ಕೆರೆ ತುಂಬಿಸಲು ಈಗಿನಿಂದಲೇ ಕಸರತ್ತು
Team Udayavani, Mar 27, 2022, 5:24 PM IST
ಸಿಂಧನೂರು: ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತದೆ. ಪ್ರಸಕ್ತ ಸಾಲಿನಲ್ಲಿ ಬೇಸಿಗೆ ಮುನ್ನ ತಾಲೂಕಿನಲ್ಲಿ ಕುಡಿವ ನೀರಿನ ಅಭಾವ, ತಾಪತ್ರಯ ಪರಿಶೀಲಿಸಲು ಆಡಳಿತ ವರ್ಗ ಗಮನ ಹರಿಸಿದೆ.
ಶಾಸಕ ವೆಂಕಟರಾವ್ ನಾಡಗೌಡ ಅಧ್ಯಕ್ಷತೆಯಲ್ಲಿ ಭಾನುವಾರ ನಗರದ ತಾಪಂನಲ್ಲಿ ವಿಶೇಷ ಸಭೆಯನ್ನು ಕುಡಿಯವ ನೀರಿಗೆ ಸಂಬಂಧಿಸಿದ ನಿಗದಿಪಡಿಸಲಾಗಿದೆ.
ತಾಲೂಕು ವ್ಯಾಪ್ತಿಗೆ ಒಳಪಡುವ 3 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸದ್ಯ ಸ್ಥಿತಿಗತಿಯನ್ನು ಆಲಿಸಲು ಸಭೆ ನಡೆಸಲಾಗುತ್ತಿದೆ. ಸಮಸ್ಯಾತ್ಮಕ ಹಳ್ಳಿ, ಕ್ಯಾಂಪ್ ಗಳನ್ನು ಗುರುತಿಸಿ ನೀರಿನ ಅಭಾವ ತಲೆದೋರುವ ಮುನ್ನವೇ ಮುನ್ನೆಚ್ಚರಿಕೆವಹಿಸಲು ಆಡಳಿತ ವರ್ಗ ಎಚ್ಚೆತ್ತುಕೊಂಡಿದೆ.
ತಾಲೂಕಿನಲ್ಲಿವೆ 146 ಕೆರೆ
ಕುಡಿಯುವ ನೀರು ಸಂಗ್ರಹಕ್ಕಾಗಿ ತಾಲೂಕಿನಲ್ಲಿ ನರೇಗಾ ಸೇರಿದಂತೆ ವಿವಿಧ ಯೋಜನೆಯಡಿ ಕೆರೆಗಳನ್ನು ನಿರ್ಮಿಸಲಾಗಿದೆ. ಬರೋಬ್ಬರಿ ಬೇಸಿಗೆ ಮುನ್ನವೇ 140 ಕೆರೆಗಳಲ್ಲಿ ನೀರು ಭರ್ತಿ ಮಾಡಿದರೆ, ಯಾವುದೇ ಅಭಾವ ಉಂಟಾಗುವುದಿಲ್ಲ.
ಬೋರ್‌ವೆಲ್ ಆಶ್ರಯಿಸಿರುವ ಉಮಲೂಟಿ, ರಾಗಲಪರ್ವಿ ಸೇರಿ ಇತರೆ ಗ್ರಾಮಗಳಲ್ಲಿ ಹಾಹಾಕಾರ ಉಂಟಾಗುತ್ತದೆ. ಕೆರೆಗಳನ್ನು ಭರ್ತಿ ಮಾಡಿದರೆ, ಅಲ್ಲಿನ ಜನರು ನಿರಾಳರಾಗುತ್ತಾರೆ. ರಾಮಾ ಕ್ಯಾಂಪಿನಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಇದೀಗ ಕೆರೆ ಹೂಳೆತ್ತಿ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದಂತೆ ಎಲ್ಲ ಗ್ರಾಮಗಳಲ್ಲಿ ಕೆರೆಗೆ ನೀರು ತುಂಬಿಸಲು ಆಡಳಿತ ವರ್ಗ ಗಮನ ಹರಿಸಬೇಕಿದೆ.
2ನೇ ಬೆಳೆಗೆ ನೀರು ವರದಾನ
ತುಂಗಭದ್ರಾ ಎಡದಂಡೆಯ ಆರಂಭಿಕ ಪಾಯಿಂಟ್‌ನಲ್ಲಿ ಕಾಲುವೆ ಒಡ್ಡು ಕುಸಿದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿತ್ತು. ಕೆಲವು ದಿನಗಳ ಕಾಲ ನೀರಿನ ಹರಿವು ಸ್ಥಗಿತಗೊಳಿಸಿದ್ದರಿಂದ ಸಮಸ್ಯೆ ಅನುಭವಿಸಬೇಕಾಯಿತು. ಈವರೆಗೂ ಕೊನೆ ಭಾಗಕ್ಕೆ ನೀರು ಕಳುಹಿಸಲು ಹಾಗೂ ಕಾಲುವೆಯ ಗೇಜ್ ಕಾಪಾಡಲು ಅಧಿಕಾರಿಗಳು ಹೋರಾಟ ನಡೆಸಿದ್ದಾರೆ. ಬೆಳೆ ಉಳಿಸುವುದರ ಜೊತೆಗೆ ಬೇಸಿಗೆಯಲ್ಲಿ ನೀರಿನ ಅಭಾವ ತಪ್ಪಿಸಲು ತಾಲೂಕಿನಲ್ಲಿ ಎಲ್ಲ ಕೆರೆಗಳನ್ನು ಭರ್ತಿ ಮಾಡಬೇಕಿದೆ. ಆದರೆ, 2ನೇ ಬೆಳೆಗೆ ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸುತ್ತಿರುವುದರಿಂದ ಅಧಿಕಾರಿಗಳು ನಿರಾಳವಾಗಿದ್ದು, ಮೈ ಮರೆಯದಂತೆ ಎಚ್ಚರಿಸಲು ಮಾ.27ರಂದು ಸಭೆ ಕರೆಯಲಾಗಿದೆ.
ನಮ್ಮ ಭಾಗದಲ್ಲಿ ಯಾವುದೇ ನೀರಿನ ಸಮಸ್ಯೆಯಿಲ್ಲ. ಕಾಲುವೆಯ ಟೇಲೆಂಡ್ ಭಾಗದಲ್ಲಿ ಕೆರೆ ತುಂಬಿಸಬೇಕಿದ್ದು, ನೀರಾವರಿ ಇಲಾಖೆಯ ಸಹಕಾರ ಅಗತ್ಯವಾಗಿದೆ. ಪೊಲೀಸರು ಕೂಡ ಭದ್ರತೆ ಒದಗಿಸಬೇಕು. -ಹೆಸರು ಹೇಳಲಿಚ್ಚಿಸದ ಗ್ರಾಪಂ ಪಿಡಿಒ, ಸಿಂಧನೂರು
-ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
Surathkal: ಬೇಕು ವ್ಯವಸ್ಥಿತ ಒಳಚರಂಡಿ; ಸೋರುತ್ತಿರುವ ವೆಟ್‌ವೆಲ್‌ಗಳಿಂದ ಮಾಲಿನ್ಯ
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.