ಭತ್ತ ಕಟಾವು ಯಂತ್ರಕ್ಕೆ ಡಿಮ್ಯಾಂಡ್
Team Udayavani, Nov 9, 2020, 8:10 PM IST
ದೇವದುರ್ಗ: ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದ ರೈತರು ಭತ್ತದ ಕೊಯ್ಲು ಯಂತ್ರದ ಮೊರೆ ಹೋಗಿದ್ದು, ಭತ್ತ ಕೊಯ್ಯುವ ಯಂತ್ರಗಳಿಗೆ ಭಾರೀ ಬೇಡಿಕೆ ಬಂದಿದೆ.
ಬೇಸಿಗೆ ಬೆಳೆ ನಾಟಿ ಮಾಡಲು ರೈತರು ಕೂಲಿ ಕಾರ್ಮಿಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನೊಂದಡೆ ಕೊಯ್ಲಿಗೆ ಬಂದ ಭತ್ತ ಕಟಾವಿಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಕೃಷ್ಣಾ ನದಿ ಒಡಲು ಹಾಗೂ ನಾರಾಯಣಪುರ ಬಲದಂಡೆ ನಾಲೆ ಆಶ್ರಯ ದಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದ್ದು, ಕೂಲಿಕಾರರ ಬೇಡಿಕೆ ಹಾಗೂ ಭತ್ತ ಕೊಯ್ಯುವ ಯಂತ್ರಗಳ ಬಾಡಿಗೆ ಏರಿಕೆ ಅನ್ನದಾತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
2ರಿಂದ 3ಸಾವಿರ ಬೇಡಿಕೆ: ಭತ್ತ ಕಟಾವಿಗೆ ಯಂತ್ರದ ಮಾಲೀಕರು ಒಂದು ತಾಸಿಗೆ 2ರಿಂದ 3 ಸಾವಿರ ರೂ.ವರೆಗೆ ಬಾಡಿಗೆ ನಿಗದಿ ಪಡಿಸಿದ್ದಾರೆ. ಹೀಗಾಗಿ ಕೆಲ ರೈತರು ದರ ಕಡಿಮೆ ಮಾಡುವಂತೆ ದುಂಬಾಲು ಬಿದ್ದರೆ, ಇನ್ನೂ ಕೆಲ ರೈತರು ಅನಿವಾರ್ಯ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿದ್ದಾರೆ.
ಸಾವಿರಾರು ಹೆಕ್ಟೇರ್ ಪ್ರದೇಶ: ತಾಲೂಕಿನಲ್ಲಿ 29.021 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದೆ. ಕೆಲ ಗ್ರಾಮಗಳಲ್ಲಿ ಭತ್ತ ಕಟಾವು ಮಾಡಿದ್ದು, ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇನ್ನೂ ಬಹುತೇಕ ಗ್ರಾಮಗಳಲ್ಲಿ ಕಟಾವು ಮಾಡಬೇಕಿದೆ. ಮಧ್ಯವರ್ತಿಗಳು ಹೊಲಕ್ಕೆ ಬಂದು ಭತ್ತ ಖರೀದಿಸುತ್ತಿದ್ದಾರೆ. ಆದರೆ ಆದರೆ ಕಡಿಮೆ ದರಕ್ಕೆ ಬೇಡಿಕೆ ಇಡುತ್ತಿದ್ದು ರೈತರು ಚಿಂತೆಗೀಡಾಗಿದ್ದಾರೆ.
ಸಭೆ ಕರೆಯಲು ಒತ್ತಾಯ: ಭತ್ತ ಕಟಾವು ಯಂತ್ರಕ್ಕೆ ಬೇಡಿಕೆ ಹೆಚ್ಚಿರುವುದರಿಂದ ತಾಲೂಕಾಡಳಿತ ಮತ್ತು ಕೃಷಿ ಅ ಧಿಕಾರಿಗಳು, ಖಾಸಗಿ ಯಂತ್ರಗಳ ಮಾಲೀಕರು ಸಭೆ ಕರೆದು ದರ ನಿಗ ಪಡಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ಕೃಷಿ ಇಲಾಖೆಯಿಂದ ಎರಡು ಯಂತ್ರಗಳು ಇದ್ದು, 1800 ರೂ. ದರ ನಿಗದಿ ಮಾಡಲಾಗಿದೆ. ಇದೀಗ ಯಂತ್ರಗಳು ರೈತರಿಗೆ ಅತ್ಯವಶ್ಯವಾಗಿದ್ದು, ತುರ್ತು ಖಾಸಗಿ ಯಂತ್ರಗಳ ಮಾಲೀಕರುಸಭೆ ಕರೆಯಬೇಕು ಎಂದು ರೈತ ಸಂಘಟನೆಮುಖಂಡ ಬೂದೆಯ್ಯ ಸ್ವಾಮಿ ಗಬ್ಬೂರು ಆಗ್ರಹಿಸಿದ್ದಾರೆ.
ಭತ್ತ ಕಟಾವು ಯಂತ್ರಗಳ ಮಾಲೀಕರ ಸಭೆ ಕರೆದು ಬೆಲೆ ನಿಗ ದಿ ಮಾಡುವಂತೆ ರೈತರು ಒತ್ತಾಯಿಸತ್ತಿದ್ದಾರೆ. ಕೃಷಿ ಇಲಾಖೆಯಿಂದ ಎರಡು ಯಂತ್ರಗಳಿದ್ದು, 1800 ರೂ. ಬಾಡಿಕೆಯಿದೆ. ತಹಶೀಲ್ದಾರ್ ನೇತೃತ್ವದಲ್ಲಿ ಮಾಲೀಕರ ಸಭೆ ನಡೆಸಿ ಬೆಲೆ ನಿಗದಿ ಮಾಡಲಾಗುವುದು.–ಡಾ| ಎಸ್.ಪ್ರಿಯಾಂಕ್, ಸಹಾಯಕ ಕೃಷಿ ನಿರ್ದೇಶಕಿ
ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
New Zealand: ತವರಿನಂಗಳದಲ್ಲೇ ಟೆಸ್ಟ್ ನಿವೃತ್ತಿಗೆ ಸೌಥಿ ನಿರ್ಧಾರ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.