ಶೋಷಿತರ ಮೇಲೆ ಸರ್ಕಾರ ಪ್ರಹಾರ
Team Udayavani, Jan 15, 2019, 10:37 AM IST
ರಾಯಚೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದುಳಿದ, ದಲಿತ, ನೊಂದ ಮಹಿಳೆಯರ ಏಳಿಗೆಗಾಗಿ ನೀಡುತ್ತಿದ್ದ ಅನುದಾನವನ್ನೂ ಕಡಿತಗೊಳಿಸುತ್ತಿವೆ. ಆ ಮೂಲಕ ಶೋಷಿತ ವರ್ಗಗಳ ಮೇಲೆ ಪ್ರಹಾರ ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಗೌರವಾಧ್ಯಕ್ಷ ಯು.ಬಸವರಾಜ ದೂರಿದರು.
ನಗರದ ಕನ್ನಡ ಭವನದಲ್ಲಿ ಇತ್ತೀಚೆಗೆ ನಡೆದ ಸಂಘದ ಜಿಲ್ಲಾ ಘಟಕದ ನಾಲ್ಕನೇ ಸಮ್ಮೇಳನದಲ್ಲಿ ಅವರು ಮಾತನಾಡಿದರು. ನೊಂದ ಜನರ ಸಂಖ್ಯೆಗೆ ಅನುಗುಣವಾಗಿ ಸರ್ಕಾರಗಳು ಅನುದಾನ ನೀಡಬೇಕು. ಅದರಲ್ಲೂ ತಡೆ ಹಿಡಿಯುವ ಮೂಲಕ ಅವರ ಬದುಕನ್ನು ಮತ್ತಷ್ಟು ಜಟಿಲಗೊಳಿಸುತ್ತಿವೆ ಎಂದು ದೂರಿದರು.
ಸರ್ಕಾರಗಳಿಗೆ ಶೋಷಿತರ ಒಗ್ಗಟ್ಟಿನ ಬಲ ಏನು ಎಂಬುದನ್ನು ತೋರಿಸಬೇಕು. ಅದಕ್ಕೆ ಸಂಘಟಿತ ಹೋರಾಟವೊಂದೇ ದಾರಿ. ಅನುದಾನ ಹಂಚಿಕೆಯಲ್ಲಿ ವಂಚಿಸುತ್ತಿರುವ ಸರ್ಕಾರಗಳ ವಿರುದ್ಧ ಹೋರಾಟ ಅನಿವಾರ್ಯ. ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ದೇವದಾಸಿ ಕುಟುಂಬಗಳು ಪುನರ್ವಸತಿ ಯೋಜನೆಗಳನ್ನು ರೂಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಗೋಪಾಲ ನಾಯಕ ಮಾತನಾಡಿ, ದೇವದಾಸಿಯರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಸಮರ್ಪಕ ದೊರೆಯುವಂತಾಗಬೇಕು. ದೇವದಾಸಿ ಪದ್ಧತಿಯಿಂದ ವಿಮೋಚನೆಗೊಂಡ ಮಹಿಳೆಯರಿಗಾಗಿ ಸರ್ಕಾರ ಮಾಸಾಶನ, ವಸತಿ ಯೋಜನೆ ಹಾಗೂ ಸ್ವಯಂ ಉದ್ಯೋಗಕ್ಕೆ ಸಾಲದ ಸೌಲಭ್ಯ ಕಲ್ಪಿಸುತ್ತಿದೆ. ಅದನ್ನೆಲ್ಲ ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಬಿ.ಮಾಳಮ್ಮ ಮಾತನಾಡಿ, ದೇವದಾಸಿ ಪದ್ಧತಿಯನ್ನು ಸಾಮಾಜಿಕ ದೌರ್ಜನ್ಯ ಎಂದು ಪರಿಗಣಿಸಿ ಸರ್ಕಾರಗಳು ಈ ಪದ್ಧತಿ ನಿರ್ಮೂಲನೆಗೆ ಬಲಿಷ್ಠ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದರು. ತಾಲೂಕು ಕಾರ್ಯದರ್ಶಿ ಡಿ.ಎಸ್.ಶರಣಬಸವ, ಕೆ.ಜಿ.ವೀರೇಶ ಮಾತನಾಡಿದರು.
ಪದಾಧಿಕಾರಿಗಳ ಆಯ್ಕೆ: ಇದೇ ವೇಳೆ ಜಿಲ್ಲಾ ಘಟಕಕ್ಕೆ ಮುಂದಿನ ಮೂರು ವರ್ಷದ ಅವಧಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಚ್.ಪದ್ಮಾ, ಕಾರ್ಯದರ್ಶಿಯಾಗಿ ಹುಲಿಗೆಮ್ಮ ಮುದಗಲ್, ಜೆ.ತಾಯಮ್ಮ, ಗೌರವಾಧ್ಯಕ್ಷರಾಗಿ ಕೆ.ಜಿ.ವೀರೇಶ ಆಯ್ಕೆಯಾದರು. 17 ಜನರ ಸಮಿತಿ ರಚಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
Maski ಅಕ್ರಮ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.