Hatti: ಟ್ಯಾಂಕ್ ನೀರಿಗೆ ವಿಷ, ಬೆಚ್ಚಿಬಿದ್ದ ಗ್ರಾಮಸ್ಥರು
Team Udayavani, Oct 6, 2024, 3:42 PM IST
ಹಟ್ಟಿಚಿನ್ನದಗಣಿ: ಸಮೀಪದ ರೋಡಲಬಂಡಾ(ತ) ಗ್ರಾಪಂ ವ್ಯಾಪ್ತಿಯ ತವಗ ಗ್ರಾಮದ ಓವರ್ ಹೆಡ್ ಟ್ಯಾಂಕ್ ನೀರಿಗೆ ಕಿಡಿಗೇಡಿಗಳು ವಿಷ ಬೆರೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ವಾಟರ್ ಮ್ಯಾನ್ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ವಿಷ ಮಿಶ್ರಿತ ನೀರಿನ ವಾಸನೆ ಬಂದ ಹಿನ್ನೆಲೆ ಸಕಾಲದಲ್ಲಿಯೇ ಎಚ್ಚೆತ್ತ ಗ್ರಾಮಸ್ಥರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಎಂದಿನಂತೆ ನೀರಘಂಟಿ ಗ್ರಾಮಕ್ಕೆ ನೀರು ಬಿಟ್ಟಾಗ ನಲ್ಲಿಗೆ ಬಂದ ನೀರು ವಾಸನೆಯಿಂದ ಕೂಡಿದೆ. ಇದರಲ್ಲಿ ವಿಷಕಾರಿ ಅಂಶ ಇರಬಹುದು ಎಂದು ಗ್ರಾಮಸ್ಥರು ನೀರು ತುಂಬಿಕೊಳ್ಳದಂತೆ ನೋಡಿಕೊಂಡಿದ್ದಾರೆ ಎಲ್ಲರಿಗೂ ಎಚ್ಚರಿಸಿದ್ದಾರೆ.
600ಕ್ಕೂ ಹೆಚ್ಚು ಮನೆಗಳಿರುವ ತವಗ ಗ್ರಾಮದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಾರೆ. 50 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‍ಗೆ 10-15 ಲೀಟರ್ ಕ್ರಿಮಿನಾಶಕ ಬೆರೆಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಗ್ರಾಮಕ್ಕೆ ತಾಪಂ ಇಒ ಉಮೇಶ ಭೇಟಿ ನೀಡಿ ಪರಿಶೀಲಿಸಿ ನೀರಿನ ಸ್ಯಾಂಪಲ್ ಸಂಗ್ರಹಿಸಿದರು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.