ಕೊಚ್ಚೆ ಕಂಡು ಜನರ ಹೆಗಲೇರಿದ ಸಿಇಒ!
Team Udayavani, Mar 25, 2017, 3:45 AM IST
ರಾಯಚೂರು: ಕುಡಿವ ನೀರಿನ ಸಮಸ್ಯೆ ವಾಸ್ತವ ಅರಿಯಲು ಗ್ರಾಮಕ್ಕೆ ತೆರಳಿದ್ದ ಜಿಪಂ ಸಿಇಒ ಎಂ. ಕೂರ್ಮಾರಾವ್ ಕೊಚ್ಚೆಯಲ್ಲಿ ಇಳಿಯದ ಕಾರಣ ಗ್ರಾಮಸ್ಥರೇ ಹೆಗಲ ಮೇಲೆ ಹೊತ್ತು ಸಾಗಿರುವ ಘಟನೆ ಇದೀಗ ಟೀಕೆಗೆ ಗುರಿಯಾಗಿದೆ.
ಕುಡಿವ ನೀರಿನ ಸಮಸ್ಯೆ ವಿಚಾರವಾಗಿ ಜಿಪಂ ಸದಸ್ಯರು ಕೆಲ ದಿನಗಳ ಹಿಂದೆ ನಡೆದ ಸಾಮಾನ್ಯ ಸಭೆ ಬಹಿಷ್ಕರಿಸಿದ್ದರು. ಈ ವೇಳೆ ಖುದ್ದು ಅಧ್ಯಯನ ನಡೆಸಿ ಕ್ರಮ ಕೈಗೊಳ್ಳುವುದಾಗಿ ಸಿಇಒ ಭರವಸೆ ನೀಡಿದ್ದರು. ಅದರಂತೆ ಭೇಟಿ ನೀಡಿ ತಾಲೂಕಿನ ಆತೂRರು ಗ್ರಾಮದ ಶುದ್ಧ ಕುಡಿವ ನೀರಿನ ಘಟಕಕ್ಕೆ ತೆರಳುವ ಹಾದಿಯಲ್ಲಿ ಕೊಚ್ಚೆ ಇದ್ದ ಕಾರಣ ಸಿಇಒ ಅಲ್ಲಿಂದಲೇ ವೀಕ್ಷಣೆ ಮಾಡಲು ಮುಂದಾದರು. ಆ ಕಡೆ ತೆರಳಿದ್ದ ಜಿಪಂ ಸದಸ್ಯ ಕೇಶವ ರೆಡ್ಡಿ, ಸಿಇಒ ಅವರೂ ಬರಬೇಕೆಂದು ತಾಕೀತು ಮಾಡಿದರು. ಇದಕ್ಕೆ ಸಿಇಒ ಹಿಂದೇಟು ಹಾಕಿದ್ದರಿಂದ ಈ ವೇಳೆ ಗ್ರಾಮಸ್ಥರು “ನಾವು ಕರೆ ತರುತ್ತೇವೆ’ ಎಂದು ಹೆಗಲ ಮೇಲೆ ಹೊತ್ತುಕೊಂಡರು. ಆದರೆ, ಸಿಇಒ ಮಾತ್ರ ಇದ್ಯಾವುದಕ್ಕೂ ಆಕ್ಷೇಪ ವ್ಯಕ್ತಪಡಿಸದೆ ಉತ್ಸವ ಮೂರ್ತಿಯಂತೆ ಕುಳಿತು ಸಾಗಿದರು. ಅಚ್ಚರಿ ಎಂದರೆ ಅಲ್ಲಿಂದ ಹಿಂದಿರುವಾಗಲೂ ಇದೇ ಸನ್ನಿವೇಶ ಮರುಕಳಿಸಿತು. ಆಗಲೂ ಸಿಇಒ ಬಾಯಿಬಿಡದೆ ಜನರ ಹೆಗಲೇರಿದ್ದಾರೆ.
ಸಿಇಒ ಸ್ಪಷ್ಟನೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಇಒ ಎಂ.ಕೂರ್ಮಾರಾವ್, ಜನ ಅಭಿಮಾನದಿಂದ ಹೊತ್ತುಕೊಂಡು ಹೋಗಿದ್ದಾರೆ. ನಾನು ಮತ್ತು ನನ್ನ ಗನ್‌ಮ್ಯಾನ್ ಬೇಡ ಎಂದಿದ್ದೇವೆ. ಯಾರಿಗೂ ಬಲವಂತ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸದನದಲ್ಲೂ ಖಂಡನೆ: ಸಿಇಒ ವಿರುದ್ಧ ಸೂಕ್ತ ಕ್ರಮ
ವಿಧಾನಸಭೆ: ರೈತರ ಹೆಗಲ ಮೇಲೆ ಕುಳಿತು ನಾಲೆ ದಾಟಿದ ರಾಯಚೂರು ಜಿಲ್ಲಾ ಪಂಚಾಯತಿ ಸಿಇಒ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಸಭೆಯಲ್ಲಿ ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್ ಆಗ್ರಹಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕಾಲಿಗೆ ಬೂಟು ಹಾಕಿಕೊಂಡು ರೈತರ ಹೆಗಲ ಮೇಲೆ ಕುಳಿತು ಹೋಗಿರುವುದು ಗುಲಾಮಗಿರಿಯ ಪದ್ಧತಿಯಾಗಿದ್ದು, ಅಧಿಕಾರಿಯ ನಡವಳಿಕೆಯಿಂದ ರಾಜ್ಯದ ಜನತೆಗೆ ಅನ್ಯಾಯವಾಗಿದೆ. ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಾಗೂ ಸ್ಪೀಕರ್ ಕೆ.ಬಿ. ಕೋಳಿವಾಡ ಕೂಡ ಈ ಪ್ರಕರಣವನ್ನು ಖಂಡಿಸಿ, ಇದೊಂದು ಅಮಾನವೀಯ ಘಟನೆ, ಜಿಲ್ಲಾಧಿಕಾರಿಯಿಂದ ವರದಿ ಪಡೆದುಕೊಂಡು ಸಿಇಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಅವರ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅಧಿಕಾರಿ ಬಗ್ಗೆ ವರದಿ ಪಡೆದು ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.