ಅವೈಜ್ಞಾನಿಕ ನಿಯಮ ಕೈಬಿಡಿ
ಪ್ರೌಢಶಾಲೆ ಸಹ ಶಿಕ್ಷ ಕರ ಸಂಘ ಮನವಿ ಸಲ್ಲಿಕೆ
Team Udayavani, Jun 26, 2020, 6:41 PM IST
ದೇವದುರ್ಗ: ಶಿಕ್ಷಕರ ವರ್ಗಾವಣೆ ಅವೈಜ್ಞಾನಿಕ ನಿಯಮಗಳನ್ನು ಕೈಬಿಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಘಟಕ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು
ದೇವದುರ್ಗ: ಶಿಕ್ಷಕರ ವರ್ಗಾವಣೆ ಕರಡಿನಲ್ಲಿರುವ ಅವೈಜ್ಞಾನಿಕ ನಿಯಮಗಳನ್ನು ಕೈಬಿಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಘಟಕ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಇಂದಿರಾ ಅವರಿಗೆ ಮನವಿ ಸಲ್ಲಿಸಿದರು.
ಶೇ.25ರಷ್ಟು ಖಾಲಿ ಹುದ್ದೆಗಳರುವ ತಾಲೂಕಿನಲ್ಲಿ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಅವಕಾಶವಿಲ್ಲ ಎಂಬ ನಿಯಮ ರದ್ದುಗೊಳಿಸಬೇಕು. ವಿಭಾಗದ ಒಳಗಡೆ ವರ್ಗಾವಣೆಗೆ ನಿಗದಿ ಪಡಿಸಿದ ಶೇ.2ರ ಮಿತಿಯನ್ನು ಶೇ.4ಕ್ಕೆ ಹೆಚ್ಚಿಸಬೇಕು. ಅಂತರ್ ವಿಭಾಗ ವರ್ಗಾವಣೆಗೆ ನಿಗದಿ ಪಡಿಸಿದ ಶೇ.2ರ ಮಿತಿಯನ್ನು ಶೇ.4ಕ್ಕೆ ಹೆಚ್ಚಿಸಬೇಕು. 10ವರ್ಷಕ್ಕೂ ಹೆಚ್ಚು ಕಾಲ ಕಲ್ಯಾಣ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಅವರ ಮೂಲ ಜಿಲ್ಲೆಗಳಿಗೆ ವರ್ಗಾವಣೆ ಹೊಂದಲು ಅವಕಾಶ ನೀಡಬೇಕು. ಇತರೇ ಶಿಕ್ಷಕ ಮತ್ತು ಶಿಕ್ಷಕಿಯರ ಪ್ರಕರಣದ ಆದ್ಯತೆಯನ್ನು ಬೇರ್ಪಡಿಸದೇ ಸೇವಾ ಜೇಷ್ಠತೆ ಆಧಾರದ ಮೇಲೆ ವರ್ಗಾವಣೆಗೆ ಅವಕಾಶ ನೀಡಬೇಕು. ಪತಿ ಹಾಗೂ ಪತ್ನಿ ಒಂದೇ ತಾಲೂಕಿನ ಬೇರೆ ಬೇರೆ ಕ್ಲಸ್ಟರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರೆ ಅಂತಹ ದಂಪತಿ ಪ್ರಕರಣಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಪರಸ್ಪರ ವರ್ಗಾವಣೆಗೆ ನಿಗದಿಪಡಿಸಿರುವ 7 ವರ್ಷಗಳ ಸೇವೆ ಕಡ್ಡಾಯ ಮಾಡಿರುವುದನ್ನು ಕೈಬಿಟ್ಟು ಮೊದಲಿನಂತೆ 3 ವರ್ಷಗಳ ಸೇವೆ ನಿಯಮ ಮುಂದುವರಿಸಬೇಕು. ಪರಸ್ಪರ ವರ್ಗಾವಣೆಗೆ ಮುಕ್ತ ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಸಂಘಟನೆ ತಾಲೂಕು ಅಧ್ಯಕ್ಷ ವಿಠೊಬಾ ನಾಯಕ, ಕಾರ್ಯದರ್ಶಿ ಬಸವರಾಜ, ರಾಜ್ಯ ಸಮಿತಿ ಸದಸ್ಯ ಎಂ.ಜಿ. ಸತೀಶ, ಕಿಶನ್ ಪವಾರ, ಯಲ್ಲನಗೌಡ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ… ಚಕ್ರವರ್ತಿ ಸೂಲಿಬೆಲೆ
Raichur: ಹಸುಗಳ ಕೆಚ್ಚಲು ಕೊಚ್ಚಲು ಕಾಂಗ್ರೆಸ್ ಸರ್ಕಾರವೇ ಪ್ರೇರಣೆ: ಕೆಎಸ್ ಈಶ್ವರಪ್ಪ
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.