ಕೋರ್ಟ್ ಆರಂಭಕ್ಕೆ ಒತ್ತಾಯಿಸಿ ಬೆಂಗಳೂರಿಗೆ ವಕೀಲರ ನಿಯೋಗ
Team Udayavani, Nov 18, 2021, 6:26 PM IST
ಮಸ್ಕಿ: ಪಟ್ಟಣದಲ್ಲಿ ನೂತನ ಜೆಎಂಎಫ್‌ಸಿ ನ್ಯಾಯಾಲಯ ಸ್ಥಾಪಿಸಲು ಒತ್ತಾಯಿಸಿ ಬೆಂಗಳೂರಿಗೆ ನಿಯೋಗ ತೆರಳಲು ನಿರ್ಧರಿಸಲಾಯಿತು.
ಮಸ್ಕಿ ತಾಲೂಕು ವೇದಿಕೆ ವಕೀಲರು ಭ್ರಮರಾಂಭ ಕಲ್ಯಾಣ ಮಂಟಪದ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಿದರು. ಹಿಂದಿನ ಸಭೆಯಲ್ಲಿ ನಿರ್ಣಯಿಸಿದಂತೆ ಜಿಲ್ಲಾ ಸತ್ರ ನ್ಯಾಯಾಧಿಧೀಶರನ್ನು ಕೆಲ ಹಿರಿಯ ವಕೀಲರು ಭೇಟಿಯಾಗಿ ಮಸ್ಕಿ ತಾಲೂಕಿಗೆ ಹೊಸ ನ್ಯಾಯಾಲಯದ ಸ್ಥಾಪನೆ ಸಂಬಂಧವಾಗಿ ವಿನಂತಿ ಮಾಡಿಕೊಳ್ಳಲಾಗಿತ್ತು. ಈ ಬಗೆಗಿನ ಪ್ರಗತಿ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಬಳಿಕ ಕೋರ್ಟ್ ಸ್ಥಾಪನೆಗೆ ಸಂಘಟನಾತ್ಮಕವಾಗಿ ಹೋರಾಟ ನಡೆಸುವುದು, ರಾಜಕೀಯ, ಸಾಮಾಜಿಕವಾಗಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬೇಕು ಎನ್ನುವ ಅಂಶಗಳು ಸಭೆಯಲ್ಲಿ ಪ್ರಸ್ತಾಪವಾದವು. ಬಳಿಕ ಶೀಘ್ರ ಎಲ್ಲ ವರದಿಗಳನ್ನು ಇಲ್ಲಿ ದಾಖಲಾಗುವ ಸರಾಸರಿ ಕೇಸುಗಳ ಅಂಕಿ-ಸಂಖ್ಯೆ ಸಮೇತ ಶೀಘ್ರ ಬೆಂಗಳೂರಿಗೆ ನಿಯೋಗ ತೆರಳಿ ಹೈಕೋರ್ಟ್ ನ್ಯಾಯಾಧೀಶರ ಬಳಿ ಮನವಿ ಮಾಡಲು ನಿರ್ಧರಿಸಲಾಯಿತು.
ಈ ವೇಳೆ ಹಿರಿಯ ವಕೀಲರಾದ ರುದ್ರಪ್ಪ ಎಲಿಗಾರ, ರಾಮಣ್ಣ ನಾಯಕ, ಈಶಪ್ಪ ದೇಸಾಯಿ, ಶರಣಪ್ಪ ಹುಲ್ಲೂರು, ಎಂ.ಎಸ್. ನಾಡಗೌಡ, ಹರಿಶ್ಚಂದ್ರ ರಾಠೊಡ್, ನಿರುಪಾದೆಪ್ಪ ಗುಡಿಹಾಳ, ಬಸವರಾಜ ಪಾಟೀಲ್ ಡೋಣಮರಡಿ, ಕೆ. ಶಂಕ್ರಪ್ಪ, ಅಮರೇಶ ಗೌಡನಭಾವಿ, ವೆಂಕೋಬ ದೇಸಾಯಿ, ಬಸವರಾಜ ಬುರಲಿ, ಅಮರೇಗೌಡ, ಬಸವರಾಜ ಯತ್ನಟ್ಟಿ, ನಭಿ ಶೇಡ್ಮಿ ಸೇರಿದಂತೆ 40ಕ್ಕಿಂತ ಹೆಚ್ಚು ವಕೀಲರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.