ವಿವಿಧ ಕಡೆ ನಾಲ್ಕು ಶಿಲಾಶಾಸನಗಳು ಪತ್ತೆ
Team Udayavani, Aug 3, 2022, 4:00 PM IST
ಮಸ್ಕಿ: ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ|ಚನ್ನಬಸಪ್ಪ ಮಲ್ಕಂದಿನ್ನಿ ಅವರು ಪಟ್ಟಣದಲ್ಲಿ ವಿವಿಧ ಕಡೆ ನಾಲ್ಕು ಶಿಲಾಶಾಸನಗಳು ಪತ್ತೆ ಮಾಡಿದ್ದಾರೆ.
ಮೊದಲನೇ ಶಿಲ್ಪ ಬಸನಗೌಡ ಪೊಲೀಸ್ ಪಾಟೀಲ್ ಮನೆ ಆವರಣದಲ್ಲಿ (ಪರಾಪೂರ ರಸ್ತೆ) ಕಣಶಿಲೆಯಲ್ಲಿ ರಚಿತಗೊಂಡ ಚತುರ್ಮುಖ ತೀರ್ಥಂಕರನ ವಿಗ್ರಹ ಪತ್ತೆಯಾಗಿದ್ದು, ಇದು ಕ್ರಿ.ಶ. 11-12ನೇ ಶತಮಾನಕ್ಕೆ ಸೇರಿದ ವಿಗ್ರಹವಾಗಿದೆ. ನಾಲ್ಕು ಕಡೆ ಕುಳಿತ ಭಂಗಿಯ ತೀರ್ಥಂಕರರ ವಿಗ್ರಹಗಳು ಇಲ್ಲಿವೆ.
ಎರಡನೇ ತೀರ್ಥಂಕರನ ಶಿಲ್ಪ ಪಟ್ಟಣದ ಹೊಸ ಬಸ್‌ನಿಲ್ದಾಣ ಹತ್ತಿರ (ಪೂರ್ವ) ಕಿರಣ ಮುರಾರಿ ಅವರ ಮನೆ ಮುಂದೆ ಪತ್ತೆಯಾಗಿದ್ದು, ಇದು 16 ಇಂಚು ಎತ್ತರ 15 ಇಂಚು ಅಗಲವಿದೆ. ಮೂರನೇ ಶಿಲ್ಪ ಬೊಲ್ಲ ಕುದುರೆಯ ಶಿಲ್ಪವಾಗಿದ್ದು, ಇದು ಕಣ ಶಿಲೆಯ ಚಪ್ಪಡಿ ಕಲ್ಲಿನ ಎರಡು ಬದಿಯಲ್ಲಿ ರಚಿತಗೊಂಡಿದೆ. ಇಲ್ಲಿ ಕುದುರೆ ಓಡುವ ಭಂಗಿಯಲ್ಲಿ ಕಂಡು ಬರುತ್ತವೆ. ನಾಲ್ಕನೇ ಶಿಲ್ಪ ಶಿಬಾರ ಕಲ್ಲಾಗಿದ್ದು, ಇದು ಪಟ್ಟಣದ ಎಸ್‌ಡಿಎಂಸಿ ಸ್ಕೂಲ್ ಹತ್ತಿರದ ಬೆಟ್ಟದ ದೊಡ್ಡ ಕಣ ಶಿಲೆಯ ಗುಂಡಿಗೆ ಖಂಡರಿಸಿದ್ದಾರೆ. ಇದು ದೇವಸ್ಥಾನದ ದ್ವಾರ ಮಂಟಪದ ಮಾದರಿಯಲ್ಲಿದ್ದು ಇದರ ಮೇಲ್ಬದಿಯಲ್ಲಿ ಸೂರ್ಯ, ತ್ರಿಶೂಲ, ಚಂದ್ರರ ಶಿಲ್ಪಗಳಿವೆ. ಹಾಗೆಯೇ ಇದರ ಒಳಬದಿಯಲ್ಲಿ ಖಡ್ಗ ಹಿಡಿದುಕೊಂಡ ವೀರ, ಎಡಬದಿಯಲ್ಲಿ ಮಹಿಳೆ ಇದ್ದಾಳೆ. ಎರಡೂ ಶಿಲ್ಪಗಳು ಕುಳಿತ ಭಂಗಿಯಲ್ಲಿವೆ. ಈ ಶಿಲ್ಪಶೈಲಿಯ ಆಧಾರದಿಂದ ಇದು ಕ್ರಿ.ಶ. ಸುಮಾರು 17-18ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂಬುದು ಅಧ್ಯಯನದಿಂದ ತಿಳಿದು ಬರುತ್ತದೆ ಎಂದು ಚನ್ನಬಸಪ್ಪ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.