ರೈತರ ಜಮೀನುಗಳಿಗೆ ನಗರದ ತ್ಯಾಜ್ಯ
Team Udayavani, Nov 7, 2021, 4:53 PM IST
ಸಿಂಧನೂರು: ನಗರ ವ್ಯಾಪ್ತಿಯಲ್ಲಿ ಸಾಗುವ ತುಂಗಭದ್ರಾ ಎಡದಂಡೆ ವ್ಯಾಪ್ತಿಯ 40ನೇ ಉಪಕಾಲುವೆ ಚರಂಡಿಯಂತಾದ ಪರಿಣಾಮ ನೀರು ಬಿಟ್ಟಾಗ ಕಾಲುವೆ ಭರ್ತಿಯಾಗಿ ಅಕ್ಕಪಕ್ಕದ ಚರಂಡಿ ಕಸವನ್ನು ಹೊತ್ತೂಯ್ಯುವಂತಾಗಿದೆ.
ಮಿತ ನೀರಿನ ಬೆಳೆಗೂ ಕಾಲುವೆ ಕೊನೆಭಾಗದ ಜಮೀನುಗಳಿಗೆ ನೀರು ಸಿಗುತ್ತಿಲ್ಲವೆಂಬ ಕೂಗಿನ ಮಧ್ಯೆ ಕಾಲುವೆ ಒತ್ತುವರಿಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಚರಂಡಿಗಿಂತಲೂ ಕಿರಿದೆಂಬಂತೆ 40ನೇ ಉಪಕಾಲುವೆಯನ್ನು ಎಡ-ಬಲದಲ್ಲಿ ಒತ್ತುವರಿ ಮಾಡಲಾಗಿದೆ. ಇದೀಗ ನೀರು ಬಿಟ್ಟಾಗ ಕಾಲುವೆ ತುಂಬಿ ನೀರು, ಎಡ-ಬಲದಲ್ಲಿ ಜಿಗಿದಾಟ ನಡೆಸಿ ಕೆಳಭಾಗಕ್ಕೆ ಹೋಗಬೇಕಿದೆ.
ಏನಿದು ಸಮಸ್ಯೆ?
ತುಂಗಭದ್ರಾ ಎಡದಂಡೆ ವ್ಯಾಪ್ತಿಯ 40ನೇ ಉಪಕಾಲುವೆ ವ್ಯಾಪ್ತಿಯಲ್ಲಿ 14 ಸಾವಿರ ಎಕರೆಗೂ ಹೆಚ್ಚಿನ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ತುರುವಿಹಾಳ ಉಪವಿಭಾಗದಲ್ಲಿ ಬರುವ ಈ ಕಾಲುವೆ ವ್ಯಾಪ್ತಿಯಲ್ಲಿ ಹೊಸಳ್ಳಿ, ಗುಂಜಳ್ಳಿ, 7ನೇ ಮೈಲ್ ಕ್ಯಾಂಪ್, ಮಲದಗುಡ್ಡ, ವಿರೂಪಾಪುರ, 4ನೇ ಮೈಲ್ ಕ್ಯಾಂಪ್, 3ನೇ ಮೈಲ್ ಕ್ಯಾಂಪ್, ಸಿಂಧನೂರು ಬರುತ್ತದೆ. ಜತೆಗೆ ಕೆಳಭಾಗದ ಅಮರಾಪುರ, ಸುಕಾಲಪೇಟೆ ವ್ಯಾಪ್ತಿಯ ಜಮೀನಿಗೂ ನೀರು ಹರಿಯಬೇಕಿದೆ. ಈ ಭಾಗದಲ್ಲಿ ಹಾಕಿದ ಜೋಳದ ಬೆಳೆಗೂ ನೀರು ದೊರೆಯುತ್ತಿಲ್ಲವೆಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬುಧವಾರ ನೀರು ಬಿಡಲಾಗಿತ್ತು. ಆದರೆ ಚರಂಡಿಯೊಳಗಿಂದ ನೀರು ದಾಟಲು ಹರಸಾಹಸ ನಡೆಸಿದಂತಿತ್ತು.
ವಿಸ್ತೀರ್ಣ ಅಧಿಕ, ಜಾಗ ಕಡಿಮೆ
ಇಲ್ಲಿನ 40ನೇ ಉಪಕಾಲುವೆ ನಗರದೊಳಗಿಂದ ಕೆಳಭಾಗಕ್ಕೆ ಸಾಗುತ್ತದೆ. ಇಲಾಖೆ ಮಾಹಿತಿ ಪ್ರಕಾರ ಕಾಲುವೆ ಎಡಭಾಗದಲ್ಲಿ 33 ಅಡಿ, ಬಲಭಾಗದಲ್ಲಿ 66 ಅಡಿ ಉದ್ದವಿದೆ. ಇಷ್ಟು ದೊಡ್ಡ ವಿಸ್ತೀರ್ಣವಿದ್ದರೂ ಈ ಕಾಲುವೆ ಎಡ-ಬಲ ಒತ್ತುವರಿಯಿಂದ ಚರಂಡಿಯಾಗಿದೆ. ಒತ್ತುವರಿಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ಪ್ರಕರಣ ನಡೆದಿರುವುದರಿಂದ ಈ ಬಗ್ಗೆ ಕೋರ್ಟ್‌ನಿಂದಲೇ ಇಲಾಖೆಗೆ ಮಾಹಿತಿ ಕೇಳಲಾಗಿದೆ. ನಕ್ಷೆ ಆಧರಿಸಿ ಮಾಹಿತಿ ನೀಡುವುದಕ್ಕೆ ಮಾತ್ರ ನೀರಾವರಿ ಇಲಾಖೆ ಸೀಮಿತವಾಗಿದ್ದರಿಂದ ಒತ್ತುವರಿಗೆ ಪರಿಹಾರ ಇಲ್ಲವಾಗಿದೆ.
ಇದನ್ನೂ ಓದಿ: 50-60 ವರ್ಷ ಮೇಲ್ಪಟ್ಟರು ಜಿಮ್ ಮಾಡುವಾಗ ಟ್ರೈನರ್ ಬಳಿ ಸಲಹೆ ಪಡೆಯುವುದು ಉತ್ತಮ : ನಟ ಪ್ರೇಮ್
ರೈತರ ಜಮೀನಿಗೆ ಚರಂಡಿ ನೀರು
40ನೇ ಉಪಕಾಲುವೆ ಸಿಟಿ ಪ್ರವೇಶಿಸುತ್ತಿದ್ದಂತೆ ಒತ್ತುವರಿ ಕಾಣಿಸುತ್ತದೆ. ಎರಡು ಬದಿಯಲ್ಲೂ ಟೆಂಟ್‌ಗಳನ್ನು ಹಾಕಲಾಗಿದೆ. ಚರಂಡಿ ನೀರನ್ನು ನೇರವಾಗಿ ಪೈಪ್ ಮುಖಾಂತರ ಕಾಲುವೆಗೆ ಬಿಡಲಾಗುತ್ತಿದೆ. ಇದೇ ನೀರು ಸುಕಾಲಪೇಟೆ, ಅಮರಾಪುರ ಭಾಗದ ಜಮೀನುಗಳಿಗೆ ಸಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಾಗ ಎಲ್ಲ ತ್ಯಾಜ್ಯ ಕೊಚ್ಚಿ ಹೋಗಿ ರೈತರ ಜಮೀನು ಸೇರುತ್ತಿದೆ. ಸಹಜವಾಗಿಯೇ ಇದು ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜೋಳಕ್ಕೆ ಬಿಟ್ಟ ನೀರು ಭಾರಿ ಪ್ರಮಾಣದಲ್ಲಿ ನೀರು ಬಂದಿದ್ದನ್ನು ಕಂಡ ಸಿಟಿಯ ಮಂದಿಯೇ ಬೆರಗಾದರು. ಕೆಳಭಾಗಕ್ಕೆ ಧುಮ್ಮಿಕ್ಕಿ ಹರಿದ ಗಂಗೆಯಿಂದ ತ್ಯಾಜ್ಯ ಕೊಚ್ಚಿ ಹೋಗಿದೆ. ಅಲ್ಲಲ್ಲಿ ಕಾಲುವೆಗೆ ಖಾಸಗಿ ವ್ಯಕ್ತಿಗಳೇ ತಡೆಗೋಡೆ ನಿರ್ಮಿಸಿದ್ದರಿಂದ ನೀರು ಸರಾಗವಾಗಿ ಹರಿಯದಂತಾಗಿತ್ತು. ಕೆಲವರು ಕಾಲುವೆ ಮೇಲೆ ಪಿಲ್ಲರ್ ಹಾಕಿ ಕಟ್ಟಡ ಕಟ್ಟಿದ್ದಲ್ಲದೇ, ತಗಡುಗಳನ್ನು ಕೂಡ ಚರಂಡಿಗೆ ಹೊಂದಿಕೊಂಡು ಹಾಕಿದ್ದರಿಂದ ಕಾಲುವೆ ಕಣ್ಣಿಗೆ ಬೀಳದಂತಾಗಿದೆ. ಕೆಳಭಾಗದ ಜೋಳದ ಬೆಳೆಗೆ ನೀರು ಹೋಗುತ್ತದೆಯೋ, ಇಲ್ಲವೋ ಎಂಬುದೇ ಯಕ್ಷಪ್ರಶ್ನೆಯಾಗಿದ್ದು, ಕೊನೆಭಾಗದ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಕೊನೆಭಾಗದ ಜೋಳದ ಬೆಳೆ ಉಳಿಸಲು 40ನೇ ಉಪ ಕಾಲುವೆಗೆ ನೀರು ಬಿಡಲಾಗಿದೆ. ಒತ್ತುವರಿಗೆ ಸಂಬಂಧಿಸಿ ಕೋರ್ಟ್ ಮಾಹಿತಿ ಕೇಳಿದ್ದು, ನೀಡಲಾಗುವುದು. ಅಲ್ಲಿನ ಸಮಸ್ಯೆ ಬಗ್ಗೆ ನನಗೆ ಗೊತ್ತಿಲ್ಲ. ಅಲ್ಲಿನ ಮೇಸ್ತಿಯನ್ನು ಕೇಳುವೆ. ಈಗ ಹಬ್ಬ ಇರುವುದರಿಂದ ಅವರು ಸಿಗಲ್ಲ. -ಹನುಮಂತಪ್ಪ, ಎಇಇ, ನೀರಾವರಿ ಇಲಾಖೆ, ತುರುವಿಹಾಳ ಉಪವಿಭಾಗ, ಸಿಂಧನೂರು.
–ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.