ಪದವಿ ವಿದ್ಯಾರ್ಥಿಗಳಿಗೆ “ಪರೀಕ್ಷಾ ಭೀತಿ’


Team Udayavani, Nov 22, 2020, 5:34 PM IST

ಪದವಿ ವಿದ್ಯಾರ್ಥಿಗಳಿಗೆ “ಪರೀಕ್ಷಾ ಭೀತಿ’

ರಾಯಚೂರು: ಕಷ್ಟಪಟ್ಟು ಓದಿದರೂ ಪರೀಕ್ಷೆ ಎಂದರೆ ಭಯ ಪಟ್ಟುಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಈಗ ಕೋವಿಡ್‌-19 ಪರೀಕ್ಷೆ= ಮಾಡಿಸಿಕೊಳ್ಳಲು ಭಯ ಪಡುತ್ತಿದ್ದಾರೆ.

ಕಾಲೇಜಿಗೆ ಬರಲು ಕೋವಿಡ್‌-19 ಪರೀಕ್ಷಾ ವರದಿ ಕಡ್ಡಾಯಗೊಳಿಸಿರುವ ಸರ್ಕಾರದನಿಯಮದಿಂದ ಕಾಲೇಜಿನತ್ತ ಯಾವೊಬ್ಬ ವಿದ್ಯಾರ್ಥಿ ಕೂಡ ಸುಳಿಯದಂತಾಗಿದೆ. ಶುರುವಾಗಿ ನಾಲ್ಕು ದಿನ ಕಳೆದರೂ ನಗರದ ಬಹುತೇಕ ಕಾಲೇಜುಗಳು ವಿದ್ಯಾರ್ಥಿಗಳಿಲ್ಲದೇ ಭಣಗುಡುತ್ತಿವೆ. ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದರೂಶನಿವಾರ ಕೇವಲ ನಾಲ್ಕು ವಿದ್ಯಾರ್ಥಿನಿಯರು ಮಾತ್ರ ಆಗಮಿಸಿದ್ದರು. ಮೊದಲ ದಿನ ಬಂದಿದ್ದಎಂಕಾಂ ವಿದ್ಯಾರ್ಥಿನಿ ಕೂಡ ಸಹಪಾಠಿಗಳಿಲ್ಲದೇ ಬರುವುದನ್ನು ನಿಲ್ಲಿಸಿದ್ದಾರೆ. ಇನ್ನೂ ಬಿಎ ವಿದ್ಯಾರ್ಥಿಗಳಂತೂ ಕಾಲೇಜಿನತ್ತ ಸುಳಿದೇ ಇಲ್ಲ. ಅದು ಮಾತ್ರವಲ್ಲ ಬೇರೆ ಕಾಲೇಜುಗಳಿಗೂ ಮಕ್ಕಳು ಸುಳಿಯುತ್ತಿಲ್ಲ. ಇದರಿಂದ ಕಾಲೇಜುಗಳಲ್ಲಿ ಬೋಧಕರು ವಿದ್ಯಾರ್ಥಿಗಳಿಗಾಗಿ ಕಾದು ಕೂಡುವಂತಾಗಿದೆ. ಕಾಲೇಜಿಗೆ ಬರುತ್ತಾರಾದರೂ ಏನು ಬೇಕು ಎಂದು ವಿಚಾರಿಸಿಕೊಂಡು ಮರಳಿ ಹೋಗುತ್ತಾರೆ. ಮತ್ತೆ ಸುಳಿಯವುದೆ ಇಲ್ಲ.

ಪರೀಕ್ಷೆಗೆ ನಿರಾಸಕ್ತಿ: ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ವಿದ್ಯಾರ್ಥಿಗಳಲ್ಲಿ ಸಂಪೂರ್ಣ ನಿರಾಸಕ್ತಿ ಕಂಡು ಬರುತ್ತಿದೆ. ಜಿಲ್ಲಾಡಳಿತ ನೀಡುವ ವರದಿಯಲ್ಲಿ ಹೆಚ್ಚು ಪರೀಕ್ಷೆ ನಡೆಸಿರುವ ಮಾಹಿತಿ ಇಲ್ಲ. ಪರೀಕ್ಷೆ ಮಾಡಿಸಿಕೊಳ್ಳಲು ಹೋಗುವ ವಿದ್ಯಾರ್ಥಿಗಳು ಕೂಡ ನಮಗೆ ನೆಗೆಟಿವ್‌ ವರದಿ ಕೊಡಿ ಎಂದು ಕೇಳುತ್ತಿದ್ದಾರೆ. ಪರೀಕ್ಷೆಯೇ ಮಾಡಿಸಿಕೊಳ್ಳದೆ ವರದಿ ನೀಡಲ್ಲ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಹೇಳಿದರೆ ಪರೀಕ್ಷೆಗೊಳಪಡದೆ ಹಿಂದಿರುಗುತ್ತಿದ್ದಾರೆ. ಇನ್ನು ಪಾಲಕರು ಕೂಡಮಕ್ಕಳು ಕಾಲೇಜಿಗೆ ಹೋಗುವುದು ಬೇಡ ಎನ್ನುವ ರೀತಿಯಲ್ಲೇ ಮಾತನಾಡುತ್ತಿದ್ದಾರೆ. ಇದರಿಂದ ಕಾಲೇಜುಗಳು ಭಣ ಭಣ ಎನ್ನುವಂತಾಗಿದೆ.

ಆನ್‌ಲೈನ್‌ ಕ್ಲಾಸ್‌ಗೆ ಒತ್ತು: ನಾಲ್ಕು ದಿನ ಕಳೆದರೂ ವಿದ್ಯಾರ್ಥಿಗಳ ಸುಳಿವಿಲ್ಲದ್ದನ್ನು ಅರಿತ ಕಾಲೇಜಿನ ಆಡಳಿತ ಮಂಡಳಿಗೂ ಆನ್‌ಲೈನ್‌ ಕ್ಲಾಸ್‌ಗಳಿಗೆ ವಿಶೇಷ ಒತ್ತು ನೀಡುತ್ತಿವೆ. ಎಲ್ಲ ಬೋಧಕರಿಗೆ ಆನ್‌ಲೈನ್‌ ಕ್ಲಾಸ್‌ಗಳನ್ನು ಕಡ್ಡಾಯವಾಗಿನಡೆಸುವಂತೆತಿಳಿಸಲಾಗಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ ಗಳಿವೆ. ಬೋಧನೆ ಮಾಡಿದ ವಿಡಿಯೋಗಳನ್ನುಕಳುಹಿಸಲಾಗುತ್ತಿದೆ. ಈಗಾಗಲೇ ಸಂಬಂ ಧಿಸಿದ ತರಗತಿಗಳು ಬೋಧಕರು ವಿದ್ಯಾರ್ಥಿಗಳ ವಾಟ್ಸ್‌ ಆ್ಯಪ್‌ ಗ್ರೂಪ್‌ಗ್ಳಲ್ಲೇ ಸಂವಹನ ನಡೆಸುತ್ತಿದ್ದಾರೆ.

ವರದಿಯೇ ಬಂದಿಲ್ಲ: ನಗರದ ಸರ್ಕಾರಿ ಪದವಿ ಕಾಲೇಜಿನ ಬೋಧಕ ವೃಂದದವರ ಕೋವಿಡ್‌-19 ಪರೀಕ್ಷಾ ವರದಿ ಇನ್ನೂ ನೀಡಿಲ್ಲ. 26 ಕಾಯಂಉಪನ್ಯಾಸಕರು, 10 ಅತಿಥಿ ಉಪನ್ಯಾಸಕರು,ಬೋಧಕೇತ ಸಿಬ್ಬಂದಿ ಸೇರಿದಂತೆ 40ಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ನ.13ರಂದು ಕಾಲೇಜಿನಲ್ಲಿ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ಈವರೆಗೂ ವರದಿ ನೀಡಿಲ್ಲ

ನಾಲ್ಕು ದಿನ ಕಳೆದರೂ ವಿದ್ಯಾರ್ಥಿಗಳು ಬರದಿರುವುದು ಅಚ್ಚರಿ ಮೂಡಿಸಿದೆ. ಸಾವಿರಾರು ವಿದ್ಯಾರ್ಥಿಗಳಿದ್ದು, ನಾಲ್ಕು ಜನ ಬಂದಿದ್ದಾರೆ.ಪರೀಕ್ಷೆ ಮಾಡಿಸಿಕೊಳ್ಳಲು ಹೆದರಿದ್ದು, ಮನೆಯಲ್ಲಿ ಪಾಲಕರು ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ಆನ್‌ಲೈನ್‌ ತರಗತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಪ್ರೊ| ಮಲ್ಲನಗೌಡ, ಪ್ರಾಚಾರ್ಯ, ಸರ್ಕಾರಿ ಪದವಿ ಕಾಲೇಜ್‌.

ಕೋವಿಡ್‌-19 ಪರೀಕ್ಷೆಗೆ ವಿಶೇಷ ಕೇಂದ್ರ ಆರಂಭಿಸಿಲ್ಲ.ಆಯಾ ತಾಲೂಕು ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಂಡರೆ ವರದಿ ನೀಡಲಾಗುವುದು. ಮಾದರಿಗಳ ಸಂಗ್ರಹದ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿಲ್ಲ.ನಿತ್ಯ ಒಂದು ಸಾವಿರ ಮಾದರಿಗಳ ಪರೀಕ್ಷೆ ಮಾಡುವ ಸಾಮರ್ಥ್ಯದ ಯಂತ್ರಗಳಿದ್ದು, ವಿಳಂಬವಾಗಲ್ಲ. ಡಾ|ಬಸವರಾಜ್‌ ಪೀರಾಪುರೆ, ರಿಮ್ಸ್‌ ನಿರ್ದೇಶಕ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

Sindhanur: ಲಾರಿ ಪಲ್ಟಿ… ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.