ಮುದಗಲ್ಲ ಕೋಟೆಗೆ ಕಾಂಗ್ರೆಸ್ ಲಗ್ಗೆ
Team Udayavani, Sep 4, 2018, 12:20 PM IST
ಮುದಗಲ್ಲ: ಸ್ಥಳೀಯ ಪುರಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಐತಿಹಾಸಿಕ ಮುದಗಲ್ಲ ಕೋಟೆಯಲ್ಲಿ ಕಾಂಗ್ರೆಸ್ ಧ್ವಜ ಹಾರುವುದು ಸ್ಪಷ್ಟವಾಗಿದೆ. ಸತತ 25 ವರ್ಷಗಳಿಂದ ಕಾಂಗ್ರೆಸ್ ಶಾಸಕರಿಲ್ಲದೆ ಮೆತ್ತಗಾಗಿದ್ದ ಕಾಂಗ್ರೆಸ್‌ಗೆ ಶಾಸಕ ಡಿ.ಎಸ್.ಹೂಲಗೇರಿ ನೇತೃತ್ವದಲ್ಲಿ ಸ್ಥಳೀಯ ಪುರಸಭೆ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ. ಒಟ್ಟು 23 ಸ್ಥಾನಗಳಲ್ಲಿ 14ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದು,
ಪುರಸಭೆ ಗದ್ದುಗೆ ಹಿಡಿಯಲಿದೆ. 8 ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕೇವಲ 1 ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಕಳಪೆ ಸಾಧನೆ ತೋರಿದೆ. ವಾರ್ಡ್‌ವಾರು ಫಲಿತಾಂಶ ಇಂತಿದೆ. ವಾರ್ಡ್-1ರಲ್ಲಿ ಕಾಂಗ್ರೆಸ್‌ನ ತಸ್ಲಿಮಾ ಹೈಮದ್ ಮುಲ್ಲಾ (253) ಗೆಲುವು ಸಾಧಿಸಿದ್ದರೆ, ಸಮೀಪ ಪ್ರತಿಸ್ಪರ್ಧಿ ಜೆಡಿಎಸ್‌ನ ಹಸನಸಾಬ ಮೌಲಾಸಾಬ (252) ಸೋತಿದ್ದಾರೆ.
ವಾರ್ಡ್-2ರಲ್ಲಿ ಜೆಡಿಎಸ್‌ನ ಅಮೀರ್ ಬೇಗ್ ಉಸ್ತಾದ್ (608) ಗೆಲುವಿನ ನಗೆ ಬೀರಿದ್ದರೆ, ಪಕ್ಷೇತರ ಅಭ್ಯರ್ಥಿ ಚಂದಾವಲಿಸಾಬ್ ಜಂಗ್ಲಿ (224) ಸೋತಿದ್ದಾರೆ. ವಾರ್ಡ್-3ರಲ್ಲಿ ಕಾಂಗ್ರೆಸ್‌ನ ಅಮೀನಾಬೇಗಂ (336) ಆಯ್ಕೆಯಾಗಿದ್ದರೆ, ಜೆಡಿಎಸ್‌ನ ದಾವಲಬೀ (225) ಸೋತಿದ್ದಾರೆ. ವಾರ್ಡ್-4ರಲ್ಲಿ ಕಾಂಗ್ರೆಸ್‌ನ ರಂಜಾನಬೀ (488) ಗೆಲುವು ಸಾಧಿಸಿದ್ದರೆ, ಜೆಡಿಎಸ್‌ನ ರೇಷ್ಮಾ ಬೇಗಂ (480) ಸೋತಿದ್ದಾರೆ.
ವಾರ್ಡ್-5ರಲ್ಲಿ ಜೆಡಿಎಸ್‌ನ ರಸೂಲ್‌ಸಾಬ್ ಎಸ್.ಆರ್. (298) ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ನ ಆಬೀದ್ ಹುಸೇನ್ (141) ಪರಾಭವಗೊಂಡಿದ್ದಾರೆ. ವಾರ್ಡ್-6ರಲ್ಲಿ ಜೆಡಿಎಸ್‌ನ ಲತಾ ನಾಗರಾಜ ತಳವಾರ (344) ಗೆಲುವು ದಾಖಲಿಸಿದ್ದರೆ, ಕಾಂಗ್ರೆಸ್ ನ ಕಮಲವ್ವ ದ್ಯಾಮಪ್ಪ (339) ಸೋಲುಂಡಿದ್ದಾರೆ. ವಾರ್ಡ್-7ರಲ್ಲಿ ಕಾಂಗ್ರೆಸ್‌ನ ಹನುಮಂತ (288) ಗೆಲುವಿನ ನಗೆ ಬೀರಿದ್ದರೆ, ಜೆಡಿಎಸ್‌ನ ಶಿಲ್ಪಾ ವಾಲ್ಮೀಕಿ (130) ಸೋತಿದ್ದಾರೆ.
ವಾರ್ಡ್-8ರಲ್ಲಿ ಕಾಂಗ್ರೆಸ್‌ನ ರಾಬಿಯಾ ಬೇಗಂ (317) ಆಯ್ಕೆಯಾಗಿದ್ದರೆ, ಜೆಡಿಎಸ್‌ನ ಲಕ್ಷ್ಮೀ ವಡ್ಡರ್ (229) ಸೋತಿದ್ದಾರೆ. ವಾರ್ಡ್-9ರಲ್ಲಿ ಕಾಂಗ್ರೆಸ್‌ನ ಶ್ರೀಕಾಂತಗೌಡ ಪಾಟೀಲ (333) ಜಯ ಸಾಧಿಸಿದ್ದರೆ, ಜೆಡಿಎಸ್‌ನ ಮಲ್ಲಿಕಾರ್ಜುನ ಮಾಟೂರು (242) ಸೋತಿದ್ದಾರೆ. ವಾರ್ಡ್-10ರಲ್ಲಿ ಜೆಡಿಎಸ್‌ನ ಗುಂಡಪ್ಪ ಗಂಗಾವತಿ (327) ಮತ ಪಡೆದು ಆಯ್ಕೆಯಾಗಿದ್ದರೆ, ಕಾಂಗ್ರೆಸ್‌ನ ಮಹಾಂತೇಶ ಪಾಟೀಲ (181) ಸೋತಿದ್ದಾರೆ. ವಾರ್ಡ್-11ರಲ್ಲಿ ಜೆಡಿಎಸ್‌ನ ದುರುಗಪ್ಪ ಕಟ್ಟಿಮನಿ (451) ಗೆಲುವಿನ ನಗೆ ಬೀರಿದ್ದರೆ, ಕಾಂಗ್ರೆಸ್‌ನ ರಾಮಣ್ಣ ಹಿರೇಮನಿ (345) ಪರಾಭವಗೊಂಡಿದ್ದಾರೆ.
ವಾರ್ಡ್-12ರಲ್ಲಿ ಜೆಡಿಎಸ್‌ನ ಬಾಬು ಉಪ್ಪಾರ (196) ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ನ ಹುಸೇನಸಾಬ್ (175) ಸೋಲುಂಡಿದ್ದಾರೆ. ವಾರ್ಡ್-13ರಲ್ಲಿ ಜೆಡಿಎಸ್‌ನ ಮಹಾಲಕ್ಷ್ಮೀ ಕರಿಯಪ್ಪ 441 ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ನ ಮಂಜುಳಾ ಭೀಮಣ್ಣ (335) ಸೋತಿದ್ದಾರೆ. ವಾರ್ಡ್-14ರಲ್ಲಿ ಕಾಂಗ್ರೆಸ್‌ನ ಎಸ್.ಕೆ. ಅಜ್ಮಿರ್ (217) ಗೆಲುವು ಸಾಧಿಸಿದ್ದರೆ, ಜೆಡಿಎಸ್‌ನ ಮಲ್ಲಪ್ಪ ಹೂಗಾರ (86) ಪರಾಭವಗೊಂಡಿದ್ದಾರೆ.
ವಾರ್ಡ್-15ರಲ್ಲಿ ಕಾಂಗ್ರೆಸ್‌ನ ಮಹಾದೇವಮ್ಮ ಗುತ್ತೇದಾರ (250) ಗೆಲುವು ಪಡೆದಿದ್ದರೆ, ಜೆಡಿಎಸ್‌ನ ತಬಸುಮ್ (208) ಸೋಲುಂಡಿದ್ದಾರೆ. ವಾರ್ಡ್-16ರಲ್ಲಿ ಜೆಡಿಎಸ್‌ನ ಮೈಬೂಬ ಪಾಷಾ 267 ಗೆಲುವು ದಾಖಲಿಸಿದ್ದರೆ, ಕಾಂಗ್ರೆಸ್‌ನ
ಖಾಜಾಪಾಷಾ ಗಾಡಿವಾನ ಸೋತಿದ್ದಾರೆ. ವಾರ್ಡ್-17ರಲ್ಲಿ ಕಾಂಗ್ರೆಸ್‌ನ ಕಾಶಿಂಬಿ (530) ಗೆಲುವು ಸಾಧಿಸಿದ್ದರೆ, ಜೆಡಿಎಸ್‌ನ ಸುಜಾತಾ (168) ಸೋತಿದ್ದಾರೆ.
ವಾರ್ಡ್-18ರಲ್ಲಿ ಕಾಂಗ್ರೆಸ್‌ನ ಶಬ್ಬೀರ್ ಪಾಷಾ (329) ಗೆಲುವು ಪಡೆದಿದ್ದರೆ, ಪಕ್ಷೇತರ ಅಭ್ಯರ್ಥಿ ಮೊಹಿನ್ ಪಾಷಾ (151) ಸೋತಿದ್ದಾರೆ. ವಾರ್ಡ್-19ರಲ್ಲಿ ಬಿಜೆಪಿಯ ಲಕ್ಷ್ಮೀಬಾಯಿ (602) ಜಯ ಸಾಧಿಸಿದ್ದರೆ, ಕಾಂಗ್ರೆಸ್‌ನ ಸವಿತಾ (510) ಸೋಲುಂಡಿದ್ದಾರೆ.
ವಾರ್ಡ್-20ರಲ್ಲಿ ಕಾಂಗ್ರೆಸ್‌ನ ಶಿವನಾಗಪ್ಪ (492) ಗೆಲುವು ಸಾಧಿಸಿದ್ದರೆ, ಜೆಡಿಎಸ್‌ನ ರೆಹಮಾನ್ ಸಾಬ್ (436) ಸೋತಿದ್ದಾರೆ. ವಾರ್ಡ್-21ರಲ್ಲಿ ಕಾಂಗ್ರೆಸ್‌ನ ಅಮೀನಾಬೇಗಂ (389) ಗೆಲುವು ಸಾಧಿಸಿದ್ದರೆ, ಬಿಜೆಪಿಯ ನೇತ್ರಾವತಿ (188) ಸೋತಿದ್ದಾರೆ. ವಾರ್ಡ್-22ರಲ್ಲಿ ಕಾಂಗ್ರೆಸ್‌ನ ಶರಣಪ್ಪ ವಡ್ಡರ್ (428) ಆಯ್ಕೆಯಾಗಿದ್ದರೆ, ಜೆಡಿಎಸ್‌ನ ಷಣ್ಮುಖಪ್ಪ ಚೆಲುವಾದಿ (163) ಪರಾಭವಗೊಂಡಿದ್ದಾರೆ. ವಾರ್ಡ್-23ರಲ್ಲಿ ಕಾಂಗ್ರೆಸ್‌ನ ಜಯಶ್ರೀ (412) ಗೆಲುವು ಸಾಧಿಸಿದ್ದರೆ, ಜೆಡಿಎಸ್‌ನ ಸಾವಿತ್ರಿ (325) ಸೋತಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ ಮುದಗಲ್ಲ: ಪಟ್ಟಣದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ವಾರ್ಡ್‌ವಾರು ಅಭ್ಯರ್ಥಿಗಳ ಗೆಲುವು ಘೋಷಣೆಯಾಗುತ್ತಿದ್ದಂತೆ ಆಯಾ ಭಾಗದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಗುಲಾಲು ಎರಚಿ, ಪಟಾಕಿ ಸಿಡಿಸಿ, ಸಿಹಿ ತಿನ್ನಿಸಿ ಸಂಭ್ರಮಿಸಿದರು. ವಿಜೇತ ಅಭ್ಯರ್ಥಿಗಳನ್ನು ಪಕ್ಷದ ಧ್ವಜದೊಂದಿಗೆ ವಾರ್ಡ್‌ಗಳಲ್ಲಿ ಮೆರವಣಿಗೆ ಮಾಡಿದರು. ವಿಜೇತ ಅಭ್ಯರ್ಥಿಗಳು ಕಾರ್ಯಕರ್ತರೊಂದಿಗೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಜೆಡಿಎಸ್ ವಿಜಯೋತ್ಸವ: ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಜೆಡಿಎಸ್ 8 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಜೆಡಿಎಸ್ ಕಾರ್ಯಕರ್ತರು ಕೂಡ ತಮ್ಮ ವಾರ್ಡ್ ಅಭ್ಯರ್ಥಿ ಜಯ ಸಾಧಿಸುತ್ತಿದ್ದಂತೆ ವಿಜಯೋತ್ಸವ ಆಚರಿಸಿದರು.
ಹಿಂದೇನಾಗಿತ್ತು?
ಕಳೆದ ಬಾರಿಯ 19 ವಾರ್ಡ್‌ಗಳ ಪೈಕಿ 9 ಜೆಡಿಎಸ್, 7 ಕಾಂಗ್ರೆಸ್, 2 ಬಿಎಸ್‌ಆರ್, 1 ಪಕ್ಷೇತರರು ಜಯ ಗಳಿಸಿದ್ದರು. ಇಬ್ಬರು ಬಿಎಸ್‌ಆರ್ ಮತ್ತು ಒಂದು ಪಕ್ಷೇತರ ಬಲದೊಂದಿಗೆ ಜೆಡಿಎಸ್ ಪುರಸಭೆ ಅಧಿಕಾರದ ಗದ್ದುಗೆ ಏರಿತ್ತು. ಆದರೆ ಈ ಭಾರಿ ವಾರ್ಡ್‌ಗಳನ್ನು ವಿಂಗಡಿಸಿ 23 ವಾರ್ಡ್‌ಗಳನ್ನು ರಚಿಸಲಾಗಿತ್ತು. ಈಗ 14ರಲ್ಲಿ ಕಾಂಗ್ರೆಸ್, 8ರಲ್ಲಿ ಜೆಡಿಎಸ್,
ಕೇವಲ 1ರಲ್ಲಿ ಬಿಜೆಪಿ ಜಯ ಗಳಿಸಿದ್ದು, ಕಾಂಗ್ರೆಸ್ ಅಧಿಕಾರ ತನ್ನದಾಗಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.