ದೇವಸ್ಥಾನ ಎದುರು ಬಾಯ್ತೆರೆದ ಬೃಹತ್ ಹಗೇವು
ಸಮಸ್ಯೆ ಪರಿಶೀಲಿಸಿ ಮತ್ತೆ ಸುಳಿಯದ ಅಧಿಕಾರಿಗಳು , ನಿವಾಸಿಗಳಲ್ಲಿ ದಿನವೂ ಭಯ
Team Udayavani, Nov 15, 2020, 5:12 PM IST
ದೇವದುರ್ಗ: ಪುರಸಭೆ ಕಚೇರಿ ಪಕ್ಕದಲ್ಲಿರುವ ರಾಮಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಹಗೇವು ದೊಡ್ಡ ಮಟ್ಟದಲ್ಲಿ ಬೋಂಗಾ ಬಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿದೆ.
ಸಮಸ್ಯೆ ಕುರಿತು ವಾರ್ಡ್ ಸದಸ್ಯ ಚಂದ್ರಕಾಂತ್ ಬಿಲ್ಲವ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಅಧಿಕಾರಿಗಳು ವಾರಗಳೇ ಗತಿಸಿದರೂ ಹಗೇವು ಮುಚ್ಚುವ ಗೋಜಿಗೆ ಹೋಗಿಲ್ಲ. ಇದರಿಂದ ದಿನೇ ದಿನೇ ಕುಸಿದು ಬೀಳುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಹೊರಗಡೆ ಬರಲಾರದ ಸಮಸ್ಯೆ ಎದುರಾಗಿದೆ.
ರಾಮಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಹಗೇವು ಭಕ್ತರಿಗೆ ಸಮಸ್ಯೆಯಾಗಿದೆ. ಕೋರ್ಟ್, ಎಸ್.ಬಿಎಚ್. ಬ್ಯಾಂಕ್, ವಸತಿ ನಿಲಯ, ಜೈಲು, ಕೃಷಿ ಇಲಾಖೆ ಸೇರಿ ಇತರೆ ದೇವಸ್ಥಾನ ಸುತ್ತ ವಾರದ ಸಂತೆಯೂ ನಡೆಯುತ್ತದೆ. ಪುರಸಭೆ ಅಧಿಕಾರಿಗಳು ಹಗೇವು ಮುಚ್ಚುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಇದರಿಂದ ದಿನವಿಡೀ ವಾರ್ಡ್ ನಿವಾಸಿಗಳು ಭಯದಲ್ಲೇ ಮಕ್ಕಳ ಜೋಪಾನ ಮಾಡುವ ಸ್ಥಿತಿ ಬಂದೊದಗಿದೆ.
ಮನೆಗೆ ನುಗ್ಗಿದ ನೀರು: ಪಟ್ಟಣದ ಅಶೋಕ ವಾರ್ಡ್‌ನಲ್ಲಿ ಶಿವಪುತ್ರ ಉಪ್ಪಾರ ಮನೆಗೆಮಳೆ, ಚರಂಡಿ ಗಲೀಜು ನೀರು ನುಗ್ಗಿದೆ. ತಗ್ಗುಪ್ರದೇಶದಲ್ಲಿರುವ ಮನೆಗೆ ಆಗಾಗ ಚರಂಡಿ ನೀರು ನುಗ್ಗುತ್ತಿರುವ ಹಿನ್ನೆಲೆ ಜನ ಬೇಸತ್ತಿದ್ದಾರೆ. ಅವೈಜ್ಞಾನಿಕ ಚರಂಡಿ ಕಾಮಗಾರಿಯೇ ಸಮಸ್ಯೆಗೆ ಮೂಲ ಕಾರಣ ಎಂದು ನಿವಾಸಿಗಳುಹೇಳುತ್ತಾರೆ. ಚರಂಡಿ ನೀರು ಹೋಗಲು ಸೂಕ್ತ ಮಾರ್ಗವಿಲ್ಲದೇ ಮಳೆ ಬಂದಾಗ ಮನೆಗೆನುಗ್ಗುತ್ತಿದೆ. ಈ ಕುರಿತು ವಾರ್ಡ್ ಸದಸ್ಯ ಖಾಜಾ ಹುಸೇನ್ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅದರಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೋದವರು ಮತ್ತೆ ಇತ್ತ ತಿರುಗಿಯೂ ನೋಡಿಲ್ಲ ಎನ್ನುತ್ತಾರೆ ನಿವಾಸಿಗಳು.
ಕಸಕ್ಕೆ ಬೆಂಕಿ: ವಾರ್ಡ್‌ನಲ್ಲಿ ಹಸಿ ಮತ್ತು ಒಣ ಕಸ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಂಡಿದ್ದರೂ ಕಸ ಸಂಗ್ರಹ ಸಿಬ್ಬಂದಿಗಳು ನಿರ್ಲಕ್ಷé ವಹಿಸುತ್ತಿದ್ದಾರೆ. ವಾರ್ಡ್‌ಗಳಲ್ಲಿ ಬಿದ್ದಿರುವ ಕಸವನ್ನು ಸಿಬ್ಬಂದಿಗಳು ಅಲ್ಲಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ದಟ್ಟಹೊಗೆ ಉಂಟಾಗಿ ಪರಿಸರಕ್ಕೆ ಹಾನಿಯಾಗುತ್ತದೆ. ಸಿಬ್ಬಂದಿಗಳು ವಾರ್ಡ್‌ನಲ್ಲಿ ಸಂಗ್ರಹಿಸುವ ಕಸವನ್ನು ವಾಹನಗಳಲ್ಲಿ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಈ ಸಮಸ್ಯೆ ತಾಲೂಕು ಕೇಂದ್ರದಲ್ಲೇ ಇದ್ದು, ಬೆಳಗ್ಗೆ ವಾರ್ಡ್ ಗಳಲ್ಲಿ ಸಂಚರಿಸಿದರೆ ಅಧಿಕಾರಿಗಳಿಗೆ ಜೀವಂತ ಸಮಸ್ಯೆ ತಿಳಿಯುತ್ತದೆ ಎನ್ನುತ್ತಾರೆ ನಿವಾಸಿಗಳು.
ವಾರ್ಡ್‌ಗಳಲ್ಲಿರುವ ಸಮಸ್ಯೆ ಕುರಿತು ಪರಿಹಾರ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಲಾಗುತ್ತದೆ. – ಹನುಮಗೌಡ ಶಂಕರಬಂಡಿ ಪುರಸಭೆ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.