ಮಕ್ಕಳಿಂದಲೇ ಗ್ರಂಥಾಲಯ ಸ್ಥಾಪನೆ
Team Udayavani, Jan 14, 2019, 10:44 AM IST
ಮಸ್ಕಿ: ಪಟ್ಟಣದ ಬಯ್ನಾಪುರ ಮಹಾಂತಮ್ಮ ಲಿಂಗನಗೌಡ ಮೆಮೋರಿಯಲ್ ಪ್ರೈಮರಿ ಶಾಲೆ ಹೊಸ ಹೊಸ ವಿನೂತನ ಪ್ರಯೋಗಗಳನ್ನು ಮಾಡುವ ಮೂಲಕ ಪಾಲಕರ ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಪಟ್ಟಣದ ಬಹುತೇಕ ಶಾಲಾ-ಕಾಲೇಜು ಗಳಲ್ಲಿ ಹೊಸ ವರ್ಷವನ್ನು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸುವುದು ವಾಡಿಕೆ. ಆದರೆ ಬಿಎಂಎಲ್ ಶಾಲೆಯಲ್ಲಿ ಈ ವರ್ಷ ವಿಭಿನ್ನವಾಗಿ ಹೊಸ ವರ್ಷ ಆಚರಿಸಲಾಯಿತು.
ಮುಖ್ಯೋಪಾಧ್ಯಾಯ ಮೌನೇಶ ಹೊಸಮನಿ ಶಾಲೆಯಲ್ಲಿ ಗ್ರಂಥಾಲಯ ಇರದಿದ್ದನ್ನು ಕಂಡು ಹೊಸ ವರ್ಷದಲ್ಲಿ ಮಕ್ಕಳಿಗೆ ಗ್ರಂಥಾಲಯ ಸ್ಥಾಪಿಸಲು ಪ್ರೇರಣೆ ನೀಡಿದ್ದಾರೆ. ಅದರಂತೆ ಮಕ್ಕಳು ಪುಸ್ತಕಗಳನ್ನು ದೇಣಿಗೆ ನೀಡಿ ಗ್ರಂಥಾಲಯ ಸ್ಥಾಪಿಸಿದ್ದು ಮೆಚ್ಚುಗೆಗೆ ಕಾರಣವಾಗಿದೆ.
ಪಾಲಕರಿಂದ ಹಣ ಪಡೆದು ಪುಸ್ತಕ ಖರೀದಿಸುವುದಕ್ಕಿಂತ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಹಿರಿಯರು ಓದಿದ ಪುಸ್ತಕಗಳನ್ನು ಶಾಲೆಯ ಗ್ರಂಥಾಲಯಕ್ಕೆ ದೇಣಿಗೆ ಕೊಡುವಂತೆ ಸೂಚಿಸಿದಾಗ ವಿದ್ಯಾರ್ಥಿಗಳಿಂದ ಅಂದಾಜು 20 ಸಾವಿರ ರೂ.ಮೌಲ್ಯದ 800 ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯ ಸ್ಥಾಪಿಸಿ ಮಾದರಿಯಾಗಿದ್ದಾರೆ.
ಮಕ್ಕಳ ಆಸಕ್ತಿ ಮತ್ತು ಶಿಕ್ಷಕರ ಕಾಳಜಿಯಿಂದ ಪಾಲಕರೊಬ್ಬರು ಶಾಲೆಗೆ ಪುಸ್ತಕ ಸಂಗ್ರಹಕ್ಕಾಗಿ 10 ಸಾವಿರ ರೂ. ಮೌಲ್ಯದ ಅಲ್ಮೇರಾ ದೇಣಿಗೆ ನೀಡಿದರೆ, ಪ್ರೌಢಶಾಲೆ ಶಿಕ್ಷಕರು 10 ಸಾವಿರ ರೂ. ದೇಣಿಗೆ ಗ್ರಂಥಾಲಯ ಸ್ಥಾಪನೆಗೆ ಸಾಥ್ ನೀಡಿದ್ದಾರೆ.
ಬ್ಯಾಗ್ ಲೆಸ್ ಡೇ: ಮಕ್ಕಳಿಗೆ ಪ್ರತಿದಿನ ಪುಸ್ತಕದ ಭಾರ ಕಡಿಮೆ ಮಾಡುವ ಉದ್ದೇಶದಿಂದ ಕ್ಲಾಸ್ ವರ್ಕ್ ಬುಕ್ಸ್‌ಗಳನ್ನು ತರಗತಿ ಕೊಠಡಿಯಲ್ಲಿಡುವ ವಾರಕ್ಕೆ ಒಂದು ದಿನ ಬ್ಯಾಗ್ ರಹಿತ (ಬ್ಯಾಗ್ ಲೆಸ್ ಡೇ) ಶಾಲೆಗೆ ಬರುವಂತೆ ಮಾಡುವ ಮೂಲಕ ಶಿಕ್ಷಕರು ವಿಶೇಷ ಕಾಳಜಿ ವಹಿಸಿದ್ದಾರೆ.
ವಿಶೇಷ ಪ್ರಾತ್ಯಕ್ಷಿಕೆ: ಪ್ರತಿವಾರ ಒಂದು ದಿನ ಮಕ್ಕಳು ಶಾಲೆಯ ಪಠ್ಯದ ಜತೆಗೆ ಜನರು ಬಳಸುವ ದವಸ-ಧಾನ್ಯಗಳನ್ನು ಬೆಳೆಯುವ ಕುರಿತು ಪ್ರಾತ್ಯಕ್ಷಿಕೆ, ಬಣ್ಣಗಳ ಗುರುತಿಸುವಿಕೆ, ಪಶು ಪಕ್ಷಿಗಳ ಮಾಹಿತಿ ಮತ್ತು ಅವುಗಳ ಧ್ವನಿ ಪರಿಚಯ ಮಾಡಿಸುವ ಕೆಲಸ ಮಾಡುತ್ತಿದ್ದಾರೆ.
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪುಸ್ತಕ ಪಾಠದ ಜತೆಗೆ ಇತರೆ ವಿಷಯಗಳ ಕುರಿತು ಮಾಹಿತಿ ನೀಡಿ ಮಕ್ಕಳಲ್ಲಿ ಕುತೂಹಲ ಮೂಡಿಸಿ ಇನ್ನೂ ಹೆಚ್ಚಿನದನ್ನು ಕಲಿಯುವಂತೆ ಮಾಡುತ್ತಾರೆ. ಓದಿನ ಜತೆ ಆಟ ಮುಖ್ಯವಾಗಿದ್ದು ಮಕ್ಕಳಿಗೆ ನಿಯಮಿತವಾಗಿ ದೇಶಿ ಆಟಗಳನ್ನು ಆಡಿಸುತ್ತಿದ್ದು ಪ್ರತಿ ಸ್ಪರ್ಧೆಯಲ್ಲಿ ಗೆದ್ದವರಿಗೆ ಪುಸ್ತಕಗಳ ಬಹುಮಾನ ನೀಡುವ ಪರಿಪಾಠ ಹಾಕಿಕೊಂಡಿದ್ದಾರೆ.
ಮಕ್ಕಳಿಗೆ ಅಷ್ಟೆ ಅಲ್ಲ ಪಾಲಕರ ಸಭೆ ನಡೆಸಿ ಮಕ್ಕಳಿಗೆ ಆಟ-ಊಟ-ಪಾಠಗಳ ಸಮತೋಲನ ಕಾಯ್ದುಕೊಳ್ಳುವಂತೆ ವಿಶೇಷ ತಜ್ಞರನ್ನು ಕರೆಸಿ ಉಪನ್ಯಾಸ ಏರ್ಪಡಿಸುವ ಮೂಲಕ ಪಾಲಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಇದು ಜನರಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.