ಸಮುದಾಯದಲ್ಲಿ ಬೆರೆತರೆ ಕಥೆ ಸೃಷ್ಟಿ
Team Udayavani, Mar 31, 2018, 3:37 PM IST
ರಾಯಚೂರು: ಯಾವುದೇ ಸಾಹಿತಿ ಒಂದು ಕೃತಿ ರಚಿಸುವ ಮುನ್ನ ಪರಿಸರದೊಂದಿಗೆ ಬೆರೆಯಬೇಕು. ಅಂತರಾತ್ಮದಲ್ಲಿ ಪರಿಸರದೊಂದಿಗೆ ಸಂವಾದ ನಡೆಸಿದಾಗ ಕಥೆ ಸೃಷ್ಟಿ ಸಾಧ್ಯ ಎಂದು ಮೈಸೂರಿನ ಹಿರಿಯ ಸಾಹಿತಿ ಜಿ.ಪಿ.ಬಸವರಾಜ ಹೇಳಿದರು.
ನಗರದ ಕೃಷಿ ತಾಂತ್ರಿಕ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಕಸಾಪ ಜಿಲ್ಲಾ ಘಟಕದಿಂದ ಹೈ-ಕ ಭಾಗದ ಯುವ ಕಥೆಗಾರರಿಗಾಗಿ ಹಮ್ಮಿಕೊಂಡ ಎರಡು ದಿನಗಳ ಸಣ್ಣ ಕಥೆಗಳ ಕಥನ ಮಾದರಿಯ ಕಥಾ ಕಮ್ಮಟಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಏಕಾಂತದಲ್ಲಿ ಕುಳಿತು ಕಥೆ ಬರೆಯಬಹುದೇ ವಿನಃ ಶೂನ್ಯದಲ್ಲಿ ಕುಳಿತರೆ ಕಥೆ ಸೃಷ್ಟಿಸಲು ಸಾಧ್ಯವಿಲ್ಲ. ನೆಲ, ಪರಿಸರ ಹಾಗೂ ಸಮುದಾಯದೊಂದಿಗೆ ಮುಖಾಮುಖೀಯಾದಾಗ ಮಾತ್ರ ಕಥೆ ಹುಟ್ಟಲು ಸಾಧ್ಯ. ನೆಲದ ಭಾಷೆ, ವೈಚಾರಿಕತೆ, ಸಾಮಾಜಿಕ ಒತ್ತಡಗಳಿಗೆ ಮುಖಾಮುಖೀಯಾದಾಗ ಮಾತ್ರ ಕಥೆ ಹುಟ್ಟಲು ಸಾಧ್ಯ ಎಂದರು.
118 ವರ್ಷಗಳ ಹಿಂದೆ ಹುಟ್ಟಿದ ಕಥೆಯನ್ನು ಪ್ರಬಂಧದ ಆಚೆಗೆ ನೋಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಥೆ ಮತ್ತು ಪ್ರಬಂಧಗಳ ನಡುವೆ ತೆಳುವಾದ ಗೆರೆ ಮಾತ್ರ ಕಂಡು ಬರುತ್ತಿದೆ. ರಾಜ್ಯದಲ್ಲಿನ ಪ್ರಮುಖ ಕಥೆಗಾರರನ್ನು ನೋಡಿದಾಗ ಈ ಭಾಗದವರೇ ಕಂಡು ಬರುತ್ತಿರುವುದಕ್ಕೆ ಇಲ್ಲಿಯ ಪರಿಸರವೇ ಕಾರಣವಾಗಿದೆ ಎಂದರು. ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ| ಅಮರೇಶ ನುಗಡೋಣಿ ಮಾತನಾಡಿ, ಕಥೆಯ ರಚನೆ ಮತ್ತು ರೂಪದ ಬಗ್ಗೆ ಮೊದಲು ಆಲೋಚಿಸಬೇಕು. ಕಥೆಯ ಬಗ್ಗೆ ಆಲೋಚಿಸುವಾಗ ಹೇಗೆ ಆರಂಭಿಸಬೇಕು, ಕೊನೆಗಾಣಿಸಬೇಕು ಎನ್ನುವ ಗೊಂದಲವಿರುತ್ತದೆ. ಕಥೆಯ ಮಾದರಿ ಸೃಷ್ಟಿಸಿದಾಗ ಮಾತ್ರ ಕಥೆ, ಪಾತ್ರ, ಸನ್ನಿವೇಶಗಳು ಹುಟ್ಟುತ್ತವೆ ಎಂದರು.
ದುಃಖ, ಬಡತನ ಮತ್ತು ನೋವು ಇದ್ದಲ್ಲಿ ಕಥೆ ಹುಟ್ಟುತ್ತದೆ. ಬರವಣಿಗೆ, ಬದುಕು ಬೇರೆಯಲ್ಲ. ಬರವಣಿಗೆ ಎನ್ನುವುದು ಚಿಂತನಾ ಕ್ರಮವಾಗಿದ್ದು, ಬೇರೆಯವರಿಗಿಂತ ಭಿನ್ನವಾಗಿ ಯೋಚಿಸಿದಾಗ ಮಾತ್ರ ಕಥೆಯಲ್ಲಿ ಹೊಸತನ ಕಾಣಲು ಸಾಧ್ಯ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಕುಮಟಾದ ಸಾಹಿತಿ ಶ್ರೀಧರ ಬಳಿಗಾರ, ಕಸಾಪ ಗೌರವ ಕಾರ್ಯದರ್ಶಿ ಭೀಮನಗೌಡ ಇಟಗಿ, ಜೆ.ಎಸ್.ಈರಣ್ಣ, ಶಿಬಿರದ ಸಂಚಾಲಕ ಡಾ| ದಸ್ತಗೀರಸಾಬ್ ದಿನ್ನಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.