![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 6, 2022, 1:24 PM IST
ಲಿಂಗಸುಗೂರು: ಕೇಂದ್ರ ಸರ್ಕಾರ 2022-23ನೇ ಸಾಲಿನ ಮಂಡಿಸಿದ ಬಜೆಟ್ ಕಾರ್ಮಿಕ ಮತ್ತು ಜನವಿರೋಧಿ ನೀತಿಯಿಂದ ಕೂಡಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ತಾಲೂಕು ಘಟಕ ಶನಿವಾರ ಆಕ್ರೋಶ ವ್ಯಕ್ತಪಡಿಸಿತು.
ಪಟ್ಟಣದ ಗಡಿಯಾರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಆರೋಗ್ಯ ಮಿಷನ್, ಅಂಗನವಾಡಿಗಳಿಗೆ ಅನುದಾನ ಹೆಚ್ಚಿಸಲಾಗಿಲ್ಲ. ರಾಷ್ಟ್ರಕ್ಕೆ ಸಂಪತ್ತು ಸೃಷ್ಟಿಸುವ ದುಡಿಯುವ ಜನರಿಗೆ ಬಜೆಟ್ ಸಂಪೂರ್ಣವಾಗಿ ನಿರ್ಲಕ್ಷಿಸಿ ಇಂಧನ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಜತೆಗೆ ಪರೋಕ್ಷ ತೆರಿಗೆಗಳನ್ನು ಹೆಚ್ಚಿಸಿ ಬಡ ಜನರನ್ನು ವಂಚಿಸಿದೆ. ಕಾರ್ಪೋರೇಟ್ ವಲಯಗಳಿಗೆ ಉದಾರತೆ ತೋರಿದೆ.
ಕೇಂದ್ರದ ಬಜೆಟ್ ಜನರ ಜೀವನೋಪಾಯದ ಮೇಲೆ ತೀವ್ರ ತರವಾದ ಹೊಡೆತ ನೀಡಿ ಬಡತನ ತರಲಿದೆ. ಮೂಲ ಸೌಕರ್ಯ, ಉತ್ಪಾದನೆ ಮತ್ತು ಖನಿಜ ಕ್ಷೇತ್ರಗಳನ್ನು ಖಾಸಗೀಕರಣ ಮೂಲಕ ಹತಾಶೆ ಮತ್ತು ವಿನಾಶಕಾರಿ ಹಿನ್ನೆಲೆಯಲ್ಲಿ ರೂಪಿಸಲಾಗಿದೆ. ಈ ಬಜೆಟ್ ಸರ್ವಾಧಿಕಾರಿ ಮತ್ತು ಜನವಿರೋಧಿ, ವಿಧ್ವಂಸಕ ಪ್ರವೃತ್ತಿ ಬಹಿರಂಗ ಪಡಿಸುತ್ತದೆ. ಇಂತಹ ಬಜೆಟ್ ಸಂಪೂರ್ಣ ಜನವಿರೋಧಿ ಮತ್ತು ರಾಷ್ಟ್ರೀಯ ಆರ್ಥಿಕತೆಗೆ ಸಂಪೂರ್ಣ ವಿನಾಶಕಾರಿಯಾಗಿದೆ ಎಂದು ಆರೋಪಿಸಿದರು.
ಸಿಐಟಿಯು ಮುಖಂಡರಾದ ರಮೇಶ ವೀರಾಪುರ, ನಿಂಗಪ್ಪ ವೀರಾಪುರ, ಮಹ್ಮದ್ ಅನೀಫ್, ಬಾಬಾಜಾನಿ, ಮಲ್ಲೇಶ ಮ್ಯಾಗೇರಿ, ಶಿವರಾಜ ಕಪಗಲ್ ಸೇರಿದಂತೆ ಇತರರು ಇದ್ದರು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.