ಡಿ.ರಾಂಪುರದಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ
Team Udayavani, Jan 3, 2022, 6:10 PM IST
ರಾಯಚೂರು: ಆತ್ಮೂರು ಗ್ರಾಪಂ ವ್ಯಾಪ್ತಿಯ ಡಿ.ರಾಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಂಗಸಿರಿ ಸಾಂಸ್ಕೃತಿಕ ಕಲಾ ಬಳಗ ಹಾಗೂ ಬೆಂಗಳೂರಿನ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಗಡಿನಾಡು ಸಾಂಸ್ಕೃತಿಕ ಉತ್ಸವ, ಸಂಗೀತ, ನೃತ್ಯ, ನಾಟಕ ಕಾರ್ಯಕ್ರಮ ಜರುಗಿತು.
ರಾಯಚೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಡಿ.ಅಚ್ಯುತರಾವ್ ಕಾರ್ಯಕ್ರಮ ಉದ್ಘಾಟಿಸಿ, ಗಡಿನಾಡು ಭಾಗಗಳಲ್ಲಿ ಮಕ್ಕಳು ಮತ್ತು ಜನರು ಬೇರೆ ಭಾಷೆಗಳು ಪ್ರಭಾವಕ್ಕೆ ಒಳಗಾಗದೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಿದೆ. ಕನ್ನಡ ಭಾಷೆ ಮೇಲೆ ಅಭಿಮಾನ ಬೆಳಿಸಿಕೊಂಡಾಗಲೇ ನಮ್ಮ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಸ್ಥಳೀಯ ಪ್ರತಿಭೆ, ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಿರುವುದು, ಗಡಿ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಗ್ರಾಪಂ ಸದಸ್ಯ ಬಿ.ಟಿ. ದೇವಪ್ಪ ಮಾತನಾಡಿ, ರಂಗಭೂಮಿ ಕಲೆಗಳು ಉಳಿಯಬೇಕಾದರೆ ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದರು.
ಹಿರಿಯ ರಂಗಭೂಮಿ ಕಲಾವಿದ ಅನಿವೀರಯ್ಯ ಸ್ವಾಮಿ ಮಾತನಾಡಿದರು. ಕಲಾವಿದರಾದ ಕೆ.ಗೋವಿಂದರೆಡ್ಡಿ, ಬಾಬಣ್ಣ ಹುಗೆನಲ್ಲಿ, ವೆಂಕಟ್ಟರೆಡ್ಡಿ ಗಾಜ್ರಲ್. ಈಶ್ವರಯ್ಯ ಯಾಪಲದ್ದಿನ್ನಿ, ಅಕ್ರಂ ಸಾಬ್ ಗಂಜಲ್ಲಿ, ವೆಂಕಟೇಶ್, ಬಡೆಸಾಬ್ ಡಿ. ಅವರನ್ನು ಸನ್ಮಾನಿಸಲಾಯಿತು. ನಂತರ ಸಂಗೀತ, ನೃತ್ಯ ಹಾಗೂ ವೆಂಕಟನರಸಿಂಹಲು ತಂಡದಿಂದ “ದುರಾಸೆಯೇ ದುಃಖಕ್ಕೆ ಮೂಲ’ ನಾಟಕ ಪ್ರದರ್ಶಿಸಲಾಯಿತು. ಸುರೇಶ ನಾಯಕ ಕಲವಲದೊಡ್ಡಿ, ರಮಾದೇವಿ, ವೆಂಕಟರೆಡ್ಡಿ, ಮುರಳಿ ಮೋಹನ್ ರೆಡ್ಡಿ, ಕೆ.ಗೋವಿಂಡರೆಡ್ಡಿ, ವೆಂಕಟ ರಾಮುಲು, ದತ್ತಪ್ಪ, ಕರೆಪ್ಪ, ಮೌನೇಶ್, ಮೈಲಾರಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.