ನರೇಗಾದಡಿ ಕೆಲಸ ನೀಡಲು ಮನವಿ
Team Udayavani, Apr 30, 2020, 7:05 PM IST
ಚಿಂಚೋಳಿ: ತಾಲೂಕಿನ ವಿವಿಧ ಸಮಸ್ಯೆ ಈಡೇರಿಸುವಂತೆ ತಾಲೂಕು ನಾಗರಿಕ ವೇದಿಕೆ ಮುಖಂಡರು ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂತ್ಯೋದಯ ಪಡಿತರ ಚೀಟಿದಾರರಿಗೆ ಉಚಿತವಾಗಿ ಹಾಲು ಕೊಡಲಾಗುತ್ತಿದೆ. ಬಿಪಿಎಲ್ ಕಾರ್ಡುದಾರರಿಗೆ ನೀಡುತ್ತಿಲ್ಲ. ವಿವಿಧ ಪ್ರದೇಶಗಳಲ್ಲಿ ಆಗಮಿಸಿದ ಕೂಲಿ ಕಾರ್ಮಿಕರಿಗೆ ಮನರೇಗಾ ಯೋಜನೆ ಅಡಿಯಲ್ಲಿ ಕೆಲಸ ಕೊಡಿಸಬೇಕು. ವಿದ್ಯುತ್ ಬಳಕೆದಾರರಿಗೆ ಬಿಲ್ ತುಂಬಲು ಎರಡು ತಿಂಗಳ ಕಾಲಾವಕಾಶ ಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಮಿರಿಯಾಣ ಕಲ್ಲುಗಣಿ ಕೆಲಸ ಪ್ರಾರಂಭಿಸಿ ಕಾರ್ಮಿಕರಿಗೆ ಉದ್ಯೋಗ ಕೊಡಬೇಕು. ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ವ್ಯಾಪ್ತಿಯಲ್ಲಿ ಸ್ಥಗಿತವಾಗಿರುವ
ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಗ್ರೇಡ್2 ತಹಶೀಲ್ದಾರ್ ಮಾಣಿಕರಾವ್ ಘತ್ತರಗಿಗೆ ಮನವಿ ಸಲ್ಲಿಸಿದರು. ಸಂತೋಷ ಗುತ್ತೇದಾರ, ಕೆ.ಎಂ. ಬಾರಿ, ಆರ್. ಗಣಪತರಾವ್, ಕೃಷ್ಣಾ ಬಿರಾದಾರ, ಪ್ರತಾಪರೆಡ್ಡಿ, ಮತೀತ ಸೌದಾಗರ, ಮಹೇಶ ಗಾಲಿ, ಬಸವರಾಜ ಕಡಬೂರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur ಬಾಣಂತಿ ಸಾವು ಶೂನ್ಯಕ್ಕಿಳಿಸಲು ಶ್ರಮ: ಸಚಿವ ದಿನೇಶ್ ಗುಂಡೂರಾವ್
Dinesh Gundu Rao: ಬಾಣಂತಿರ ಸಾವಿನ ತನಿಖೆ ವಾರದಲ್ಲಿ ಸಲ್ಲಿಕೆ
Raichur: ಮೈಕ್ರೊ ಫೈನಾನ್ಸ್ ಗಳ ಕಿರಿಕಿರಿಗೆ ಯುವಕ ಆತ್ಮಹತ್ಯೆ?
Sindhanur: ಕ್ರೂಸರ್ ಪಲ್ಟಿಯಾಗಿ ನಾಲ್ವರು ಯುವಕರು ಮೃ*ತ್ಯು
Raichur: ಏಗನೂರು ಬಳಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿದ್ದ ಗೋಶಾಲೆ ತೆರವುಗೊಳಿಸಿದ ಪಾಲಿಕೆ