ಗುರುಗುಂಟಾ ಜಾತ್ರೆ: ಜಾನುವಾರು ಮಾರಾಟ ಜೋರು
Team Udayavani, Mar 5, 2018, 5:42 PM IST
ಹಟ್ಟಿ ಚಿನ್ನದ ಗಣಿ: ಸಮೀಪದ ಗುರುಗುಂಟಾ ಅಮರೇಶ್ವರ ಜಾತ್ರೆಯಲ್ಲಿ ಜಾನುವಾರುಗಳ ಮಾರಾಟ ಜೋರಾಗಿದೆ. ಜಾತ್ರೆಗೆ ಆಗಮಿಸಿದ್ದ ನೆರೆ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಎತ್ತುಗಳು, ಕೃಷಿ ಪರಿಕರಗಳು ರೈತರನ್ನು ಆಕರ್ಷಿಸುತ್ತಿದ್ದವು.
ಒಂದು ತಿಂಗಳು ನಡೆಯುವ ಜಾತ್ರೆಯಲ್ಲಿ ರೈತರಿಗೆ ಬಿತ್ತನೆ ಮತ್ತು ಕಟಾವಿಗೆ ಅಗತ್ಯವಾದ ಕೃಷಿ ಉಪಕರಣಗಳ ಪ್ರದರ್ಶನ ಏರ್ಪಡಿಸಲಾಗಿದೆ. ಕೋಠಾ, ಯಲಗಟ್ಟಾ, ರೋಡಲಬಂಡ. ಮೇದಿನಾಪುರ, ಆನ್ವರಿ, ನಿಲೋಗಲ್ ಸೇರಿ ವಿವಿಧ ಗ್ರಾಮದ ರೈತರು ತಮ್ಮ ಎತ್ತುಗಳನ್ನು ಮಾರಾಟಕ್ಕೆ ತಂದಿದ್ದಾರೆ. ನೇಗಿಲು, ಕುಂಟಿ, ಕೂರಿಗಿ, ಬುಕ್ಕ ತಲವು, ನಗ, ಬಾನಿ ಹೂಟಿ, ಹಗ್ಗ ಕೃಷಿಗೆ ಬೇಕಾಗುವ ಪರಿಕರಗಳನ್ನು ರೈತರು ಖರೀದಿಸುತ್ತಿದ್ದಾರೆ.
ಹೆಚ್ಚಿದ ಬೇಡಿಕೆ: ಐದು ದಿನಗಳವರೆಗೆ ನಡೆಯುವ ಜಾನುವಾರು ಜಾತ್ರೆಯಲ್ಲಿ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ಜಿಲ್ಲೆಗಳ ರೈತರು ಆಗಮಿಸಿ ಎತ್ತುಗಳನ್ನು ಖರೀದಿಸುತ್ತಿದ್ದರಿಂದ. ಆಯಾ ತಳಿಗನುಗುಣವಾಗಿ ಎತ್ತುಗಳಿಗೆ 25 ಸಾವಿರದಿಂದ 4 ಲಕ್ಷ ರೂ.ವರೆಗೂ ಬೆಲೆ ನಿಗದಿಪಡಿಸಲಾಗಿದೆ.
ರೈತರಿಗೆ ಸೌಲಭ್ಯ: ಜಾತ್ರಾ ಸಮಿತಿಯಿಂದ ಎತ್ತುಗಳ ಮಾರಾಟ ಮತ್ತು ಖರೀದಿಗೆ ಆಗಮಿಸಿರುವ ರೈತರಿಗೆ ಅನ್ನಸಂತರ್ಪಣೆ, ನೀರಿನ ವ್ಯವಸ್ಥೆ ಮಾಡಲಾಗಿದೆ. ಎತ್ತುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಗುರುಗುಂಟಾ ಜಾತ್ರೆಯಲ್ಲಿ ವಿವಿಧ ತಳಿಯ ಎತ್ತುಗಳು ಮಾರಾಟಕ್ಕಿವೆ ಎಂದು ಸಂಬಂಧಿಕರು ತಿಳಿಸಿದ್ದರಿಂದ ಎತ್ತುಗಳ ಖರೀದಿಗೆ ಆಗಮಿಸಿದ್ದೇನೆ.
ಮಲ್ಲಿಕಾರ್ಜುನ, ರೈತ ಯಾದಗಿರಿ ಜಿಲ್ಲೆ.
ಎತ್ತುಗಳನ್ನು ಪಾಲನೆ ಪೋಷಣೆ ಮಾಡಿ ದಷ್ಟಪುಷ್ಟವಾಗಿ ಬೆಳಸಿದ್ದೇವೆ. ಸೂಕ್ತ ಬೆಲೆ ದೊರೆತರೆ ಅವುಗಳನ್ನು ಮಾರುತ್ತೇವೆ.
ಹನುಮಂತ ಸುರಪುರ, ರೈತ ಯಲಗಟ್ಟಾ ಗ್ರಾಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ
Belagavi; ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
Kabaddi: ಇಂದು ಸೀನಿಯರ್ ಕಬಡ್ಡಿ ತಂಡದ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.