ಮಕ್ಕಳ ಮನದಾಸೆ; ಬಿಸಿಯೂಟದಲ್ಲಿ ದೋಸೆ!


Team Udayavani, Oct 2, 2022, 5:21 PM IST

6

ರಾಯಚೂರು: ಬಿಸಿಯೂಟದಲ್ಲಿ ಅನ್ನ, ಸಾರು, ಚಿತ್ರಾನ್ನ ತಿಂದು ಬೇಸತ್ತ ಮಕ್ಕಳಿಗೆ ದೋಸೆ, ಇಡ್ಲಿಯಂಥ ರುಚಿಕರ ಉಪಾಹಾರ ತಯಾರಿಸಿ ಕೊಟ್ಟರೇ..!

ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ರೀತಿ ಉಪಾಹಾರ ಮಾಡುವ ಮೂಲಕ ಗಮನ ಸೆಳೆಯಲಾಗಿದೆ. ನೂರಾರು ಮಕ್ಕಳಿಗೆ ಉಪಾಹಾರ ಮಾಡಿ ಬಡಿಸುವುದು ಕಷ್ಟ ವಾದರೂ ಮಕ್ಕಳ ಖುಷಿಗೋಸ್ಕರ ಎರಡು ಬಾರಿ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಾಲೆಯ ಮುಖ್ಯಶಿಕ್ಷಕ ಯಲ್ಲಪ್ಪ ಹಂದ್ರಾಳ ವಿದ್ಯಾರ್ಥಿಗಳ ಜತೆ ಸಮಾಲೋಚನೆ ಮಾಡುವಾಗ ನಿಮಗೆ ಬಿಸಿಯೂಟದಲ್ಲಿ ಏನೇನು ನೀಡಬೇಕು ಎಂದು ಕೇಳಿದ್ದರು. ಆಗ ಒಬ್ಬ ವಿದ್ಯಾರ್ಥಿ ದೋಸೆ ನೀಡಿದರೆ ರುಚಿಯಾಗಿರುತ್ತದೆ ಎಂದು ಹೇಳಿದ್ದ. ಇದಕ್ಕೆ ಉಳಿದ ಮಕ್ಕಳು ಕೂಡ ಹೌದೆಂದು ತಲೆಯಾಡಿಸಿದ್ದರು. ಮಕ್ಕಳ ಬಯಕೆ ಕೇಳಿ ಸುಮ್ಮನಾಗದ ಮುಖ್ಯಶಿಕ್ಷಕ, ಕಳೆದ ಆ.20ರಂದು ಬಿಸಿಯೂಟದ ಬದಲಿಗೆ ದೋಸೆಯನ್ನೇ ಮಾಡಿಸಿದ್ದರು.

ಎರಡು ದಿನದ ಶ್ರಮ: ದೋಸೆ ಮಾಡುವುದೆಂದರೆ ಅನ್ನ, ಸಾರು, ಚಿತ್ರಾನ್ನ ಮಾಡಿದಷ್ಟು ಸುಲಭವಲ್ಲ. ಒಂದು ದಿನ ಮುಂಚಿತವಾಗಿಯೇ ಅಕ್ಕಿ, ಉದ್ದಿನ ಬೇಳೆ ನೆನೆ ಹಾಕಿ ರಾತ್ರಿ ರುಬ್ಬಿಕೊಂಡು ಹಿಟ್ಟು ತಯಾರಿಸಬೇಕು. ಅಲ್ಲದೇ, 217 ವಿದ್ಯಾರ್ಥಿಗಳಿಗೆ ದೋಸೆ ಮಾಡಲು ಹೆಚ್ಚುವರಿ ಹೆಂಚುಗಳು ಬೇಕು.

ಇಷ್ಟೆಲ್ಲ ಕೆಲಸಗಳ ಮಧ್ಯೆಯೂ ಅಡುಗೆ ಸಿಬ್ಬಂದಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡರೆ, ಶಾಲೆ ಶಿಕ್ಷಕರು ಕೂಡ ಇದಕ್ಕೆ ಸಾಥ್‌ ನೀಡಿದರು. ಸರ್ಕಾರ ಬಿಸಿಯೂಟಕ್ಕೆ ನೀಡುವ ಅಡುಗೆ ಸಾಮಗ್ರಿಗಳ ಜತೆಗೆ ಹೆಚ್ಚುವರಿ ಸಾಮಗ್ರಿಗಳನ್ನು ಖರೀದಿಸಲು ಶಿಕ್ಷಕರು ಆರ್ಥಿಕ ನೆರವು ನೀಡಿದರು. ಅಡುಗೆ ಸಿಬ್ಬಂದಿ ಮನೆಯಿಂದಲೇ ದೋಸೆ ಹೆಂಚುಗಳನ್ನು ತಂದಿದ್ದರು. ದೋಸೆ ಜತೆಗೆ ಟೊಮ್ಯಾಟೊ ಗೊಜ್ಜು, ಕೊಬ್ಬರಿ ಚಟ್ನಿ ಮಾಡಲಾಗಿತ್ತು. ಎಲ್ಲ ಮಕ್ಕಳಿಗೆ ಸಾಕೆನಿಸು ವಷ್ಟು ದೋಸೆ ಮಾಡಿ ಬಡಿಸಲಾಯಿತು. ಮಕ್ಕಳು ಬಹಳ ಖುಷಿಯಿಂದಲೇ ತಿಂದು ಸಂಭ್ರಮಿಸಿದರು. ಮಕ್ಕಳ ಖುಷಿಯನ್ನು ಕಂಡು ಶಿಕ್ಷಕರು ಈಚೆಗೆ ಇಡ್ಲಿ ಸಾಂಬಾರ್‌ ಕೂಡ ಮಾಡಿ ಬಡಿಸಿದ್ದಾರೆ. ಈ ಬಗ್ಗೆ ಎಸ್‌ ಡಿಎಂಸಿ ಸದಸ್ಯರು, ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಇಚ್ಛಾಶಕ್ತಿ ತೋರಿದರೆ ಸಾಧ್ಯ

ಸರ್ಕಾರ ನೀಡುವ ಅಡುಗೆ ಸಾಮಗ್ರಿಗಳಲ್ಲಿ ಈ ರೀತಿ ಉಪಾಹಾರಗಳನ್ನು ಪದೇ ಪದೇ ಮಾಡುವುದು ಕಷ್ಟದ ಕೆಲಸ. ವಿಶೇಷ ದಿನಗಳಲ್ಲಿ, ಶಿಕ್ಷಕರ ಜನ್ಮದಿನ ಸೇರಿ ಅಪರೂಪಕ್ಕೊಮ್ಮೆ ಮಾಡಬಹುದಷ್ಟೇ. ಆದರೆ, ತಿಂಗಳಿಗೆ ಒಂದೆರಡು ಬಾರಿಯಾದರೂ ಈ ರೀತಿ ಮಾಡಿದರೆ ಮಕ್ಕಳು ಹೆಚ್ಚು ಆಸಕ್ತಿಯಿಂದ ಶಾಲೆಗೆ ಬರುತ್ತಾರೆ. ಇದಕ್ಕೆ ಸರ್ಕಾರ ಬಿಸಿಯೂಟದ ಸಾಮಗ್ರಿಗಳ ಜತೆಗೆ ಹೆಚ್ಚುವರಿ ಅಡುಗೆ ಪದಾರ್ಥಗಳನ್ನು ನೀಡಲು ಇಚ್ಛಾಶಕ್ತಿ ತೋರಬೇಕು ಎನ್ನುವುದು ಶಿಕ್ಷಕರ, ಪಾಲಕರ ಅನಿಸಿಕೆಯಾಗಿದೆ.

ನಾವು ಮಕ್ಕಳ ಜತೆ ಬೆರೆತು ಅವರ ಇಷ್ಟ-ಕಷ್ಟಗಳನ್ನು ಕೇಳಿದಾಗ ಅವರ ಕಲಿಕೆ ಸುಧಾರಣೆ ಮಾಡಲು ಸಾಧ್ಯ. ಮಕ್ಕಳು ಇಷ್ಟ ಪಟ್ಟಿದ್ದರು ಎನ್ನುವ ಕಾರಣಕ್ಕೆ ನಮ್ಮ ಶಾಲೆಯಲ್ಲಿ ಬಿಸಿಯೂಟದ ಬದಲಿಗೆ ಒಮ್ಮೆ ದೋಸೆ, ಮತ್ತೂಮ್ಮೆ ಇಡ್ಲಿ ಮಾಡಲಾಗಿತ್ತು. ಇದನ್ನು ಮಕ್ಕಳು ಬಹಳ ಆಸ್ವಾದಿಸಿದರು. ಆದರೆ, ನಮಗಿರುವ ಲಭ್ಯ ಸಂಪನ್ಮೂಲದಲ್ಲಿ ಪದೇ ಪದೇ ಈ ರೀತಿ ಮಾಡಲು ಸಾಧ್ಯವಿಲ್ಲ. ಬಿಸಿಯೂಟದಲ್ಲಿ ಒಂದೇ ರೀತಿಯ ಊಟ ತಿನ್ನಲು ಮಕ್ಕಳು ಬೇಸರ ಪಟ್ಟುಕೊಳ್ಳುತ್ತಾರೆ. ● ಯಲ್ಲಪ್ಪ ಹಂದ್ರಾಳ, ಮುಖ್ಯಶಿಕ್ಷಕ, ಹಿರೇರಾಯಕುಂಪಿ ಪ್ರೌಢಶಾಲೆ

●ಸಿದ್ಧಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

DK SHI NEW

Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್‌

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-raichur

Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

1-wewqewq

Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

ಮಂತ್ರಾಲಯ ಶ್ರೀಗಳಿಂದ ತುಂಗಭದ್ರ ನದಿಯಲ್ಲಿ ದಂಡೋದಕ ಸ್ನಾನ

Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ

5-raichur

Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

DK SHI NEW

Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್‌

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Police

Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು

1-yadu

Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.