ಸಾಲದ ವಿಷ ವರ್ತುಲದಲ್ಲಿ ಅನ್ನದಾತರು
ರೈತ ಹಿತ ಚಿಂತನಾ ಗೋಷ್ಠಿ ನೀರಿಗಾಗಿ ಮೂರನೇ ಜಾಗತಿಕ ಸಮರ ನಡೆದರೂ ಅಚ್ಚರಿಯಿಲ್ಲ: ಡಾ| ರಾಜೇಂದ್ರ ಪೋದ್ದಾರ
Team Udayavani, Mar 9, 2020, 5:35 PM IST
ಗೊರೇಬಾಳ: ರೈತನ ಕೃಷಿ ವೆಚ್ಚಕ್ಕಿಂತಲೂ ಆದಾಯ ಕಡಿಮೆಯಿದೆ. ಹೀಗಾಗಿ ಪ್ರತಿ ವರ್ಷವೂ ಹಾನಿಗೊಳಗಾಗಿ ಸಾಲದ ವಿಷ ವರ್ತುಲದಲ್ಲಿ ಸಿಲುಕಿ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾನೆ ಎಂದು ಧಾರವಾಡದ ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಅಭಿಪ್ರಾಯಪಟ್ಟರು.
ಸಿಂಧನೂರು ತಾಲೂಕಿನ ಯದ್ದಲದೊಡ್ಡಿ ಗ್ರಾಮದ ವಿರಕ್ತಮಠದ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಶಿವಯೋಗಿಗಳ 73ನೇ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಆಧುನಿಕ ಕೃಷಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತಾದ ಬೃಹತ್ ರೈತ ಹಿತಚಿಂತನಾ ಗೋಷ್ಠಿಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಭಾರತ ಆಹಾರದಲ್ಲಿ ಸ್ವಾವಲಂಬನೆ ಪಡೆದಿದ್ದರೂ ಶೇ.20ರಷ್ಟು ಜನರಿಗೆ ಆಹಾರದ ಕೊರತೆಯಿದೆ. ಜಾಗತಿಕ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಸಕಾಲದಲ್ಲಿ ಮಳೆಯಾಗುತ್ತಿಲ್ಲ. ಹೀಗಾಗಿ ನೀರಿನ ಕೊರತೆ ಎದುರಿಸುವಂತಾಗಿದೆ ಎಂದರು.
ರೈತರು ಅಗತ್ಯಕ್ಕಿಂತಲೂ ಅಧಿಕ ನೀರು ಬಳಸುತ್ತಿದ್ದಾರೆ. ಮಳೆ ಅಭಾವ ಹೆಚ್ಚಿದ್ದು ಅಂತರ್ಜಲ ಕುಸಿಯುತ್ತಿದೆ. ಇರುವ ನದಿ ಹಳ್ಳಕೊಳ್ಳಗಳು ಕಲುಷಿತಗೊಳ್ಳುತ್ತಿದೆ. ನೀರು ಸೃಷ್ಟಿಸಲು ಯಾವ ವಿಜ್ಞಾನಿಯಿಂದಲೂ ಸಾಧ್ಯವಾಗಿಲ್ಲ. 2030ರ ವೇಳೆಗೆ ಕುಡಿಯುವ ನೀರಿಗೂ ತತ್ವಾರ ಉಂಟಾದರೂ ಅಚ್ಚರಿಯಿಲ್ಲ. ಇನ್ನಾದರೂ ಪ್ರತಿಯೊಬ್ಬರು ಎಚ್ಚೆತ್ತುಕೊಂಡು ನೀರಿನ ಮಿತವ್ಯಯಕ್ಕೆ ಮುಂದಾಗಬೇಕಾಗಿದೆ. ವಿಶೇಷವಾಗಿ ಕಡಿಮೆ ನೀರು ಬಳಕೆಯಾಗುವ ಆಧುನಿಕ ಕೃಷಿಗೆ ರೈತರು ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಕೃಷಿ ಬೆಲೆ ಆಯೋಗ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಾತನಾಡಿ, ಭಾರತದ ಕೃಷಿ ವ್ಯವಸ್ಥೆ ಅತ್ಯಂತ ಬಿಕ್ಕಟ್ಟಿನಲ್ಲಿದೆ. ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದಿದ್ದರೆ ರೈತನಿಗೆ ಉಳಿಗಾಲವಿಲ್ಲ. ಮಾರುಕಟ್ಟೆ ಕುಸಿತದಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲು ಸರ್ಕಾರ ಬಜೆಟ್‌ನಲ್ಲಿ 2 ಸಾವಿರ ಕೋಟಿ ರೂ. ಆವರ್ತ ನಿಧಿ ತೆಗೆದಿರಿಸಿದೆ. ರೈತರು ಸುಸ್ಥಿರ ಕೃಷಿ ವ್ಯವಸ್ಥೆ ಕಡೆ ಸಾಗಬೇಕು ಎಂದರು.
ನಾಡೋಜ ಪ್ರಶಸ್ತಿ ಪುರಸ್ಕೃತ ಮುಂಡರಗಿ ಅನ್ನದಾನೇಶ್ವರ ಸಂಸ್ಥಾನ ಮಠದ ಜಗದ್ಗುರು ಡಾ| ಅನ್ನದಾನೇಶ್ವರ ಮಹಾಸ್ವಾಮಿಗಳು ಮಾತನಾಡಿ, ಜಾತ್ರಾ ಮಹೋತ್ಸವದ ಅಂಗವಾಗಿ ರೈತ ಹಿತಚಿಂತನ ಗೋಷ್ಠಿ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದೆ. ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿದು ತಿನ್ನಬೇಕು. ಅಂದಾಗ ಮಾತ್ರ ಮಾನವನಾಗಿ ಹುಟ್ಟಿದ್ದು ಸಾರ್ಥಕವಾಗುತ್ತದೆ. ಶ್ರೀಮಠವು ಅನೇಕ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗಕ್ಕೆ ಬೆಳಕಾಗಿದೆ ಎಂದು ಬಣ್ಣಿಸಿದರು.
ಕನಕಗಿರಿಯ ಡಾ| ಚನ್ನಮಲ್ಲ ಸ್ವಾಮೀಜಿ, ಶಹಪುರದ ರà ಗುರುಪಾದ ಸ್ವಾಮೀಜಿ, ಚಿತ್ತಾಪುರದ ಶ್ರೀ ಸೋಮನಾಥ ಶಿವಾಚಾರ್ಯರು, ಕಲ್ಲೂರಿನ ಶ್ರೀ ಶಂಭುಲಿಂಗ ಸ್ವಾಮೀಜಿ, ಬಳಗಾನೂರಿನ ಶ್ರೀ ಸಿದ್ದಬಸವ ಸ್ವಾಮೀಜಿ, ಸಿರಗುಪ್ಪಾದ ಶ್ರೀ ಬಸವಭೂಷಣ ಸ್ವಾಮೀಜಿ, ಸಂತೆಕಲ್ಲೂರಿನ ಶ್ರೀ ಮಹಾಂತ ದೇವರು, ಚೀಕಲಪರ್ವಿಯ ಶ್ರೀ ಅನ್ನದಾನ ದೇವರು, ಅಡವಿ ಅಮರೇಶ್ವರದ ಶ್ರೀ ನಾಗಭೂಷಣ ದೇವರು ಸಾನಿಧ್ಯ ವಹಿಸಿದ್ದರು.
ಶ್ರೀಮಠದ ಶ್ರೀ ಮಹಾಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಾನ್ವಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಶೇಷಗಿರಿರಾವ್ ಕೊಲ್ಲಾ, ಜಿಪಂ ಸದಸ್ಯರಾದ ಎನ್.ಶಿವನಗೌಡ ಗೊರೇಬಾಳ, ಬಸವರಾಜ ಹಿರೇಗೌಡರ, ತಾಪಂ ಮಾಜಿ ಸದಸ್ಯ ಚಂದ್ರಭೂಪಾಲ ನಾಡಗೌಡ, ಹಿರಿಯ ಪತ್ರಕರ್ತ ಅಮರೇಗೌಡ ಗೋನವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.