ಶಾಸಕರಿಂದ ಅಭಿವೃದ್ದಿ ಕೆಲಸದಲ್ಲಿ ಗೋಲ್‌ಮಾಲ್
Team Udayavani, Aug 14, 2022, 5:25 PM IST
ಸಿಂಧನೂರು: ತಾಲೂಕಿನಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಶಾಸಕ ವೆಂಕಟರಾವ್ ನಾಡಗೌಡರು ಪರ್ಸೆಂಟೇಜ್ ಪಡೆಯುವ ಮೂಲಕ ಕಳಪೆ ಕೆಲಸಕ್ಕೆ ನಾಂದಿಯಾಡಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಆರೋಪಿಸಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಪಂ ಉಪ ಎಂಜಿನಿಯರಿಂಗ್ ಇಲಾಖೆಯಿಂದ 30:54 ಹೆಡ್‌ನಲ್ಲಿ ಕೈಗೆತ್ತಿಕೊಳ್ಳಲಾದ 16 ಕಾಮಗಾರಿಗಳ 8 ಕಾಮಗಾರಿಗಳನ್ನು ಮಾಡದೇ ಬೋಗಸ್ ಬಿಲ್ ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಆರೋಪ ಮಾಡಿದಾಗಲೂ ಯಾವುದೇ ತನಿಖೆ ಮಾಡಿಸಿಲ್ಲ. ಅವರು ಕೂಡ ಈ ಭ್ರಷ್ಟಾಚಾರದಲ್ಲಿ ಭಾಗಿದಾರರು ಎನ್ನುವುದಕ್ಕೆ ಅವರೇ ಪರೋಕ್ಷವಾಗಿ ಅನುಮಾನ ಮೂಡಿಸಿದ್ದಾರೆ. ಇಲಾಖೆ ಎಸ್‌ಇ, ಇಇ ಅವರಿಗೆ ಮಾತನಾಡಿದಾಗ ಅವರು ತನಿಖೆ ನಡೆಸುವಂತೆ ಪತ್ರ ಬರೆದಿದ್ದಾರೆ. ಆದರೆ, ಅಧಿಕಾರಿಗಳು ನನ್ನ ಬಳಿ ಬಂದು ಇದನ್ನು ಹೊರಗೆ ಹಾಕಬೇಡಿ ಎಂದು ಕೇಳಿಕೊಂಡರು. ಆದರೆ, ರಾಜೀಯಾಗುವ ರಾಜಕಾರಣ ಮಾಡುತ್ತಿಲ್ಲ. ತಾಲೂಕಿನಲ್ಲಿ ನಡೆದ ಭ್ರಷ್ಟಾಚಾರವನ್ನು ಹೊರ ಹಾಕುವುದರಲ್ಲಿ ನಾನು ಯಾವುದೇ ಕಾರಣಕ್ಕೆ ಹಿಂದೇಟು ಹಾಕುವುದಿಲ್ಲ ಎಂದರು.
ಕಳಪೆ ಕೆಲಸಗಳೇ ಹೆಚ್ಚು: ಸಿಂಧನೂರು ನಗರದಲ್ಲಿ ನಡೆದಿರುವ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿವೆ. ಈ ಹಿಂದೆ ರಸ್ತೆಗಳ ಕಳಪೆ ಬಗ್ಗೆ ನಾವು ಆರೋಪ ಮಾಡಿದಾಗ, ಎಲ್ಲಿ ಕಳಪೆಯಾಗಿವೆ ಎಂದು ತೋರಿಸುವಂತೆ ಶಾಸಕ ನಾಡಗೌಡರು ಪ್ರಶ್ನಿಸಿದ್ದರು. ಅವರು ಮುಕ್ತ ಮನಸ್ಸಿನೊಂದಿಗೆ ಬಂದರೆ, ತಾಂತ್ರಿಕ ಅಧಿಕಾರಿಗಳ ಸಮಕ್ಷಮದಲ್ಲೇ ಕಳಪೆ ಕರ್ಮಕಾಂಡವನ್ನು ತೋರಿಸಲು ನಾವು ಸಿದ್ಧರಿದ್ದೇವೆ ಎಂದರು.
ಈ ವೇಳೆ ಮುಖಂಡರಾದ ವೆಂಕಟೇಶ ರಾಗಲಪರ್ವಿ, ಖಾಜಾ ಹುಸೇನ ರೌಡಕುಂದಾ, ಶಿವಕುಮಾರ ಜವಳಿ, ಶರಣಯ್ಯ ಸ್ವಾಮಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.