ಹಟ್ಟಿ ಚಿನ್ನದ ಗಣಿ ಭದ್ರತಾ ಸಿಬ್ಬಂದಿಗೂ ಸೋಂಕು
Team Udayavani, Jun 17, 2020, 8:24 AM IST
ಹಟ್ಟಿ ಚಿನ್ನದ ಗಣಿ: ಬಳ್ಳಾರಿ ಜಿಂದಾಲ್ ಬಳಿಕ ಈಗ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಹಟ್ಟಿ ಚಿನ್ನದ ಗಣಿ ಕಂಪನಿಗೂ ಕೋವಿಡ್ ಸೋಂಕು ದಾಳಿ ಇಟ್ಟಿದೆ. ಕಂಪನಿ ಭದ್ರತಾ ಸಿಬ್ಬಂದಿಗೆ ಕೋವಿಡ್ ಸೋಂಕು ತಲುಲಿದ್ದು, ಉಳಿದ ಕಾರ್ಮಿಕರಿಗೆ ಆತಂಕ ಶುರುವಾಗಿದೆ.
ಸೋಂಕಿತ ವ್ಯಕ್ತಿ ಕಲಬುರ್ಗಿ ಸೇರಿದಂತೆ ಹೊರ ರಾಜ್ಯಕ್ಕೂ ಹೋಗಿ ಬಂದಿದ್ದಾನೆ ಎಂದು ತಿಳಿದು ಬಂದಿದೆ. ಸೋಂಕಿತನನ್ನು ರಾಯಚೂರಿನ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಸೋಂಕಿತ ಸ್ವಯಂ ಪ್ರೇರಿತನಾಗಿ ಕೋವಿಡ್ ಪರೀಕ್ಷೆಗೊಳಪಟ್ಟಿದ್ದು, ಫಲಿತಾಂಶ ಬರುವ ಮುನ್ನವೇ ಕೆಲಸಕ್ಕೆ ಹಾಜರಾಗಿದ್ದಾನೆ. ತನ್ನ ಪತ್ನಿ ಆರೋಗ್ಯ ತಪಾಸಣೆಗಾಗಿ ಮಸ್ಕಿ ಆಸ್ಪತ್ರೆಗೂ ಭೇಟಿ ನೀಡಿದ್ದಾನೆ. ಇದರಿಂದ ದೇಶದಲ್ಲಿಯೇ ಚಿನ್ನ ಉತ್ಪಾದಿಸುವ ಏಕೈಕ ಗಣಿ ಕಂಪನಿಯಾದ ಹಟ್ಟಿ ಚಿನ್ನದ ಗಣಿ ಕಂಪನಿ ಮೇಲೆ ಕೊರೋನ ಸೋಂಕಿನ ಕರಿಮೋಡ ಕವಿದಂತಾಗಿದೆ.
ಸೋಂಕಿತ ಮೇ 20ರಿಂದ ಕಂಪನಿಯಲ್ಲಿ ಬೇರೆ ಬೇರೆ ಕಡೆ ಕರ್ತವ್ಯ ನಿರ್ವಹಿಸಿದ್ದಾನೆ. ತಹಶೀಲ್ದಾರ್ ಚಾಮರಾಜ ಪಾಟೀಲ, ಸಿಪಿಐ ಯಶವಂತ ಬಿಸ್ನಳ್ಳಿ, ಕೋವಿಡ್-19 ನೋಡಲ್ ಅ ಧಿಕಾರಿ ನಾಗರಾಜ ಗೌಡ, ವೈದ್ಯಾಧಿ ಕಾರಿ ಲಕ್ಷ್ಮೀಕಾಂತ, ಹಟ್ಟಿ ಪೊಲೀಸ್ ಠಾಣೆ ಪಿಎಸ್‌ಐ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಸೋಂಕಿತನು ವಾಸಿಸುವ ಮನೆ ಸುತ್ತ-ಮುತ್ತಲಿನ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಿದ್ದು, 14 ದಿನಗಳವರೆಗೆ ಯಾರೂ ಮನೆಯಿಂದ ಹೊರ ಬರದಂತೆ ಸೂಚಿಸಿದ್ದಾರೆ. ಸೋಂಕಿತನ ಪ್ರಥಮ ದ್ವಿತೀಯ ಸಂಪರ್ಕದ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.