ಕೈ ಬಿಟ್ಟ ಕ್ಷೇತ್ರದ ಮೇಲೆ ಕಾಂಗ್ರೆಸ್‌ ಕಣ್ಣು


Team Udayavani, Apr 2, 2018, 3:10 PM IST

vij-1.jpg

ರಾಯಚೂರು: ರಾಜ್ಯಮಟ್ಟದಲ್ಲಿ ಸುದ್ದಿಯಾಗುವಷ್ಟು ವರ್ಚಸ್ಸು ಇಲ್ಲದಿದ್ದರೂ ಜಿಲ್ಲೆಯ ಮಟ್ಟಿಗೆ ರಾಯಚೂರು ನಗರ ಕ್ಷೇತ್ರ ತುಂಬಾ ಕುತೂಹಲಕಾರಿ. ಚುನಾವಣೆ ವಿಚಾರಕ್ಕೆ ಬಂದರೆ ಇಲ್ಲಿ ಕಾಂಗ್ರೆಸ್‌ ಅದರಲ್ಲೂ ಮುಸ್ಲಿಮರಿಗೆ ಹೆಚ್ಚು ಮನ್ನಣೆ. 

ಅಲ್ಪಸಂಖ್ಯಾತರ ಮತಗಳು ನಿರ್ಣಾಯಕ. ಆದರೆ, ಕಾಂಗ್ರೆಸ್‌ನ ಒಳಜಗಳದಿಂದಾಗಿ ಈ ಕ್ಷೇತ್ರ ಕಳೆದ ಬಾರಿ “ಕೈ’ ತಪ್ಪಿತ್ತು. ಹೀಗಾಗಿ ಶತಾಯ ಗತಾಯ ಮರಳಿ ಗೆಲುವು ಸಾಧಿಸಲು ಕಾಂಗ್ರೆಸ್‌ ತಂತ್ರಗಾರಿಕೆ ಶುರು ಮಾಡಿದ್ದರೆ, ಮತ್ತೂಮ್ಮೆ ಗೆಲ್ಲಲೇಬೇಕು ಎಂಬ ಧಾವಂತದಲ್ಲಿ ಬಿಜೆಪಿಗೆ ಹಾರಿದ್ದಾರೆ ಜೆಡಿಎಸ್‌ ಶಾಸಕರಾಗಿದ್ದ ಡಾ.ಶಿವರಾಜ ಪಾಟೀಲ. 

14 ಚುನಾವಣೆಗಳಲ್ಲಿ ಕಾಂಗ್ರೆಸ್‌ ಏಳು ಬಾರಿ ಗೆದ್ದಿದೆ. ಹೀಗಾಗಿ ಈ ಬಾರಿಯೂ ಕಾಂಗ್ರೆಸ್‌ ಟಿಕೆಟ್‌ ಅಲ್ಪಸಂಖ್ಯಾತರಿಗೇ ನೀಡಬೇಕು ಎನ್ನುವ ಕೂಗು ಜೋರಾಗಿದೆ. ಕಳೆದ ಬಾರಿ ಪರಾಭವಗೊಂಡಿದ್ದ ಮಾಜಿ ಶಾಸಕ ಸೈಯ್ಯದ್‌ ಯಾಸಿನ್‌ ಹೆಸರು ಮುಂಚೂಣಿಯಲ್ಲಿದೆ. ಇನ್ನು ಜೆಡಿಎಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ಡಾ| ಶಿವರಾಜ ಪಾಟೀಲ ಅವಧಿಗೂ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದಾರೆ. ಜೆಡಿಎಸ್‌ ಮಾತ್ರ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ವರ್ಚಸ್ಸೇ ಆಧಾರ. ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆ ಬಿಜೆಪಿ, ಜೆಡಿಎಸ್‌ಗೆ ವರವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಎಂಎಲ್‌ಸಿ ಎನ್‌.ಎಸ್‌. ಬೋಸರಾಜ ಅವರ ಪುತ್ರ ರವಿ ಬೋಸರಾಜ ಪ್ರಬಲ ಆಕಾಂಕ್ಷಿಯಾಗಿದ್ದು, ಸೈಯ್ಯದ್‌ ಯಾಸಿನ್‌ ರಿಗೆ ಟಿಕೆಟ್‌ ಕೈ ತಪ್ಪುವ ಆತಂಕವಿದೆ.

ಆದರೆ, ಯಾರಿಗೇ ಟಿಕೆಟ್‌ ಸಿಕ್ಕರೂ ಬಂಡಾಯದ ಬಿಸಿ ತಟ್ಟದೆ ಇರಲಿಕ್ಕಿಲ್ಲ. ಡಾ| ಶಿವರಾಜ ಪಾಟೀಲ ಜೆಡಿಎಸ್‌ ನಿಂದ ಸ್ಪರ್ಧಿಸಿ ಅಚ್ಚರಿಯ ಗೆಲುವು ದಾಖಲಿಸಿದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕಾರಣ ನಿರೀಕ್ಷಿತ ಪ್ರಗತಿ ಸಾಧ್ಯವಾಗಲಿಲ್ಲ. 1400 ಕೋಟಿಗೂ ಅಧಿಕ ಅನುದಾನ ತಂದರೂ ಕೆಲವೊಂದು ಯೋಜನೆಗಳು ಅವರ ಅವಧಿಯಲ್ಲಿ ಪೂರ್ಣಗೊಳ್ಳಲಿಲ್ಲ. ಹೀಗಾಗಿ ಮಾಜಿ ಶಾಸಕರ ಕೆಲಸದ ಬಗ್ಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕ್ಷೇತ್ರದ ಬೆಸ್ಟ್‌ ಏನು?
ಧೂಳಿನ ಸಮಸ್ಯೆಯಿಂದ ಪ್ರಯಾಣಿಕರು ಸಾಕಷ್ಟು ಪ್ರಯಾಸ ಪಡುವಂತಾಗುತ್ತಿತ್ತು. ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಭೂಮಿ ತೇವ ಕಳೆದುಕೊಂಡು ವಾಹನಗಳ ಹಿಂದೆಯೆಲ್ಲ ಧೂಳು ಏಳುವುದು ಸಹಜವಾಗಿತ್ತು. ಆದರೆ, ಮಾಜಿ ಶಾಸಕರ ಅವಧಿಯಲ್ಲಿ ಕೆಲವೆಡೆ ಸಿಸಿ ರಸ್ತೆಗಳನ್ನಾಗಿ ನಿರ್ಮಿಸಿದ್ದು, ಆ ಸಮಸ್ಯೆಯಿಂದ ಕೊಂಚ ಮಟ್ಟಿಗಾದರೂ ತೊಂದರೆ ತಪ್ಪಿದಂತಾಗಿದೆ. ಆದರೆ, ಇನ್ನು ಸಾಕಷ್ಟು ಕಡೆ ರಸ್ತೆ ನಿರ್ಮಾಣವಾಗಿಲ್ಲ.

ಕ್ಷೇತ್ರದ ದೊಡ್ಡ ಸಮಸ್ಯೆ?
ನಗರದಲ್ಲಿ ಬೃಹತ್‌ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ಅವು ಜನರಿಗೆ ಅನುಕೂಲ ಕಲ್ಪಿಸುವ ಬದಲು ತೊಂದರೆ ಕೊಟ್ಟಿದ್ದೇ ಹೆಚ್ಚು ಎಂಬುದು ಸತ್ಯ. ಕಾಮಗಾರಿ ನೆಪದಲ್ಲಿ ಕಂಡಕಂಡಲ್ಲಿ ರಸ್ತೆ ಅಗೆಯುವುದು, ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುವ ಮೂಲಕ ಜನರಿಗೆ ತೊಂದರೆಯಾಗಿದ್ದೇ ಹೆಚ್ಚು. 102 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ವರ್ಷಗಳ ಹಿಂದೆ ಶುರುವಾದ ಒಳಚರಂಡಿ ಕಾಮಗಾರಿಗೆ ಇಂದಿಗೂ ಮೋಕ್ಷ ಸಿಕ್ಕಿಲ್ಲ. 

ಶಾಸಕರು ಏನಂತಾರೆ?
1400 ಕೋಟಿ ರೂ.ಗೂ ಅಧಿಕ ಅನುದಾನ ತಂದಿದ್ದು, ಸಾಕಷ್ಟು ಯೋಜನೆಗಳು ಪೂರ್ಣಗೊಂಡಿವೆ. ಕೆಲವೊಂದು ಮುಗಿಯುವ ಹಂತದಲ್ಲಿವೆ. 1050 ಬಡ ಜನರಿಗೆ ನಿವೇಶನ, 1500 ಜನರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. 102 ಕೋಟಿ ರೂ. ಮೊತ್ತದ ಯುಜಿಡಿ ಕಾಮಗಾರಿ ಮತ್ತು 120 ಕೋಟಿ ವೆಚ್ಚದ ನೀರಿನ ಯೋಜನೆ ಕೂಡ ಮುಗಿಯುವ ಹಂತದಲ್ಲಿದೆ.
ಡಾ| ಶಿವರಾಜ ಪಾಟೀಲ

ಕ್ಷೇತ್ರ ಮಹಿಮೆ
ಪ್ರತಿ ವರ್ಷ ಕಾರಹುಣ್ಣಿಮೆ ಸಂದರ್ಭದಲ್ಲಿ ಮುನ್ನೂರು ಕಾಪು ಸಮಾಜದಿಂದ ನಗರದ ಎಪಿಎಂಸಿಯಲ್ಲಿ ನಡೆಯುವ ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ ಆಕರ್ಷಣೀಯ. ರಾಜ್ಯ ಮಾತ್ರವಲ್ಲದೇ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದಲೂ ಭಾರಿ ಗಾತ್ರದ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತವೆ. ರೈತಾಪಿ ವರ್ಗಕ್ಕೆ ಅದೊಂದು ಸಂಭ್ರಮದ ಆಚರಣೆಯಾಗಿರುತ್ತದೆ.

ಪ್ರತಿಪಕ್ಷದಲ್ಲಿದ್ದರೂ ನಗರ ಶಾಸಕರಾಗಿದ್ದ ಡಾ| ಶಿವರಾಜ ಪಾಟೀಲ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಸಿಸಿ ರಸ್ತೆ ನಿರ್ಮಿಸುವ ಮೂಲಕ ನಗರದ ಧೂಳಿನ ಸಮಸ್ಯೆ ಕೊಂಚಮಟ್ಟಿಗೆ ನಿವಾರಿಸಿದ್ದಾರೆ. 
ರವಿಕುಮಾರ್‌

ನಗರದಲ್ಲಿ ಧೂಳಿನ ಸಮಸ್ಯೆಯಿಂದ ಜನ ಬೇಸತ್ತಿದ್ದಾರೆ. ಸ್ವತ್ಛತೆ ಮತ್ತು ಧೂಳು ಮುಕ್ತಗೊಳಿಸಿದರೆ ಅರ್ಧದಷ್ಟು ಪ್ರಗತಿ
ಸಾಧಿಸಿದಂತೆ. ಪಾಟೀಲರು ಆ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಬೇಕಿತ್ತು.
ಶಶಿಧರ ಸ್ವಾಮಿ

ಹೊಸಬರಿಗೆ ಅವಕಾಶ ನೀಡುವ ಮೂಲಕ ಕ್ಷೇತ್ರದ ಮತದಾರರು ಅಭಿವೃದ್ಧಿ ನಿರೀಕ್ಷಿಸಿದ್ದರು. ನಗರದ ಸಾಕಷ್ಟು
ಬಡಾವಣೆಗಳಲ್ಲಿ ಮೂಲ ಸೌಕರ್ಯಗಳೇ ಕಲ್ಪಿಸಿಲ್ಲ. ಸ್ಲಂಗಳ ಅಭಿವೃದ್ಧಿ ಕಡೆಗಣಿಸಲಾಗಿದೆ. 
ಸಂತೋಷಕುಮಾರ

ಕಳೆದ ಐದು ವರ್ಷಗಳ ಹಿಂದೆ ರಾಯಚೂರು ಹೇಗಿತ್ತೋ ಇಂದಿಗೂ ಹಾಗೇ ಇದೆ. ಯಾವ ಬದಲಾವಣೆಯೂ ಆಗಿಲ್ಲ. ನಗರದಲ್ಲಿ ಸಮಸ್ಯೆಗಳು ನಿವಾರಣೆಯಾಗಿಲ್ಲ. ಪಾಟೀಲರ ಅವಧಿಯಲ್ಲಿ ಆರಂಭವಾದ ಕೆಲಸಗಳು ಪೂರ್ಣಗೊಂಡಿಲ್ಲ.
ಲೋಕೇಶ

ಟಾಪ್ ನ್ಯೂಸ್

Bollywood: ರಿಲೀಸ್‌ಗೂ ಮುನ್ನವೇ ಕಂಗನಾ ʼಎಮರ್ಜೆನ್ಸಿʼಗೆ ಬ್ಯಾನ್‌ ಬಿಸಿ; ಕಾರಣವೇನು

Bollywood: ರಿಲೀಸ್‌ಗೂ ಮುನ್ನವೇ ಕಂಗನಾ ʼಎಮರ್ಜೆನ್ಸಿʼಗೆ ಬ್ಯಾನ್‌ ಬಿಸಿ; ಕಾರಣವೇನು

1-raga

RSS ಮೋಹನ್ ಭಾಗವತ್ ದೇಶದ್ರೋಹದ ಹೇಳಿಕೆ ನೀಡಿದ್ದಾರೆ: ರಾಹುಲ್ ಗಾಂಧಿ ಕಿಡಿ

ಅಧಿಕೃತವಾಗಿ ಅನೌನ್ಸ್‌ ಆಯಿತು ʼಜೈಲರ್‌ -2ʼ; Tiger Ka Hukum.. ಎನ್ನುತ್ತಲೇ ಮಿಂಚಿದ ತಲೈವಾ

ಅಧಿಕೃತವಾಗಿ ಅನೌನ್ಸ್‌ ಆಯಿತು ʼಜೈಲರ್‌ -2ʼ; Tiger Ka Hukum.. ಎನ್ನುತ್ತಲೇ ಮಿಂಚಿದ ತಲೈವಾ

Share Market: ಷೇರುಪೇಟೆ ಸೂಚ್ಯಂಕ 300 ಅಂಕ ಜಿಗಿತ: ಲಾಭಗಳಿಸಿದ ಷೇರು ಯಾವುದು?

Share Market: ಷೇರುಪೇಟೆ ಸೂಚ್ಯಂಕ 300 ಅಂಕ ಜಿಗಿತ: ಲಾಭಗಳಿಸಿದ ಷೇರು ಯಾವುದು?

Meta Lay off: ಟೆಕ್‌ ದೈತ್ಯ ಮೆಟಾ ಸಂಸ್ಥೆಯಿಂದ 3,600 ಉದ್ಯೋಗಿಗಳ ವಜಾ: ಜುಗರ್‌ ಬರ್ಗ್‌

Meta Lay off: ಟೆಕ್‌ ದೈತ್ಯ ಮೆಟಾ ಸಂಸ್ಥೆಯಿಂದ 3,600 ಉದ್ಯೋಗಿಗಳ ವಜಾ: ಜುಗರ್‌ ಬರ್ಗ್‌

Sarigama Viji: ಚಂದನವನದ ಹಿರಿಯ ನಟ ಸರಿಗಮ ವಿಜಿ ವಿಧಿವಶ

Sarigama Viji: ಚಂದನವನದ ಹಿರಿಯ ನಟ ಸರಿಗಮ ವಿಜಿ ವಿಧಿವಶ

Army Day 2025:ಜನವರಿ 15ರಂದು ಯಾಕೆ ಸೇನಾ ದಿನ?: ಭಾರತೀಯ ಸೇನೆಯ 77 ವರ್ಷಗಳ ಹಾದಿ

Army Day 2025: ಜನವರಿ 15ರಂದು ಯಾಕೆ ಸೇನಾ ದಿನ?: ಭಾರತೀಯ ಸೇನೆಯ 77 ವರ್ಷಗಳ ಹಾದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

k-s-eshwar

Raichur: ಹಸುಗಳ ಕೆಚ್ಚಲು ಕೊಚ್ಚಲು ಕಾಂಗ್ರೆಸ್ ಸರ್ಕಾರವೇ ಪ್ರೇರಣೆ: ಕೆಎಸ್‌ ಈಶ್ವರಪ್ಪ

Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ

Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ

1-raichur

Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ

Raichuru-Rims

Raichuru: ರಿಮ್ಸ್‌ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ

ಮುಂದಿನ ಅವಧಿಗೆ ನಾನೇ ಸಿಎಂ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Bollywood: ರಿಲೀಸ್‌ಗೂ ಮುನ್ನವೇ ಕಂಗನಾ ʼಎಮರ್ಜೆನ್ಸಿʼಗೆ ಬ್ಯಾನ್‌ ಬಿಸಿ; ಕಾರಣವೇನು

Bollywood: ರಿಲೀಸ್‌ಗೂ ಮುನ್ನವೇ ಕಂಗನಾ ʼಎಮರ್ಜೆನ್ಸಿʼಗೆ ಬ್ಯಾನ್‌ ಬಿಸಿ; ಕಾರಣವೇನು

2

Vitla: ಮಣಿಯಾರಪಾದೆ, ಅಮೈ, ಕುದ್ದುಪದವು ರಸ್ತೆ ಅಭಿವೃದ್ಧಿ ಎಂದು?

1

Uppinangady: ಎಲ್ಲೆಂದರಲ್ಲಿ ಪಾರ್ಕಿಂಗ್‌; ದಂಡ ವಿಧಿಸಲು ನಿರ್ಣಯ

1-raga

RSS ಮೋಹನ್ ಭಾಗವತ್ ದೇಶದ್ರೋಹದ ಹೇಳಿಕೆ ನೀಡಿದ್ದಾರೆ: ರಾಹುಲ್ ಗಾಂಧಿ ಕಿಡಿ

5-balalri

ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.