ಅಭಿವೃದ್ಧಿಗೆ ಹಣ ಕೊಟ್ರೆ ಅವಿರೋಧ ಆಯ್ಕೆ!
|10 ಲಕ್ಷ ರೂ. ನೀಡಲು ಸಿದ್ಧರಾದ ಆಕಾಂಕ್ಷಿಗಳು?|ಜಾತಿ ಆಧಾರದಲ್ಲೂ ನಡೆದಿದೆ ಹಳ್ಳಿ ಫೈಟ್
Team Udayavani, Dec 8, 2020, 4:19 PM IST
ಸಾಂದರ್ಭಿಕ ಚಿತ್ರ
ರಾಯಚೂರು: ಗ್ರಾಪಂ ಚುನಾವಣೆ ಕಣ ದಿನೇದಿನೇ ರಂಗೇರುತ್ತಿದ್ದು, ಹಳ್ಳಿ ಕಟ್ಟೆಯಲ್ಲಿ ಬರೀ ರಾಜಕೀಯದ್ದೇ ಮಾತು. ಗ್ರಾಮಾಭಿವೃದ್ಧಿಗೆ ಹೆಚ್ಚು ಹಣನೀಡಿದವರನ್ನು ಅವಿರೋಧ ಆಯ್ಕೆಮಾಡುವಂಥ ಚರ್ಚೆಗಳು ಕೆಲವೆಡೆ ನಡೆಯುತ್ತಿವೆ.
ಕಳೆದ ಸಾರ್ವತ್ರಿಕ ಚುನಾವಣೆಗೆಹೋಲಿಸಿದರೆ ಈ ಬಾರಿ ಚುನಾವಣೆ ಅಖಾಡಮತ್ತಷ್ಟು ಕಳೆಗಟ್ಟಿದೆ. ಗ್ರಾಮೀಣ ಭಾಗದಲ್ಲಿರಾಜಕೀಯ ಪ್ರಜ್ಞೆ ಹೆಚ್ಚಾಗಿದ್ದು, ಸ್ಪರ್ಧೆಗೆ ನಾನು ನೀನುಎನ್ನುವವರು ಹೆಚ್ಚಾಗಿದ್ದಾರೆ. ಪಕ್ಷಾಧಾರಿತವಲ್ಲದ ಕಾರಣ ಯಾರು ಬೇಕಾದರೂ ತಮ್ಮದೇ ಚಿಹ್ನೆಯಡಿ ಸ್ಪರ್ಧಿಬಹುದು ಎಂಬುದು ಆಕಾಂಕ್ಷಿಗಳಿಗೆ ವರವಾಗಿದೆ. ಇದರಿಂದ ಪ್ರಮುಖ ಪಕ್ಷಗಳ ಕಾರ್ಯಕರ್ತರು ಕೂಡ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಗ್ರಾಮಸ್ಥರು ಕೂಡ ಗ್ರಾಮಾಭಿವೃದ್ಧಿಗೆ ಯಾರು ಹೆಚ್ಚು ಹಣನೀಡುತ್ತಾರೋ? ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡುವುದಾಗಿ ಮೌಖೀಕ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಸಾಂವಿಧಾನಿಕ ಸ್ಥಾನಮಾನಗಳು ಕೂಡಹಳೇ ಪದ್ಧತಿಯ ಪಂಚಾಯಿತಿ ಕಟ್ಟೆಯಲ್ಲೇ ನಿರ್ಧರಿತವಾಗುವಂತಾಗಿದೆ.
ಚುನಾವಣೆಗೆ ಹಣ, ಬಾಡೂಟ, ಪ್ರಚಾರ ಇತರೆ ಖರ್ಚುಗಳು ಸೇರಿ ಒಬ್ಬ ಸದಸ್ಯ ಐದಾರುಲಕ್ಷದವರೆಗೂ ಖರ್ಚು ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದರೆ, ಇಷ್ಟು ಹಣ ಖರ್ಚು ಮಾಡಿಗೆಲ್ಲದಿದ್ದರೆ ಹೇಗೆ ಎನ್ನುವ ಆತಂಕವೂ ಇದೆ. ತುಸುಖರ್ಚು ಹೆಚ್ಚಾದರೂ ಅವಿರೋಧ ಆಯ್ಕೆ ಸೂಕ್ತಎನ್ನುವ ನಿಲುವು ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಗ್ರಾಮಾಭಿವೃದ್ಧಿಗೆ 10 ಲಕ್ಷ ರೂ. ವರೆಗೂ ನೀಡಲು ಮುಂದಾಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಪೈಪೋಟಿಇಲ್ಲವಾದರೆ ಸಮೀಪ ಸ್ಪರ್ಧೆಗೆ ಹಣ ನೀಡಿ ಅವರನ್ನು ಕಣದಿಂದ ಹಿಂದೆ ಸರಿಸುವ ರಾಜಕೀಯ ತಂತ್ರಗಾರಿಕೆ ಇಲ್ಲೂ ನಡೆದಿದೆ.
ಜಾತಿವಾರು ಲೆಕ್ಕಾಚಾರ ಜೋರು: ಇನ್ನೂ ಹಳ್ಳಿಗಳಲ್ಲಿ ಜಾತಿವಾರು ಲೆಕ್ಕಾಚಾರವೇ ಜೋರಾಗಿದೆ. ಒಂದೊಂದು ಊರಿನಲ್ಲಿ ಒಂದೊಂದು ಜಾತಿಪ್ರಾಬಲ್ಯ ಇರುತ್ತದೆ. ಹೀಗಾಗಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ ಅಲ್ಲಿ ಜಾತಿ ಲೆಕ್ಕಾಚಾರಜೋರಾಗುತ್ತಿದೆ. ಯಾವ ಜಾತಿಯ ಜನಹೆಚ್ಚಾಗಿದ್ದಾರೋ ಅವರು ಹಿಡಿತ ಸಾಧಿ ಸುತ್ತಿದ್ದಾರೆ.ಒಂದೇ ಜಾತಿಯಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಲ್ಲಿ ಆದ್ಯತಾನುಸಾರ ಸ್ಪರ್ಧೆಗೆ ಅವಕಾಶ ನೀಡಲಾಗುತ್ತಿದೆ.ಒಮ್ಮೆ ಗೆದ್ದವರನ್ನು ಬಿಟ್ಟು ಹೊಸಬರಿಗೆ ಅವಕಾಶ ಸಿಗಲಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಉದ್ಯೋಗ ಖಾತ್ರಿ ಕರಾಮತ್ತು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಪಂಗಳಿಗೆ ಈಗ ಅನುದಾನ ಹೆಚ್ಚಾಗಿ ನೀಡುತ್ತಿವೆ. ಅದರಲ್ಲೂ ಉದ್ಯೋಗ ಖಾತ್ರಿಯೋಜನೆ ಮೇಲೆ ಸಾಕಷ್ಟು ಕಣ್ಣಿದೆ. ಉದ್ಯೋಗಖಾತ್ರಿಯಡಿ ಸಾಕಷ್ಟು ಹಣ ಪಂಚಾಯಿತಿಗಳಿಗೆ ಹರಿದು ಬರುತ್ತಿದೆ. ಜಾಬ್ ಕಾರ್ಡ್ ಮಾಡಿಸಿದಲ್ಲಿ ಕಡ್ಡಾಯವಾಗಿ ಕೂಲಿ ಹಣ ಬರುವ ಖಾತರಿ ಇರುವ ಕಾರಣ ಸದಸ್ಯರಿಗೆ ಇದೊಂದು ಸುವರ್ಣಾವಕಾಶ ಎನ್ನುವಂತಾಗಿದೆ. ಉದ್ಯೋಗ ಖಾತ್ರಿಯಡಿ ಸಾಕಷ್ಟು ಕೆಲಸ ಮಾಡಿಸಿಕೊಳ್ಳಲು ಅವಕಾಶ ಇರುವುದರಿಂದ ಪಂಚಾಯಿತಿ ಫೈಟ್ ತೀವ್ರಗೊಳ್ಳಲು ಕಾರಣವಾಗುತ್ತಿದೆ.
ಈ ಬಾರಿ ಗ್ರಾಪಂ ಚುನಾವಣೆಯಲ್ಲೂ ಹಣದ ಮಾತು ಜೋರಾಗಿದೆ. ಖರ್ಚು ಮಾಡಲು ಹಿಂದೇಟು ಹಾಕುತ್ತಿಲ್ಲ. ಹೆಚ್ಚು ಜನಸಂಖ್ಯೆ ಇರುವ ಜಾತಿಗೆ ಮೀಸಲಾತಿ ಸಿಕ್ಕಲ್ಲಿ ಅದೇ ಸಮುದಾಯದಲ್ಲಿ ಪೈಪೋಟಿಹೆಚ್ಚಾಗುತ್ತಿದೆ. ಹೀಗಾಗಿ ಅವಿರೋಧ ಆಯ್ಕೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ. -ಹೆಸರು ಹೇಳಲಿಚ್ಛಿಸದ ಆಕಾಂಕ್ಷಿ,ಯರಗೇರಾ
-ಸಿದ್ಧಯ್ಯಸ್ವಾಮ ಕುಕುನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.