ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರ, ಬೆಂಗಳೂರಿಗೆ ದೌಡು
ಎಲ್ಲ ಮುಖಂಡರು ರಾಜಧಾನಿ ಕಡೆಗೆ ಪ್ರಯಾಣ ಕೈಗೊಂಡಿರುವ ಸಂಗತಿ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಯಿತು
Team Udayavani, Mar 9, 2021, 7:17 PM IST
ಸಿಂಧನೂರು: ಯಾರಾದರೂ ಪಕ್ಷ ಸೇರ್ಪಡೆ ಇಲ್ಲವೇ ರಾಜೀನಾಮೆ ನೀಡಿದಾಗ ಕೇಳಿಬರುತ್ತಿದ್ದ ಪರ-ವಿರೋಧದ ಅಪಸ್ವರಗಳು ಇದೇ ಮೊದಲ ಬಾರಿಗೆ
ತಾಲೂಕಿನಲ್ಲಿ ಕೇಳಿಬಂದಿಲ್ಲ. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾ.9ರಂದು ಬಿಜೆಪಿ ಸೇರ್ಪಡೆ ಅಧಿ ಕೃತವೆಂದು ಗೊತ್ತಾದ ಬಿಜೆಪಿಯಲ್ಲಿ ಒಗ್ಗಟ್ಟಿನ
ಮಂತ್ರ ಪಠಿಸಲಾಗಿದೆ.
ರಾಜ್ಯ ನಾಯಕರ ಕರೆಯ ಹಿನ್ನೆಲೆಯಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಿಗಿರಿ ಜಿಲ್ಲೆಯ ಶಾಸಕರು ಹಾಗೂ ನಾಯಕರು ಕುರುಬ ಸಮುದಾಯದ ಪ್ರಭಾವಿ ಮುಖಂಡರೊಬ್ಬರ ಬಿಜೆಪಿ ಸೇರ್ಪಡೆಗೆ ಉತ್ಸಾಹ ತೋರಿದ್ದಾರೆ. ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಎಲ್ಲ ಮುಖಂಡರು ಬಹಿರಂಗವಾಗಿ ಯಾವುದೇ ಅಪಸ್ವರ ಎತ್ತದೇ ನೇರವಾಗಿ ರಾಜಧಾನಿ ದಾರಿ ಹಿಡಿದಿದ್ದಾರೆ.
ರಾಜಧಾನಿಯಲ್ಲಿ ನೂರು ರೂಂ ಬುಕ್: ಗಮನಾರ್ಹ ಎಂದರೆ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅವರ ಬಿಜೆಪಿ ಸೇರ್ಪಡೆಯಾಗಲಿರುವ ಬೆಂಬಲಿಗರ ವಾಸ್ತವ್ಯಕ್ಕೆ ಬರೋಬ್ಬರಿ 100 ವಸತಿ ಗೃಹಗಳ (ಲಾಡ್ಜ್) ವ್ಯವಸ್ಥೆ ಮಾಡಿದ್ದಾರೆ. ಸ್ಥಳೀಯವಾಗಿ ಬೆಂಬಲಿಗರನ್ನು ಕರೆದೊಯ್ಯಲು 100 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಪ್ರಮುಖ ನಾಯಕರು, ಸ್ವಂತ ವಾಹನ ಹೊಂದಿದವರೆಲ್ಲ ಆಪ್ತರನ್ನು ಕರೆದುಕೊಂಡು ಸೋಮವಾರವೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಹೊಂದಾಣಿಕೆಯೊಂದಿಗೆ ಎಲ್ಲ ಮುಖಂಡರು ರಾಜಧಾನಿ ಕಡೆಗೆ ಪ್ರಯಾಣ ಕೈಗೊಂಡಿರುವ ಸಂಗತಿ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಯಿತು.
ಅಪಸ್ವರಕ್ಕೆ ಹೈಕಮಾಂಡ್ ಬೀಗ: ಎಲ್ಲರೂ ಆರಂಭದಲ್ಲಿ ವಿಚಾರಿಸಿ ಮಾತುಕತೆ ನಡೆದ ಹಿನ್ನೆಲೆಯಲ್ಲಿ ಬಹುತೇಕ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿಲ್ಲ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಚರ್ಚೆಯಾಗಿ ಬಿಜೆಪಿ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಯಾರೊಬ್ಬರೂ ಆಕ್ಷೇಪ ಎತ್ತಿಲ್ಲ. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೊಲ್ಲಾಶೇಷಗಿರಿರಾವ್, ಜಾಲಿಹಾಳ ಜಿಪಂ ಸದಸ್ಯ ಅಮರೇಗೌಡ ವಿರೂಪಾಪುರ, ಬಿಜೆಪಿ ಮಂಡಲ ಅಧ್ಯಕ್ಷ ಹನುಮೇಶ ಸಾಲಗುಂದಾ, ರಾಗಲಪರ್ವಿ ಜಿಪಂ ಸದಸ್ಯ ಎನ್. ಶಿವನಗೌಡ ಗೋರೆಬಾಳ ಸೇರಿದಂತೆ ಬಿಜೆಪಿಯ ಪ್ರಮುಖ ಮುಖಂಡರೆಲ್ಲ ಬೆಂಗಳೂರಿಗೆ ದೌಡಾಯಿಸಿದ್ದಾರೆ.
ಮಸ್ಕಿ ಎಲೆಕ್ಷನ್ ಟಾರ್ಗೆಟ್: ಬಿ.ವೈ. ವಿಜಯೇಂದ್ರ ಅವರಿಗೆ ಮಸ್ಕಿ ಉಪಚುನಾವಣೆ ಉಸ್ತುವಾರಿ ನೀಡಿದ ನಂತರ ಸ್ವತಃ ಹೈಕಮಾಂಡ್ ಪಕ್ಷಕ್ಕೆ ಅನುಕೂಲವಾಗುವ ಎಲ್ಲ ಕ್ರಮ ಅನುಸರಿಸುವಂತೆ ಸಂದೇಶ ನೀಡಿದೆ. ಅದನ್ನು ಬಳಸಿಕೊಂಡ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರು, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪರನ್ನು ಬಿಜೆಪಿಗೆ ಸ್ವಾಗತಿಸುವ ಹಾದಿ ಸುಗಮಗೊಳಿಸಿದ್ದಾರೆ. ರಾಜ್ಯ ಹೈಕಮಾಂಡ್ ಹಂತದಲ್ಲೇ ಈ ಚರ್ಚೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ
ಈ ಬಾರಿ ಬಿಜೆಪಿಯವರೇ ಸ್ವಾಗತಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಂಸದರು, ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮುಕ್ತ ಮನಸ್ಸಿನಿಂದ ಕಮಲದ ಬಾವುಟ ಹಿಡಿಯಲು ರಾಜಧಾನಿ ತಲುಪಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರು ಹೇಳಿದ ಮೇಲೆ ಬೇರೆ ವಿಚಾರಗಳಿಗೆ ಆಸ್ಪದವಿಲ್ಲ. ಹೈಕಮಾಂಡ್ ಆಹ್ವಾನ, ಸೂಚನೆ ಪ್ರಕಾರ ಎಲ್ಲರೂ ಬೆಂಗಳೂರಿಗೆ ತೆರಳುತ್ತಿದ್ದು, ಯಾರೊಬ್ಬರೂ ಪಕ್ಷಕ್ಕೆ ಸೇರಿಸಿಕೊಳ್ಳಲು ಬೇಡ ಎಂದಿಲ್ಲ.
ಹನುಮೇಶ ಸಾಲಗುಂದಾ,
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರು, ಸಿಂಧನೂರು
ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
Maski ಅಕ್ರಮ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.