ತುವರಿ: ಮಸರಕಲ್ ಗ್ರಾಮದ ಸಾರ್ವಜನಿಕ ರುದ್ರಭೂಮಿ ಒತ್ತುವರಿ ಆಗಿದೆ. ಸರ್ವೇ ನಂಬರ್ 4ರಲ್ಲಿರುವ ಸ್ಮಶಾನ ಭೂಮಿ ವಿವಿಧ ಸರಕಾರಿ ಕಟ್ಟಡಗಳ ನಿರ್ಮಾಣಕ್ಕೆ ಒತ್ತುವರಿ ಮಾಡಲಾಗಿದೆ. ಜನವಸತಿ ರಹಿತ ಗ್ರಾಮ: ಕಂದಾಯ ಇಲಾಖೆಯಿಂದ 20 ಹಳ್ಳಿಗಳು ಜನವಸತಿ ರಹಿತ ಗ್ರಾಮಗಳೆಂದು ಗುರುತಿಸಿ ಕಾಯ್ದಿರಿಸಲಾಗಿದೆ. ಅಕ್ಕಪಕ್ಕದ ಹಳ್ಳಿಗಳ ಗ್ರಾಮಸ್ಥರು ಮೃತಪಟ್ಟರೆ ಕಾಯ್ದಿರಿಸಿದ ಜಾಗದಲ್ಲೇ ಅಂತ್ಯಸಂಸ್ಕಾರ ಮಾಡಲು ಅನುಕೂಲ ಕಲ್ಪಿಸಲಾಗಿದೆ.
ಖಾಸಗಿ ಜಮೀನು ಖರೀದಿ: ಸಾರ್ವಜನಿಕ ರುದ್ರಭೂಮಿ ಸೌಲಭ್ಯ ಇಲ್ಲದ ಕಾರಣ ಜಾಗಟಗಲ್, ಅಂಜಳ, ಬುದ್ದಿನ್ನಿ, ಸೂಲದಗುಡ್ಡ, ಬಸ್ಸಪೂರು, ಗಾಜಲದಿನ್ನಿ, ಹಿರೇಕೂಡ್ಲಿಗಿ, ಗೋವಿಂದಪಲ್ಲಿ ಸೇರಿದಂತೆ 27 ಗ್ರಾಮಗಳಲ್ಲಿ ಕಂದಾಯ ಇಲಾಖೆಯಿಂದ ಜಾಗ ಖರೀದಿಸಲಾಗಿದೆ.
ದೊಡ್ಡಿಯಲ್ಲೂ ಸಮಸ್ಯೆ: ಶಂಕರಬಂಡಿ, ಗೋಗೇರದೊಡ್ಡಿ, ಗಾಲೇರದೊಡ್ಡಿ, ಮಟ್ಟಲರದೊಡ್ಡಿ, ಹಳೆ ವೆಂಗಳಪೂರು, ವೆಂಗಳಪೂರು ಸೇರಿದಂತೆ ಹಲವು ದೊಡ್ಡಿಯಲ್ಲಿ ಸಾರ್ವಜನಿಕ ರುದ್ರಭೂಮಿ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಅವರವರ ಜಮೀನಿನಲ್ಲೇ ಅಂತ್ಯಸಂಸ್ಕಾರ ಮಾಡಬೇಕಿದೆ.
ದೊಡ್ಡಿಯಲ್ಲಿ ಸಾರ್ವಜನಿಕರ ಸ್ಮಶಾನ ಕೊರತೆ ಹಿನ್ನೆಲೆ ಖರೀದಿಸಲು ವಾರ್ಡ್‌ನ ಸದಸ್ಯರು ಗಮನಕ್ಕೆ ತಂದಿದ್ದಾರೆ. ಸ್ಥಳ ಪರಿಶೀಲನೆ ನಂತರ ಕ್ರಮ ವಹಿಸಲಾಗುತ್ತದೆ. -ಸಾಬಣ್ಣ ಕಟ್ಟಿಕಾರ್, ಪುರಸಭೆ ಮುಖ್ಯಾಧಿಕಾರಿ
ರುದ್ರಭೂಮಿ ಸಮಸ್ಯೆ ಇರುವ 27 ಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಯ ಜಮೀನು ಖರೀದಿಸಲಾಗಿದೆ. ಮಸರಕಲ್ ಗ್ರಾಮದ ಸರ್ವೇ ನಂಬರ್ 17 ಸಶ್ಮಾನಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. -ಶ್ರೀನಿವಾಸ ಚಾಪಲ್, ತಹಶೀಲ್ದಾರ್
-ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.