ಈ ಕಚೇರಿಗಳಲ್ಲಿ ಕೆಲ ಹುದ್ದೆಗಳು ಖಾಲಿ ಖಾಲಿ!
Team Udayavani, May 31, 2022, 5:58 PM IST
ದೇವದುರ್ಗ: ಸಮೀಪದ ಅಮರಾಪುರ ಕ್ರಾಸ್ ಹತ್ತಿರದಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮ ಸಹಾಯಕ ಕಾರ್ಯಪಾಲಕ ಇಂಜನಿಯರ್ ಉಪ ವಿಭಾಗ ಸಂಖ್ಯೆ 11 ಮತ್ತು 12 ಕಚೇರಿಯಲ್ಲಿ ಕೆಲ ಹುದ್ದೆಗಳು ಖಾಲಿ ಇದ್ದು, ಇವುಗಳ ಮಧ್ಯೆಯೇ ಕಾರ್ಯ ನಿರ್ವಹಿಸಲಾಗುತ್ತಿದೆ.
ಕಚೇರಿ ಸುತ್ತಲೂ ಜಾಲಿಗಿಡಗಳು ಬೆಳೆದಿದ್ದು, ಸ್ವಚ್ಛತೆಗೆ ಕ್ರಮ ವಹಿಸದ ಹಿನ್ನೆಲೆಯಲ್ಲಿ ಅವ್ಯವಸ್ಥೆಯ ಆಗರವಾಗಿದೆ. ಕಚೇರಿಗಳ ನಿರ್ವಹಣೆ ಕೊರತೆಯಿಂದ ಅಲ್ಲಲ್ಲಿ ಗೋಡೆ ಬಿರುಕು ಬಿಟ್ಟಿವೆ. ರಾತ್ರಿ ಕಾವಲುಗಾರರು ಇಲ್ಲದ ಕಾರಣ ಕಳ್ಳರ ಕಾಟ ಹೆಚ್ಚಿದೆ.
ಉಪವಿಭಾಗ 12ರಲ್ಲೂ ಹುದ್ದೆ ಖಾಲಿ
ಕೃಷ್ಣಾ ಭಾಗ್ಯ ಜಲ ನಿಗಮ ಸಹಾಯಕ ಕಾರ್ಯಪಾಲಕ ಅಭಿಯಂತರ ಉಪವಿಭಾಗ 12ರಲ್ಲಿ ಕೆಲ ಹುದ್ದೆಗಳು ಖಾಲಿ ಇವೆ. ಸಹಾಯಕ ಅಭಿಯಂತರ ಎರಡು ಹುದ್ದೆಗಳು ಎರಡು ಖಾಲಿ ಇದ್ದು, ಭರ್ತಿಯಾಗಿಲ್ಲ. ಪ್ರಥಮ ದರ್ಜೆ ಭೂಮಾಪಕ ಹುದ್ದೆ, ಆಡಳಿತ ವಿಭಾಗ ಪ್ರಥಮ ದರ್ಜೆ ಸಹಾಯಕ ಹುದ್ದೆ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು ಖಾಲಿ ಇವೆ. ಪರಿಚಾರಕ ಎರಡು ಹುದ್ದೆಗಳು, ರಾತ್ರಿ ಕಾವಲುಗಾರ ಹುದ್ದೆಯೂ ಖಾಲಿಯಿದೆ.
11 ಉಪ ವಿಭಾಗದಲ್ಲೂ ಕೊರತೆ
ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕಚೇರಿ ಉಪ ವಿಭಾಗ 11ರಲ್ಲಿ ಸಹಾಯಕ ಅಭಿಯಂತರ, ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರ, ವಾಹನ ಚಾಲಕ, ಪರಿಚಾರಕ ಹುದ್ದೆಗಳು ಖಾಲಿ ಇವೆ. ಅದರಲ್ಲಿ ಕಂಪ್ಯೂಟರ್ ಕೆಟ್ಟು ಹೋಗಿ ವರ್ಷವಾದರೂ ಇಲ್ಲಿಯವರೆಗೆ ದುರಸ್ತಿ ಆಗಿಲ್ಲ. ಹೀಗಾಗಿ ಆನ್‌ಲೈನ್ ಮೂಲಕ ದಾಖಲಾತಿ ಮಾಹಿತಿ ಪಡೆಯಲು ಖಾಸಗಿ ಅಂಗಡಿಗಳ ಮೊರೆ ಹೋಗುವ ಸ್ಥಿತಿ ಇದೆ.
ಅವ್ಯವಸ್ಥೆಯ ತಾಣ
ಕೃಷ್ಣಾ ಭಾಗ್ಯ ಜಲ ನಿಗಮ ಸಹಾಯಕ ಕಾರ್ಯ ನಿರ್ವಾಹಕ ಕಚೇರಿ ಉಪ ವಿಭಾಗ 11, 12 ಮತ್ತು 13 ಕಚೇರಿಗಳ ಸುತ್ತಲೂ ಜಾಲಿಗಿಡಗಳು ಬೆಳೆದು ಅವ್ಯವಸ್ಥೆಯ ಆಗರವಾಗಿದೆ. ಸ್ವಚ್ಛತೆ ಇಲ್ಲದ ಕಾರಣ ವಿಷಜಂತುಗಳ ಕಾಟ ಹೆಚ್ಚಿದೆ. ಕಚೇರಿಗಳ ನಿರ್ವಹಣೆ ಕೊರತೆ ಹಿನ್ನೆಲೆಯಲ್ಲಿ ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಸ್ವಚ್ಛತೆ ಇಲ್ಲದ ಕಾರಣ ಎಲ್ಲೆಂದರಲ್ಲಿ ಧೂಳು ಆವರಿಸಿವೆ. ಅಧಿಕಾರಿಗಳು ಸ್ವಚ್ಛತೆ ಕುರಿತು ಇನ್ನಾದರೂ ಗಮನ ಹರಿಸುತ್ತಾರೆಯೇ ಕಾದು ನೋಡಬೇಕಿದೆ.
ಕಚೇರಿಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಇಲ್ಲಿಯವರೆಗೆ ಭರ್ತಿಯಾಗಿಲ್ಲ. ಕೆಲಸದ ಒತ್ತಡ ಹೆಚ್ಚಾದರೂ ಇದ್ದವರೇ ಎಲ್ಲ ಕೆಲಸ ಕಾರ್ಯಗಳನ್ನು ಮಾಡುವಂತಾಗಿದೆ. –ಆರ್. ಚಂದ್ರಶೇಖರ, ಸಹಾಯಕ ಕಾರ್ಯಪಾಲಕ ಅಭಿಯಂತರು ಉಪವಿಭಾಗ 12
ಕಚೇರಿ ಸುತ್ತಲೂ ಬೆಳೆದಿರುವ ಜಾಲಿ ಗಿಡಗಳ ಸ್ವತ್ಛಗೊಳಿಸಲು ಕ್ರಮ ವಹಿಸಲಾಗುತ್ತದೆ. ಕೆಟ್ಟಿರುವ ಕಂಪ್ಯೂಟರ್ ದುರಸ್ತಿ ಮಾಡಿಸಲಾಗುತ್ತದೆ. ಕೆಲ ಹುದ್ದೆಗಳು ಖಾಲಿ ಇದ್ದು, ಕಚೇರಿ ನಿರ್ವಹಣೆ ಮಾಡಲಾಗುತ್ತಿದೆ. -ಮನೋಹರ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರು ಉಪ ವಿಭಾಗ 11
-ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.