ಕೂಲಿಗಾಗಿ ಆಗ್ರಹಿಸಿ ಹಮಾಲರ ಪ್ರತಿಭಟನೆ
Team Udayavani, Dec 31, 2019, 12:13 PM IST
ರಾಯಚೂರು: ಲಾರಿ ಮಾಲೀಕರು ಹಾಗೂ ವರ್ತಕರು ಸರಿಯಾಗಿ ಕೂಲಿ ಹಣ ನೀಡುತ್ತಿಲ್ಲ. ನೇರವಾಗಿ ಹಮಾಲರಿಗೆ ಕೂಲಿ ಕೊಡಿಸುವ ಮೂಲಕ ವಂಚನೆ ತಡೆಗಟ್ಟುವಂತೆ ಆಗ್ರಹಿಸಿ ರಾಯಚೂರು ಜಿಲ್ಲಾ ಹಮಾಲರ ಸಂಘದಿಂದ ನಗರದ ಎಪಿಎಂಸಿ ಕಚೇರ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಎಪಿಎಂಸಿ ವ್ಯಾಪ್ತಿಯ ವರ್ತಕರ ಅಂಗಡಿಗಳಲ್ಲಿ ಸುಮಾರು 150ಕ್ಕೂ ಅಧಿಕ ಹಮಾಲರು ಮೂರ್‍ನಾಲ್ಕು ದಶಕದಿಂದ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಲಾರಿಗಳಿಂದ ಲೋಡಿಂಗ್, ಅನ್ ಲೋಡಿಂಗ್ ಮಾಡುವ ಮೂಲಕ ದುಡಿಯುತ್ತಿದ್ದಾರೆ. ಆದರೆ, ಎರಡು ವರ್ಷದಿಂದ ಕೂಲಿ ಹಣ ತಾವೇ ಪಡೆಯುತ್ತಿರುವ ವರ್ತಕರು ನಮ್ಮ ಶ್ರಮಕ್ಕೆ ತಕ್ಕ ಕೂಲಿ ನೀಡದೆ ವಂಚಿಸುತ್ತಿದ್ದಾರೆ. ಹೀಗಾಗಿ ಕೆಲಸ ಮಾಡಿದ ಹಮಾಲಿಗಳಿಗೆ ನೇರವಾಗಿ ನೀಡುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ದಿನವಿಡೀ ಶ್ರಮ ವಹಿಸಿ ದುಡಿಯುವ ಹಮಾಲರಿಗೆ ಇದರಿಂದ ಅನ್ಯಾಯವಾಗುತ್ತಿದೆ. ಈ ಕುರಿತು ಕಾರ್ಮಿಕ ಇಲಾಖೆ ಹಾಗೂ ಮುಖಂಡರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಕ್ರಮ ಕೈಗೊಳ್ಳದಿದ್ದಲ್ಲಿ ಎಲ್ಲ ಹಮಾಲಿಗಳು ಸೇವೆ ಸ್ಥಗಿತಗೊಳಿಸಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹಮಾಲರ ಸಂಘದ ಸಣ್ಣ ಮಾರೆಪ್ಪ, ಪ್ರಧಾನ ಕಾರ್ಯದರ್ಶಿ ಕೆ. ವೆಂಕಟೇಶ ಯಾದವ್, ಗೌರವಾಧ್ಯಕ್ಷ ಆದೆಪ್ಪ ಕಾಡೂರು, ಕಾನೂನು ಸಲಹೆಗಾರ ಜಿ.ಎಸ್. ವೀರಭದ್ರಪ್ಪ, ಉಪಾಧ್ಯಕ್ಷ ಶಿವಣ್ಣ ಸೇರಿದಂತೆ ಹಮಾಲರು ಭಾಗವಹಿಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಗೋಬಿ, ಕಾಟನ್ ಕ್ಯಾಂಡಿಯಲ್ಲಿ ಮತ್ತೆ ಕೃತಕಬಣ್ಣ!
G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್ ಚರ್ಚೆ
Delhi; ಈಗ ಟೈಂ ಬಾಂಬ್! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ
Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!
Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.