ಮೂರೇ ತಿಂಗಳಲ್ಲಿ ರಸ್ತೆ ಹಾಳು
Team Udayavani, Mar 9, 2019, 11:49 AM IST
ಲಿಂಗಸುಗೂರು: ಈ ರಸ್ತೆ ನಿರ್ಮಿಸಿ ಇನ್ನೂ ಮೂರು ತಿಂಗಳು ಕಳೆದಿಲ್ಲ ಆಗಲೇ ಬಿರುಕು ಬಿದ್ದಿದೆ. ಈಗಾಗಲೇ ಕೆಲವೆಡೆ ಕಿತ್ತು ಹೋಗಿ ಬರೀ ಕಲ್ಲುಗಳು ಕಾಣುತ್ತಿವೆ. ಕೆಲವೆಡೆ ರಸ್ತೆ ಕುಸಿಯುವ ಮೂಲಕ ಕಾಮಗಾರಿಯ ಅಸಲಿ ಮುಖ ಅನಾವರಣಗೊಂಡಿದೆ. ಪಟ್ಟಣದ ಏಳನೇ ವಾರ್ಡ್‌ನ ಶಾಂಭವಿ ಮಠದ ಹತ್ತಿರ ಎಚ್‌ಕೆಆರ್ ಡಿಬಿಯ 90 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ ಸಿಸಿ ರಸ್ತೆ ಈಗಲೇ ಕಾಮಗಾರಿ ನಡೆದದ್ದು ಕಳಪೆ ಎಂಬುದನ್ನು ಸಾಬೀತುಪಡಿಸಿದೆ.
ಡಾಂಬಾರ್ ರಸ್ತೆ ನಿರ್ಮಿಸುವುದರಿಂದ ಬೇಗ ಕಿತ್ತು ಹಾಳಾಗಿ ಹೋಗುತ್ತದೆ ಎಂದು ಸರ್ಕಾರ ಸಿಸಿ ರಸ್ತೆ ಕಾಮಗಾರಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಆದರೆ ಗುತ್ತಿಗೆದಾರರು ಇಂತಹ ರಸ್ತೆಗಳನ್ನು ಉತ್ತಮವಾಗಿ ನಿರ್ಮಿಸುವುದಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಮಗಾರಿ ಕಳಪೆ ನಡೆದರೂ ಪ್ರಶ್ನಿಸುವುದಿಲ್ಲ. ಹೀಗಾಗಿ ತಾವು ಮಾಡಿದ್ದೇ ಕಾಮಗಾರಿ ಎಂಬಂತಾಗಿದೆ.
ಕಾಮಗಾರಿ ವೇಳೆ ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ. ಹೀಗಾಗಿ ರಸ್ತೆ ಬಹು ಬೇಗನೆ ದುಃಸ್ಥಿತಿಗೆ ತಲುಪಿದೆ. ಇದು ಹೊಸ ಲೇಔಟ್ ಆಗಿದ್ದರಿಂದ ಇಲ್ಲಿ ವಾಹನಗಳ ಸಂಚಾರವೂ ಅಷ್ಟಿಲ್ಲ. ಇನ್ನು ಬೃಹತ್ ವಾಹನಗಳ ಸಂಚಾರವಂತೂ ಇಲ್ಲವೇ ಇಲ್ಲ. ಆದರೂ ರಸ್ತೆಯಲ್ಲಿ ಬಿರುಕು, ಕುಸಿತ ಉಂಟಾಗಿ ಗುತ್ತಿಗೆದಾರರು ಮಾಡಿದ ಕಾಮಗಾರಿಯ ನಿಜ ಬಣ್ಣ ತಾನೇ ಬಯಲಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.
ಅಧಿಕಾರಿಗಳು ಮೌನ: ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರರಾಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಹೇಳ್ಳೋರು, ಕೇಳ್ಳೋರು ಯಾರು ಇಲ್ಲವೆಂದು ಗುತ್ತಿಗೆದಾರರು ತಮ್ಮ ಮನಸೋ ಇಚ್ಛೆಯಂತೆ ಕಾಮಗಾರಿ ಮಾಡಿದ್ದರಿಂದ ಲಕ್ಷಾಂತರ ರೂ. ಅನುದಾನ ಕಾಮಗಾರಿ ಹಳ್ಳ ಹಿಡಿಯುವಂತೆ ಮಾಡಿದ್ದಾರೆ.
ಕಾಮಗಾರಿ ದುಃಸ್ಥಿತಿ ಬಗ್ಗೆ ಇಲ್ಲಿನ ನಿವಾಸಿಗಳು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸದೇ ಮೌನಕ್ಕೆ ಶರಣಾಗಿದ್ದಾರೆ. ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಈ ಬಗ್ಗೆ ಮೇಲಾಧಿ ಕಾರಿಗಳು ಗಮನ ಹರಿಸುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ.
7ನೇ ವಾರ್ಡ್‌ನಲ್ಲಿ ಸಿಸಿ ರಸ್ತೆಗಾಗಿ ಹಿಂದಿನ ಶಾಸಕರು ಅತಿ ಆಸಕ್ತಿ ವಹಿಸಿ ಎಚ್‌ಕೆಆರ್‌ಡಿಬಿ ವತಿಯಿಂದ 90 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದಾರೆ. ಆದರೆ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಕಾಮಗಾರಿ ಹಾಳಾಗಿದೆ. ಪುರಸಭೆ ಅಧಿಕಾರಿಗಳು ಕಾಮಗಾರಿ ಬಿಲ್ ತಡೆ ಹಿಡಿದು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.
ಗಿರಿಜಮ್ಮ ವಿರೂಪಾಕ್ಷಿ, 7ನೇ ವಾರ್ಡ್ ಪುರಸಭೆ ಸದಸ್ಯೆ
7ನೇ ವಾರ್ಡ್‌ನಲ್ಲಿ ರಸ್ತೆ ಕಾಮಗಾರಿಗೆ ಇನ್ನೂ ಬಿಲ್ ಪಾವತಿಸಿಲ್ಲ. ಮೂರನೇ ಪಕ್ಷದವರಿಂದ ಪರಿಶೀಲಿಸಿದ ನಂತರ ಬಿಲ್ ಮಾಡಲಾಗುತ್ತದೆ. ಹಸನ್,ಕಿರಿಯ ಅಭಿಯಂತರರು ಪುರಸಭೆ ಲಿಂಗಸುಗೂರು
ಶಿವರಾಜ ಕೆಂಭಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
Maski ಅಕ್ರಮ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ
Raichur: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.