![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 6, 2024, 12:19 AM IST
ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಶಾಲಾ ದಾಖಲೆಗಳಲ್ಲಿ ಹಿಂದೂ ಕ್ಷತ್ರಿಯ ಎಂದು ನಮೂದಿಸಿದ್ದು, ಪರಿಶಿಷ್ಟ ಪಂಗಡ ಮೀಸಲಾತಿಯಡಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಚುನಾವಣೆಗೆಸ್ಪರ್ಧಿಸಿದ್ದಾರೆ ಎಂದು ಲಿಂಗಸುಗೂರು ತಹಶೀಲ್ದಾರ್‌ಗೆ ಮಾನ್ವಿ ತಾಲೂಕಿನ ಕರಡಿಗುಡ್ಡ ಗ್ರಾಮದ ನರಸಿಂಹ ನಾಯಕ ದೂರು ನೀಡಿದ್ದಾರೆ.
ರಾಜಾ ಅಮರೇಶ್ವರ ನಾಯಕ ಶಾಲಾ ದಾಖಲೆಗಳಲ್ಲಿ ಹಿಂದೂ ಕ್ಷತ್ರಿಯ ಎಂದು ದಾಖಲಿಸಿದ್ದು, ಪರಿಶಿಷ್ಟ ಪಂಗಡದಲ್ಲಿ ಕ್ಷತ್ರಿಯ ಎಂಬ ಉಪಜಾತಿ ಇಲ್ಲ. ಹೀಗಾಗಿ ಅವರು ಎಸ್‌ಟಿ ಮೀಸಲಾತಿ ಸೌಲಭ್ಯ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.
ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ರಾಜಾ ಅಮರೇಶ್ವರ ನಾಯಕ, ಚುನಾವಣೆ ಮುನ್ನ ಇಂಥ ಆರೋಪಗಳು ಬರುವುದು ಸಹಜ. ಹಿಂದೆಯೂ ಇಂಥ ಆರೋಪಗಳು ಬಂದಾಗ ಆಡಳಿತ, ನ್ಯಾಯಾಲಯ ತಳ್ಳಿ ಹಾಕಿದೆ ಎಂದಿದ್ದಾರೆ.
ಅವರು ಬಾರಿ ಶಾಸಕರಾಗಿ ಹಾಗೂ ಸಚಿವರಾಗಿ, ಒಂದು ಅವಧಿಗೆ ಸಂಸದರೂ ಆಗಿದ್ದರು. ಹಿಂದೆಯೂ ಅವರ ವಿರುದ್ಧ ಜಾತಿ ಪ್ರಮಾಣಪತ್ರ ದುರ್ಬಳಕೆ ದೂರು ಕೇಳಿ ಬಂದಿತ್ತು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.