ಕೃಷಿಗೂ ಉದ್ಯಮದ ಪ್ರಾಧಾನ್ಯತೆ ಸಿಗಲಿ: ಹಿರೇಮಠ
Team Udayavani, Dec 4, 2020, 2:04 PM IST
ರಾಯಚೂರು: ದೇಶದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಮಸೂದೆಗಳಿಂದ ಎದುರಾದ ಸಮಸ್ಯೆ, ಸವಾಲುಗಳ ಕುರಿತು ನಗರದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನ ಕೇಂದ್ರದಲ್ಲಿಗುರುವಾರ “ಭಾರತ ಕೃಷಿ ಬಿಕ್ಕಟ್ಟು ಕಾರಣ,ಪರಿಣಾಮ ಮತ್ತು ಪರಿಹಾರ’ ವಿಷಯದ ಕುರಿತು ದುಂಡು ಮೇಜಿನ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಪ್ರಗತಿಪರ ಚಿಂತಕರು, ಹೋರಾಟಗಾರರು, ರೈತ ಮುಖಂಡರು ವಿವಿಧ ವಿಷಯಗಳನ್ನು ಮಂಡಿಸುವ ಮೂಲಕ ಕೃಷಿ ವಲಯದಬಲವರ್ಧನೆಗೆ ಸಲಹೆ ನೀಡಿದರು. ಸಮಾಜಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ ಮಾತನಾಡಿ, ದೇಶದ ಆದಾಯದ ಪ್ರಧಾನ ಮೂಲವಾದ ಕೃಷಿಯನ್ನೇಸಂಪೂರ್ಣ ಕಡೆಗಣಿಸಲಾಗಿದೆ. ಕೇಂದ್ರ ಸರ್ಕಾರಕೃಷಿ ವಲಯವನ್ನು ದುರ್ಬಲ ಗೊಳಿಸುವ ನಿಟ್ಟಿನಲ್ಲಿ ಹೊಸ-ಹೊಸ ಕಾಯಿದೆ ರೂಪಿಸಿರುವುದು ಖಂಡನೀಯ. ಕೃಷಿ ವಲಯಬಲಗೊಳ್ಳಬೇಕಾದರೆ ಕೂಡಲೇ ಮಸೂದೆಗಳನ್ನು ಹಿಂಪಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೃಹತ್ ಉದ್ಯಮಗಳಿಗೆ 5-6 ಲಕ್ಷ ಕೋಟಿ ಸಬ್ಸಿಡಿ ನೀಡುತ್ತದೆ. ಅದೇ ರೀತಿಕೃಷಿ ವಲಯವನ್ನು ಉದ್ಯಮವಾಗಿ ಪರಿಗಣಿಸಿ ಅನುದಾನ ವಿನಿಯೋಗಿಸಲಿ ಎಂದು ತಾಕೀತು ಮಾಡಿದರು.
ದೇಶಕ್ಕೆ ಆಹಾರ ಭದ್ರತೆ ಬೇಕಿದೆ. ಅದಕ್ಕಾಗಿಯೇ ಭೂಮಿ ಬಳಕೆ ಯೋಜನೆ ಜಾರಿಗೆ ತರುವುದು ಸೂಕ್ತ. ಉಳುವವನೇ ಭೂ ಒಡೆಯ ಯೋಜನೆ ಸರಿಯಾಗಿ ಜಾರಿಯಾಗಬೇಕು. ಸಹಕಾರ ಸಂಘಗಳು ಕೃಷಿ ಕ್ಷೇತ್ರದ ಪ್ರಗತಿಗೆ ಇನ್ನಷ್ಟು ಶ್ರಮಿಸಬೇಕು ಎಂದರು.
ಡಾ| ಮಂಜುನಾಥ ಪಾರಂಪರಿಕ ಕೃಷಿಯ ಮೇಲೆ ಉದಾರೀಕರಣ ನೀತಿಯ ದುಷ್ಪರಿಣಾಮಗಳು ಎಂಬ ವಿಷಯ ಮಂಡಿಸಿದರು. ಅಧ್ಯಕ್ಷತೆಯನ್ನು ರಾಘವೇಂದ್ರ ಕುಷ್ಟಗಿ, ಅಭಯ ವಹಿಸಿದ್ದರು. ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಸಿ.ಯತಿರಾಜು, ಪತ್ರಕರ್ತ ಶಿವಸುಂದರ, ನಿರ್ಮಲಾ, ಖಾಜಾ ಅಸ್ಲಂ ಅಹಮ್ಮದ್, ಕರಿಯಪ್ಪ ಅಚ್ಚೊಳ್ಳಿ, ಡಿ.ಎಚ್. ಪೂಜಾರ, ಕೆ.ಜಿ. ವೀರೇಶ ಇದ್ದರು.
ರೈತರನ್ನು ಗೌರವದಿಂದ ನಡೆಸಿಕೊಳ್ಳುವುದು ಬಿಟ್ಟು ದಯನೀಯ ಸ್ಥಿತಿಗೆ ತಲುಪಿಸಿರುವುದು ನಿಜಕ್ಕೂ ಖೇದನೀಯ. ರೈತಾಪಿ ವರ್ಗಹಲವು ಕಾರಣಕ್ಕೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೃಷಿಗಾಗಿ ಮಾಡಿದ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಅರಣ್ಯಹಾಗೂ ಕೃಷಿ ಭೂಮಿ ಅರಣ್ಯೇತರ,ಕೃಷಿಯೇತರ ಬಳಕೆಗೆ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. – ಎಸ್.ಆರ್.ಹಿರೇಮಠ, ಸಮಾಜ ಪರಿವರ್ತನಾ ಸಮುದಾಯದ ಮುಖಂಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.