ಮತ್ತೆ ಮತದಾನ ಬಹಿಷ್ಕಾರಕ್ಕೆ ಪರ-ವಿರೋಧ ಸ್ವರ


Team Udayavani, Mar 15, 2021, 7:23 PM IST

vote

ಮಸ್ಕಿ: ಈ ಭಾಗದ ಬಹುಬೇಡಿಕೆ ನಾರಾಯಣಪುರ ಬಲದಂಡೆಯ 5ಎ ಶಾಖಾ ಕಾಲುವೆ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ ನಿರತ ಹಳ್ಳಿಗಳಲ್ಲಿ ಮತ್ತೆ ಗ್ರಾಪಂ ಚುನಾವಣೆ ಎದುರಾಗಿದೆ. ಹಿಂದೆ ಮತ ಬಹಿಷ್ಕಾರ ನಡೆಸಿದ್ದ ಇಲ್ಲಿನ ಹಳ್ಳಿಗಳಲ್ಲಿ ಈಗ ಮತ್ತೆ ಮತ ಬಹಿಷ್ಕಾರಕ್ಕೆ ಪರ-ವಿರೋಧ ಎರಡು ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.

ಕಳೆದ 2020ರ ಡಿಸೆಂಬರ್‌ನಲ್ಲಿ ಘೋಷಣೆಯಾಗಿದ್ದ ಸಾರ್ವತ್ರಿಕ ಗ್ರಾಪಂ ಚುನಾವಣೆ ವೇಳೆ ತಾಲೂಕಿನ ಅಮೀನಗಡ, ವಟಗಲ್‌, ಪಾಮನಕಲ್ಲೂರು ಹಾಗೂ ಅಂಕುಶದೊಡ್ಡಿ 4 ಗ್ರಾಪಂಗಳ 33ಕ್ಕೂ ಹೆಚ್ಚು ಹಳ್ಳಿಗಳು ಮತದಾನವನ್ನು ಬಹಿಷ್ಕಾರ ಮಾಡಿದ್ದರು. ಗಮನಾರ್ಹ ಎಂದರೆ ಕೇವಲ ಮತ ಬಹಿಷ್ಕಾರ ಮಾತ್ರವಲ್ಲದೇ ನಾಲ್ಕು ಪಂಚಾಯಿತಿ ಒಟ್ಟು 73 ಸದಸ್ಯ ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸದೇ ಒಗ್ಗಟ್ಟು ಮೆರೆದಿದ್ದರು. ಹೀಗಾಗಿ ಈ ಭಾಗದಲ್ಲಿ ಗ್ರಾಪಂ ಚುನಾವಣೆ ನಿಂತು ಹೋಗಿತ್ತು. ಜಿಲ್ಲಾಡಳಿತ, ತಾಲೂಕು ಆಡಳಿತದ ಅಧಿ ಕಾರಿಗಳು ಇಲ್ಲಿನ ಜನರ ಮನವೊಲಿಸಿದರೂ ಪ್ರಯೋಜನವಾಗಿರಲಿಲ್ಲ. 5ಎ ಕಾಲುವೆ ನೀರಾವರಿ ಯೋಜನೆ ಜಾರಿ ಮಾಡಿದರೆ ಮಾತ್ರ ಚುನಾವಣೆಗೆ ಅವಕಾಶ ಎಂದಿದ್ದರು. ಆದರೆ ಈಗ ಮತ್ತೆ ಚುನಾವಣೆ ಘೋಷಣೆಯಾಗಿವೆ.

15ರಿಂದ ನಾಮಪತ್ರ: ರಾಜ್ಯ ಚುನಾವಣೆ ಆಯೋಗ ರಾಜ್ಯದಲ್ಲಿ ಸ್ಥಗಿತವಾದ, ಬಾಕಿ ಇರುವ ಗ್ರಾಪಂಗಳಿಗೆ ಚುನಾವಣೆ ನಡೆಸುವಂತೆ ಅ ಧಿಸೂಚನೆ ಪ್ರಕಟಿಸಿದೆ. ಈ ಆದೇಶದ ಪ್ರಕಾರ ಆಯಾ ಜಿಲ್ಲಾಧಿ ಕಾರಿಗಳು ಚುನಾವಣೆ ಅ ಧಿಸೂಚನೆ ಮಾ.15ರಂದು ಹೊರಡಿಸಲಿದ್ದಾರೆ. ಜಿಲ್ಲೆಯ ಮಸ್ಕಿಯಲ್ಲಿ ಬಾಕಿ ಉಳಿದ 4 ಪಂಚಾಯಿತಿಗಳಿಗೂ ಮಾ.15ರಿಂದ ಈಗ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಮಾ.15ರಿಂದ 19ರವರೆಗೆ ನಾಮಪತ್ರ ಸಲ್ಲಿಕೆ. ಇನ್ನು ಮಾ.20ಕ್ಕೆ ನಾಮಪತ್ರ ಪರಿಶೀಲನೆ, ಮಾ.22ಕ್ಕೆ ನಾಮಪತ್ರ ವಾಪಸ್‌ ಪಡೆಯುವುದು, ಮಾ.29ಕ್ಕೆ ಮತದಾನ ನಡೆಸಲು ಸೂಚನೆ ವ್ಯಕ್ತವಾಗಿದೆ. 30ಕ್ಕೆ ಫಲಿತಾಂಶ ಹೊರ ಬೀಳಲಿದೆ. ಈ ರೀತಿಯಾಗಿ ಚುನಾವಣೆ ವೇಳಾ ಪಟ್ಟಿ ಬಿಡುಗಡೆ ರಾಜ್ಯ ಚುನಾವಣೆ ಆಯೋಗ ಮಾಡಿದ್ದು, ಜಿಲ್ಲಾಧಿ ಕಾರಿಗಳಿಂದ ಅಧಿಕೃತ ಅಧಿ ಸೂಚನೆ ಹೊರ ಬೀಳಬೇಕಿದೆ.

ಪರ-ವಿರೋಧ: ಈ ಬಾರಿ ಘೋಷಣೆಯಾದ ಗ್ರಾಪಂ ಚುನಾವಣೆ ಎದುರಿಸಲು ಪರ ಮತ್ತು ವಿರೋಧ ಎರಡು ರೀತಿಯ ಚರ್ಚೆಗಳು ಈ ನಾಲ್ಕು ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿವೆ. 5ಎ ಕಾಲುವೆ ಹೋರಾಟ ಸಮಿತಿ ಕೂಡ ಪಂಚಾಯಿತಿ ಚುನಾವಣೆ ಬಗ್ಗೆ ಇದುವರೆಗೆ ಎಲ್ಲೂ ನಿರ್ಧಾರ ಪ್ರಕಟಿಸಿಲ್ಲ. ಹೀಗಾಗಿ ಇಲ್ಲಿನ ಹಳ್ಳಿಗಳಲ್ಲಿ ಕೆಲವರು ಚುನಾವಣೆ ನಡೆಸಬೇಕು ಎಂದು ಹಠಕ್ಕೆ ಬಿದ್ದಿದ್ದರೆ, ಇನ್ನು ಕೆಲವರು ಹೋರಾಟ ನಿರ್ಲಕ್ಷ್ಯ ಮಾಡಿದ ಸರಕಾರಕ್ಕೆ ಬಿಸಿ ಮುಟ್ಟಿಸಲು ಮತ್ತೂಮ್ಮೆ ಚುನಾವಣೆ ಬಹಿಷ್ಕಾರ ಮಾಡಬೇಕು ಎನ್ನುವ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ. ಇದರ ನಡುವೆ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎನ್ನುವ ವರ್ಗ ಇದಕ್ಕೆ ಪೂರಕವಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಾಜಕೀಯ ಪಕ್ಷಗಳು ಕೂಡ ಪರೋಕ್ಷವಾಗಿ ಚುನಾವಣೆಗೆ ನಿಲ್ಲುವವರಿಗೆ ಸಾಥ್‌ ನೀಡುವ ಬಗ್ಗೆಯೂ ಭರವಸೆ ನೀಡುತ್ತಿವೆ. ಒಟ್ಟಿನಲ್ಲಿ ಈ ಬಾರಿ ಘೋಷಣೆಯಾದ ಚುನಾವಣೆ 5ಎ ಹೋರಾಟ ನಿರತ ಹಳ್ಳಿಗಳಲ್ಲಿ ಎರಡು ರೀತಿಯ ಚರ್ಚೆಗೆ ವೇದಿಕೆಯಾಗಿದ್ದು, ಏನಾಗಲಿದೆ ಕಾದು ನೋಡಬೇಕಿದೆ.

ಮಲ್ಲಿಕಾರ್ಜುನ ಚಿಲ್ಕರಾಗಿ

 

ಟಾಪ್ ನ್ಯೂಸ್

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

CID

CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.