ಬನಾನಾ ಹರಕೆ, ಡಬ್ಬಿಂಗ್ ಗಾನಾಬಜಾನಾ!
Team Udayavani, Feb 27, 2023, 11:11 AM IST
ರಾಯಚೂರು: ಚುನಾವಣೆ ಎಂದರೆ ಎಷ್ಟು ಗಂಭೀರ ವಿಷಯವೋ ಅಷ್ಟೇ ಸ್ವಾರಸ್ಯಕರ-ವಿನೋದ ಭರಿತ ಸಂಗತಿಗೂ ಸಾಕ್ಷಿಯಾಗುತ್ತದೆ. ಇದಕ್ಕೊಂದು ಸೇರ್ಪಡೆ ಬಾಳೆಹಣ್ಣಿನ ಹರಕೆ ಟ್ರೆಂಡ್!
ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳು ಜಾತ್ರೆ ಸಮಯ ಎಂದೇ ಕರೆಯಲಾಗುತ್ತದೆ. ಇಂಥ ಜಾತ್ರೆಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ ಬಾಳೆಹಣ್ಣಿನ ಮೇಲೆ ಹೆಸರು ಬರೆದು ರಥಕ್ಕೆ ಎಸೆ ಯುವ ಹೊಸ ಪದ್ಧತಿ ಶುರುವಾಗಿದೆ. ಇದು ಎಲ್ಲೋ ಒಂದೆರಡು ಕಡೆ ನಡೆಯುತ್ತಿರುವ ಸಂಗತಿ ಯಲ್ಲ. ಪ್ರತಿ ಊರಲ್ಲೂ ಈ ರೀತಿಯ ಹರಕೆ ಸಾಮಾನ್ಯವಾಗುತ್ತಿದೆ. ಅಷ್ಟು ಮಾತ್ರವಲ್ಲ ಅದನ್ನು ಫೋಟೋ ತೆಗೆದು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ನಮ್ಮ ಮುಂದಿನ ಎಂಎಲ್‌ಎ ಇವರೇ’ ಎಂದು ಹೆಸರು ಬರೆಯುವುದು ಉಚ್ಛಾಯಗಳಿಗೆ, ರಥಗಳಿಗೆ ಎಸೆದು ಹರಕೆ ತೀರಿಸುವುದೇ ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಕಾಯಕವಾಗಿ ಬಿಟ್ಟಿದೆ.
ಡಬ್ಬಿಂಗ್ ಗಾನಬಜಾನಾ: ಚುನಾವಣೆ ಸಮೀಪಿಸುತ್ತಿ ದ್ದಂತೆ ಎಲ್ಲೆಡೆ ರಾಜಕೀಯ ಚಟುವಟಿಕೆಗಳೂ ಬಿರುಸು ಪಡೆದಿವೆ. ಸದ್ಯಕ್ಕಂತೂ ಅಭ್ಯರ್ಥಿಗಳ ಪ್ರಚಾರದ್ದೇ ಹಾವಳಿ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಹೊಸ ಖಾತೆಗಳು ತೆರೆದು ಹತ್ತಾರು ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ. ಅದರಲ್ಲೂ ಡಬ್ಬಿಂಗ್ ಹಾಡುಗಳ ಹಾವಳಿ ಕೂಡ ಹೆಚ್ಚಾಗುತ್ತಿದೆ. ಕೆಲವೊಂದು ಸಿನಿಮಾ ಹಾಡುಗಳನ್ನೇ ತಮ್ಮ ನಾಯಕನ ಬಣ್ಣನೆಗೆ ಬಳಸಿಕೊಳ್ಳುತ್ತಿದ್ದು, ಇಂದ್ರ ಚಂದ್ರ ಎಂದೆಲ್ಲ ಹಾಡಿ ಹೊಗಳುವುದು, ಅವರಿಲ್ಲದೇ ಹೋದರೆ ಕ್ಷೇತ್ರದ ಜನ ಅನಾಥರಾಗುತ್ತಾರೆ ಎಂಬಂಥ ಸೆಂಟಿಮೆಂಟ್ ಡೈಲಾಗ್‌ಗಳನ್ನು ಅಳವಡಿಸಿ ಜನರ ಮನ ಪರಿವರ್ತನೆಗೆ ಯತ್ನಿಸಲಾಗುತ್ತಿದೆ.
ಇನ್ನು ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಪೇಜ್‌ಗಳಲ್ಲಿ, ಸ್ಟೇಟಸ್ ಹಾಕಿ ಪ್ರಚಾರ ನಡೆಸಲಾಗುತ್ತಿದೆ. ಇನ್ನೂ ಕೆಲ ಅಭ್ಯರ್ಥಿಗಳು ಮತದಾರರಿಗೆ ಕರೆ ಮಾಡಿಸಿ ಬೆಂಬಲ ಯಾಚಿಸುತ್ತಿದ್ದಾರೆ. ಕೆಲ ಯುವಕ- ಯುವತಿಯರನ್ನು ಇದೇ ಕೆಲಸಕ್ಕೆ ನಿಯೋಜಿಸಿದ್ದು, ನಿತ್ಯ ಕರೆ ಮಾಡುವುದೇ ಅವರ ಕಾಯಕವಾಗಿದೆ.
– ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
Maski ಅಕ್ರಮ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ
Raichur: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.