ಸಪ್ಪಾದ ಹಸಿ ಮೆಣಸಿನಕಾಯಿ
Team Udayavani, Oct 11, 2021, 1:15 PM IST
ದೇವದುರ್ಗ: ಹಸಿ ಮೆಣಸಿನಕಾಯಿಗೆ ಬೆಲೆ ಇಲ್ಲದ ಕಾರಣ ಕೆಜಿಗೆ 7ರೂ. ಮಾರಾಟವಾಗುತ್ತಿದ್ದು, ರೈತರ ಕಣ್ಣಲ್ಲಿ ನೀರು ತರಿಸಿದೆ.
ಹಸಿ ಮೆಣಸಿನಕಾಯಿಗೆ ಗ್ರಾಹಕರು ವಾರದ ಸಂತೆ, ತರಕಾರಿ ಮಾರುಕಟ್ಟೆಯಲ್ಲಿ ಕೆಜಿಗೆ ನಾಲ್ಕೈದು ರೂ. ಕೇಳುವುದರಿಂದ ರೈತರಿಗೆ ದಿಗಿಲು ಬಡದಿದೆ. ಸಂಜೆಯಾಗುತ್ತಿದ್ದಂತೆ ವ್ಯಾಪಾರಸ್ಥರೂ ಕೇಳಿದ ದರಕ್ಕೆ ಅನಿವಾರ್ಯ ಮಾರುವಂತಹ ಸ್ಥಿತಿ ಇದೆ. ಕೆಲ ರೈತರು ಮಹಾರಾಷ್ಟ್ರದ ಪುಣೆಗೆ ಹಸಿ ಮೆಣಸಿನಕಾಯಿ ಒಯ್ಯುತ್ತಿದ್ದು, ಪುಣೆಯಲ್ಲಿ ಕೆಜಿಗೆ 18ರಿಂದ 20ರೂ ಮಾರಾಟವಾಗುತ್ತಿದೆ.
ಪಟ್ಟಣ ಸೇರಿ ತಾಲೂಕಿನಾದ್ಯಂತ ಮುಂಗಾರಿನಲ್ಲಿ ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಸಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ಒಂದು ಎಕರೆಗೆ ಕನಿಷ್ಠ 30ರಿಂದ 35 ಸಾವಿರ ರೂ. ವೆಚ್ಚ ಮಾಡಲಾಗಿದೆ. ಹಾಕಿದ ಹಣಕ್ಕಿಂತ ಕೂಲಿ ಕಾರ್ಮಿಕರಿಗೆ ಕೊಟ್ಟ ಹಣವೂ ಬಾರದಂತಾಗಿದೆ. ಜೂನ್ ತಿಂಗಳು ನಾರು ಸಸಿ ಮಾಡಿ ಮೆಣಸಿನಕಾಯಿ ಬಿತ್ತನೆ ಮಾಡಿದ ನೂರಾರು ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ.
ಇದನ್ನೂ ಓದಿ: ಅಕ್ರಮ ಮರಂ ಸಾಗಣೆ ಮತ್ತೆ ಶುರು
ತಾಲೂಕಿನಲ್ಲಿ ಹಸಿ ಮೆಣಸಿನಕಾಯಿ, ಭತ್ತ, ಹತ್ತಿ ಅತಿ ಹೆಚ್ಚು ಬಿತ್ತನೆ ಮಾಡಲಾಗುತ್ತಿದೆ. ಕೊಪ್ಪರು, ಗಬ್ಬೂರು, ಮಸರಕಲ್, ಸುಂಕೇಶ್ವರಹಾಳ, ರಾಮನಾಳ, ಯಮನಾಳ ಸೇರಿ ಇತರೆ ಗ್ರಾಮಗಳಲ್ಲಿ ಹಸಿ ಮೆಣಸಿನಕಾಯಿ ಅತಿ ಹೆಚ್ಚು ಬೆಳೆಯಲಾಗಿದೆ. ಕಳೆದ ವರ್ಷ ಹೋಲಿಸಿದರೆ ಈ ವರ್ಷ ಹೆಚ್ಚು ಹಸಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ಇದೀಗ ಹತ್ತಿಗೆ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 9ರಿಂದ 10 ಸಾವಿರ ರೂ. ಬೆಲೆ ಇದೆ. ಹತ್ತಿ ಬಿಡಿಸಿ ಮಾರುಕಟ್ಟೆಗೆ ಬರುತ್ತಿದ್ದಂತೆ ಏಕಾಏಕಿ ದರ ಕುಸಿದು ಹೋಗುವುದು ರೈತರಿಗೆ ಹೊಸದೇನಲ್ಲ. ಈ ಬಾರಿ ಹಸಿ ಮೆಣಸಿನಕಾಯಿಗೆ ಬೆಲೆ ಇಲ್ಲದ ಕಾರಣ ನೂರಾರು ರೈತರು ತೊಂದರೆ ಅನುಭವಿಸುವಂತಾಗಿದೆ.
ಒಂದು ಎಕರೆಗೆ 30 ರಿಂದ 40 ಸಾವಿರವರೆಗೆ ವೆಚ್ಚ ಭರಿಸುವ ರೈತರಿಗೆ ಬೆಲೆ ಕೈ ಹಿಡಿಯುತ್ತಿಲ್ಲ. ಹೀಗಾಗಿ ನಷ್ಟದಲ್ಲೇ ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತರಾದ ಬಸಲಿಂಗ, ರಾಮಮೂರ್ತಿ.
ತಾಲೂಕಿನಾದ್ಯಂತ ಬೆಳೆದ ಹಸಿ ಮೆಣಸಿನಕಾಯಿಗೆ ಬೆಲೆ ಇಲ್ಲದಂತಾಗಿದೆ. ವಾರದ ಸಂತೆಯಲ್ಲಿ 7ರೂ. ಕೆಜಿಗೆ ಮಾರಾಟವಾಗುತ್ತಿದೆ. ಇಂತಹ ಸಮಸ್ಯೆಗಳಿಂದ ರೈತರು ನೊಂದಿದ್ದಾರೆ ಎನ್ನುತ್ತಾರೆ ರೈತ ಸಂಘದ ತಾಲೂಕಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಕಳೆದ ವರ್ಷಕ್ಕಿಂತ ಈವರ್ಷ ರೈತರು ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಸಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಈ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ 7ರೂ. ಕೆಜಿ ಮಾರಾಟ ನಡೆದಿದೆ. ಭೀಮರಾವ್ ಕುಂಬಾರ, ಸಹಾಯಕ ನಿರ್ದೇಶಕ ತೋಟಗಾರಿಕೆ
ಕಳೆದ ವರ್ಷಕ್ಕಿಂತ ಈ ವರ್ಷ ರೈತರು ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಸಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಈ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ 7ರೂ. ಕೆಜಿ ಮಾರಾಟ ನಡೆದಿದೆ.
ಭೀಮರಾವ್ ಕುಂಬಾರ, ಸಹಾಯಕ ನಿರ್ದೇಶಕ ತೋಟಗಾರಿಕೆ
ಹಸಿ ಮೆಣಸಿನಕಾಯಿ ಬೆಳೆಗೆ ಬೆಲೆ ಇಲ್ಲ ಕೆಜಿಗೆ 7ರೂ. ಮಾರಾಟ ನಡೆದಿದೆ. ಮಹಾರಾಷ್ಟ್ರದಲ್ಲಿ 18ರಿಂದ 20ರೂ. ಕೆಜಿ ಇದ್ದುದರಿಂದ ಸ್ವಲ್ಪ ಕೂಲಿ ಹಣವಾದರೂ ಬರಲಿ ಎಂದು ಪುಣೆಗೆ ಹೊರಟಿದ್ದೇವೆ.
ಮುದುಕಪ್ಪ, ನಾಗಪ್ಪ, ಅಮರಾಪುರ ಗ್ರಾಮದ ರೈತರು
ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.