ತಲೆನೋವಾದ ಕಟ್ಟಡ ತ್ಯಾಜ್ಯ ವಿಲೇವಾರಿ
ಎಲ್ಲೆಂದರಲ್ಲಿ ಸುರಿಯಲಾಗುತ್ತಿದೆ ಹಳೆ ಕಟ್ಟಡಗಳ ತ್ಯಾಜ್ಯ | ಜಾಗ ಒದಗಿಸುವಂತೆ ನಗರಸಭೆಯಿಂದ ತಹಶೀಲ್ದಾರರಿಗೆ ಪತ್ರ
Team Udayavani, Jan 17, 2020, 3:45 PM IST
ಚಿತ್ರದುರ್ಗ: ನಗರದ ಹೊರ ವಲಯಗಳಲ್ಲಿ ಹಳೆ ಕಟ್ಟಡಗಳ ತ್ಯಾಜ್ಯವನ್ನು ಸುರಿದಿರುವುದು.
ಚಿತ್ರದುರ್ಗ: ಹಳೇ ಕಟ್ಟಡಗಳ ತ್ಯಾಜ್ಯ ವಿಲೇವಾರಿ ನಗರದಲ್ಲಿ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿದೆ. ಡೆಬ್ರಿàಸ್ ವಿಲೇವಾರಿಗೆ ನಗರಸಭೆ ಸೂಕ್ತ ಜಾಗ ತೋರಿಸದ ಹಿನ್ನೆಲೆಯಲ್ಲಿ ಕಟ್ಟಡ ಕೆಡವಿದವರು ತ್ಯಾಜ್ಯ ವಿಲೇವಾರಿಗೆ ಪರದಾಡುವಂತಾಗಿದೆ.
ನಗರದ ಹಳೆಯ ಬಡಾವಣೆಗಳಲ್ಲಿ ಬಹುತೇಕ ಶಿಥಿಲಗೊಂಡ ಮನೆಗಳಿದ್ದು, ಹಂತ ಹಂತವಾಗಿ ಅಂತಹ ಕಟ್ಟಡಗಳನ್ನು ಬೀಳಿಸಿ ಹೊಸ ಮನೆ, ಮಳಿಗೆ ಕಟ್ಟಲು ಜನರು ಮುಂದಾಗುತ್ತಿದ್ದಾರೆ. ಮನೆ ಬೀಳಿಸಿದಾಗ ಸಿಗುವ ತ್ಯಾಜ್ಯವನ್ನು (ಡೆಬ್ರೀಸ್) ಎಲ್ಲಿ ವಿಲೇ ಮಾಡಬೇಕು ಎಂದು ಚಿಂತೆ ಮಾಡುವಂತಾಗಿದೆ. ಬಹುತೇಕರು ಕದ್ದು ಮುಚ್ಚಿ ರಾತ್ರೋ ರಾತ್ರಿ ತಂದು ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ತಂದು ಸುರಿದು ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿ ಹೊಳಲ್ಕೆರೆ ರಸ್ತೆ, ರಾಷ್ಟ್ರೀಯ ಹೆದ್ದಾರಿ 4 ರ ಸರ್ವೀಸ್ ರಸ್ತೆಗಳು, ಆಕಾಶವಾಣಿ ಹಿಂಭಾಗದ ಸಂಗಮೇಶ್ವರ ಬಡಾವಣೆ, ತಿಮ್ಮಣ್ಣನಾಯಕನ ಕೆರೆ, ದಾರುಕಾ ಬಡಾವಣೆ ಹಿಂಭಾಗ, ಗೋನೂರು ರಸ್ತೆಗಳಲ್ಲಿ ರಾಶಿ ರಾಶಿ ತ್ಯಾಜ್ಯ ಕಾಣಸಿಗುತ್ತಿದೆ.
ಮೂರ್‍ನಾಲ್ಕು ತಿಂಗಳ ಹಿಂದೆ ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡೆಬ್ರೀಸ್ ಸಮಸ್ಯೆ ಬಗ್ಗೆ ಗಂಭೀರವಾಗಿ ಚರ್ಚೆಯಾಗಿತ್ತು. ಈ ವೇಳೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರು ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ತತ್ಪರಿಣಾಮ ಮರುದಿನ ಕಣ್ಣಿಗೆ ಕಾಣುವ ಎಲ್ಲಾ ಕಡೆಗಳಲ್ಲೂ ತ್ಯಾಜ್ಯವನ್ನು ಎತ್ತಿ ಹಾಕಲಾಗಿತ್ತು. ಕೆಲವೆಡೆ ಜೆಸಿಬಿಯಿಂದ ಹಿಂದಕ್ಕೆ ನೂಕಿ ಕೈತೊಳೆದುಕೊಳ್ಳಲಾಗಿತ್ತು. ಆದರೆ ಈಗ ಸಮಸ್ಯೆ ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ. ತಕ್ಷಣ ಇದಕ್ಕೆ ಪರಿಹಾರ ಕಂಡು ಹಿಡಿದು ಮುಂದೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಲಾಗಿತ್ತಾದರೂ ಸಮಸ್ಯೆ ಮಾತ್ರ ಹಾಗೆಯೇ ಇದೆ.
ತ್ಯಾಜ್ಯ ವಿಲೇಗೆ ಸ್ಪಷ್ಟ ನೀತಿಯೇ ಇಲ್ಲ: ಬೆಂಗಳೂರು, ಮೈಸೂರು ಸೇರಿದಂತೆ ಬಹುತೇಕ ಮಹಾನಗರ ಪಾಲಿಕೆಗಳಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿಗೆ ನೀತಿ ರೂಪಿಸಲಾಗಿದೆ. ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಚಿತ್ರದುರ್ಗ ಸೇರಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿಗೆ ನಗರ ಸ್ಥಳೀಯ ಸಂಸ್ಥೆಗಳು ಸ್ಪಷ್ಟ ನೀತಿ ರೂಪಿಸಿಲ್ಲ. ಹೀಗಾಗಿ, ಕಟ್ಟಡ ಅವಶೇಷಗಳು ರಸ್ತೆ ಬದಿ, ಪಾಳು ಭೂಮಿ ಹಾಗೂ ಜಲಮೂಲಗಳಾದ ಕೆರೆ, ಬಾವಿಗಳನ್ನು ಸೇರುತ್ತಿವೆ. ರಿಯಲ್ ಎಸ್ಟೇಟ್ ಉದ್ಯಮ ಬೆಳೆದಂತೆಲ್ಲಾ ಹೊಸ ಹೊಸ ಕಟ್ಟಡ ನಿರ್ಮಾಣ ಮಾಡುವ ಉಮೇದಿನಲ್ಲಿ ಹಳೆ ಕಟ್ಟಡಗಳನ್ನು ನೆಲಸಮ ಮಾಡುವುದು ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಂತೆ ಸ್ಥಳೀಯ ಸಂಸ್ಥೆಗಳು ಕೂಡಾ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಕಂಡು ಬರುತ್ತಿದೆ.
ನಿರ್ಮಿತಿ ಕೇಂದ್ರದ ಜತೆಗೆ ಎಂಒಯು: ಡೆಬ್ರೀಸ್‌ನಿಂದ ಇಟ್ಟಿಗೆ ತಯಾರಿಸುವ ಮಾದರಿಗೆ ಚಿತ್ರದುರ್ಗ ನಗರಸಭೆಗೆ ಇತ್ತೀಚೆಗೆ ರಾಜ್ಯ ಸರ್ಕಾರ ಪ್ರಶಸ್ತಿಯನ್ನೂ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ನಗರದ ಹಳೆ ಕಟ್ಟಡಗಳ ತ್ಯಾಜ್ಯವನ್ನು ಒಂದೆಡೆ ತಂದು ಹಾಕುವಂತೆ ಮಾಡಿ ಅದರಿಂದ ಇಟ್ಟಿಗೆ ತಯಾರಿಸುವ ಉದ್ದೇಶಕ್ಕೆ ನಗರಸಭೆ ಈಗಾಗಲೇ ನಿರ್ಮಿತಿ ಕೇಂದ್ರದ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಆದರೆ ಕೆಲಸ ಇನ್ನೂ ಆರಂಭವಾಗಿಲ್ಲ. ಎಲ್ಲವೂ ಕಡತಗಳಲ್ಲೇ ನಡೆಯುತ್ತಿದೆ.
ತ್ಯಾಜ್ಯ ವಿಲೇವಾರಿ ಮಾಡಲು ಸೂಕ್ತ ಸ್ಥಳಾವಕಾಶ ನೀಡುವಂತೆ ನಗರಸಭೆಯಿಂದ ತಹಶೀಲ್ದಾರರಿಗೆ ಪತ್ರಬರೆಯಲಾಗಿತ್ತು. ಸೀಬಾರದ ಬಳಿ ನಿಷೇಧಿ ತ ಕ್ವಾರಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈ ಪತ್ರ ಚಿತ್ರದುರ್ಗ ತಹಶೀಲ್ದಾರ್ ಕಚೇರಿಯಲ್ಲಿ ಬಾಕಿ ಇರುವುದು ವಿಪರ್ಯಾಸ.
ಡೆಬ್ರೀಸ್ ವಿಲೇವಾರಿಗಾಗಿ ಕ್ವಾರಿಯೊಂದನ್ನು ನೀಡುವಂತೆ ತಹಶೀಲ್ದಾರ್‌ಗೆ ಪತ್ರ ಬರೆದಿದ್ದೇವೆ. 15 ದಿನಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿದು ಸ್ಥಳಾವಕಾಶ ಸಿಗುವ ಸಾಧ್ಯತೆ ಇದೆ. ಜತೆಗೆ ಇಟ್ಟಿಗೆ ತಯಾರಿಗೆ ನಿರ್ಮಿತಿ ಕೇಂದ್ರದ ಜತೆಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಸದ್ಯಕ್ಕೆ ತ್ಯಾಜ್ಯವನ್ನು ನಗರದಿಂದ 8 ಕಿಮೀ ದೂರದಲ್ಲಿ ವಿಲೇ ಮಾಡುವಂತೆ ಸೂಚನೆ ನೀಡುತ್ತಿದ್ದೇವೆ.
.ಜೆ.ಟಿ. ಹನುಮಂತರಾಜು,
ಚಿತ್ರದುರ್ಗ ನಗರಸಭೆ ಪೌರಾಯುಕ್ತರು
ತಿಪ್ಪೇಸ್ವಾಮಿ ನಾಕೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.