ಕೊಟ್ಟಿಗೆ ಗೊಬ್ಬರಕ್ಕೆ ಭಾರೀ ಬೇಡಿಕೆ

ಕೆಲವರ ಭೂಮಿಗಳಿಗೆ ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸಿದ್ದರಿಂದ ಭೂಮಿ ಸವಳಾಗಿದೆ.

Team Udayavani, May 19, 2022, 5:27 PM IST

ಕೊಟ್ಟಿಗೆ ಗೊಬ್ಬರಕ್ಕೆ ಭಾರೀ ಬೇಡಿಕೆ

ಮುದಗಲ್ಲ: ಪಟ್ಟಣ ಸೇರಿದಂತೆ ಸುತ್ತಲಿನ ಭಾಗದಲ್ಲಿ ಕೊಟ್ಟಿಗೆ(ತಿಪ್ಪೆ)ಗೊಬ್ಬರಕ್ಕೆ ಭಾರೀ ಬೇಡಿಕೆ ಬಂದಿದೆ. ತಾಲೂಕಿನಲ್ಲಿ ಕಾಲುವೆ, ಕೊಳವೆ ಬಾವಿ-ತೆರೆದ ಬಾವಿ, ಕೆರೆ-ಕುಂಟೆ, ಹಳ್ಳ-ಕೊಳ್ಳಗಳಲ್ಲಿನ ನೀರು ಉಪಯೋಗಿಸಿ ಕೊಂಡು ತೋಟ, ಗದ್ದೆ ಮಾಡಿ ವ್ಯವಸಾಯ ಮಾಡುವ ಇಲ್ಲಿಯ ರೈತರು ರಾಸಾಯನಿಕ ಗೊಬ್ಬರ ಬಳಸುತ್ತಿದ್ದರು ಇದರಿಂದ ಈ ಭಾಗದ ಶೇ.36 ಜಮೀನು ಬರಡಾಗಿ ಬಿತ್ತಿದ ಪೈರು ಬೆಳೆಯದಂತಾಗಿತ್ತು. ಇದನ್ನು ಮನಗಂಡ ಇಲ್ಲಿಯ ರೈತರು ಈಗ ಕೊಟ್ಟಿಗೆ ಗೊಬ್ಬರಕ್ಕೆ ಮರಳಿ ಮಾರು ಹೋಗಿದ್ದಾರೆ.

ಸಾವಯವ ಕೃಷಿ ಹಾಗೂ ತೋಟದ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಹಳ್ಳಿಗಾಡಿನಲ್ಲಿ ಈಗ ಜಾನುವಾರುಗಳ ಸಂಖ್ಯೆಯೂ ಕಡಿಮೆಯಾಗಿದ್ದರಿಂದ ಕೊಟ್ಟಿಗೆ ಗೊಬ್ಬರ ಸಂಗ್ರಹ ಕಡಿಮೆಯಾಗಿದೆ. ಖರೀದಿಸುವವರ ಸಂಖ್ಯೆ ಹೆಚ್ಚಾಗಿದ್ದರಿಂದ ತಿಪ್ಪೆ ಗೊಬ್ಬರಕ್ಕೆ ಭಾರಿ ಡಿಮ್ಯಾಂಡ್‌ ಬಂದು ಬೇಡಿಕೆ ಹೆಚ್ಚಾಗಿದೆ.

5000 ದಿಂದ 6000: ಸದ್ಯ ಕೊಟ್ಟಿಗೆ ಗೊಬ್ಬರದ ಬೆಲೆ ಗಗನಕ್ಕೇರಿದೆ. ಒಂದು ಟ್ರ್ಯಾಕ್ಟರಿಗೆ 5000ರಿಂದ 6500 ವರೆಗೂ ಖರೀದಿಸಲಾಗುತ್ತಿದೆ. ಹಣದ ಅವಶ್ಯಕತೆ ಇರುವ ಬಡ ರೈತರು, ಜಮೀನು ಇಲ್ಲದ ಕೂಲಿಕಾರರು ಕೊಟ್ಟಿಗೆ ಗೊಬ್ಬರ ಮಾರುತ್ತಿದ್ದಾರೆ.

ಕೆಲವರ ಭೂಮಿಗಳಿಗೆ ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸಿದ್ದರಿಂದ ಭೂಮಿ ಸವಳಾಗಿದೆ. ಮೊದಲಿಗೆ ಉತ್ತಮ ಫಸಲು ಬರುತಿತ್ತು ಆದರೆ ಈಗ ಕಾಲಕಳೆದಂತೆ ಜಮೀನು ಸವಳಾಗುತ್ತ ಸಾಗಿದೆ. ನಾಗರಾಳ, ಬೊಮ್ಮನಾಳ, ನರಕಲದಿನ್ನಿ, ಆನಾಹೂಸೂರ, ನವಲಿ, ಜಾಗೀರನಂದಿಹಾಳ, ಭೋಗಾಪೂರ, ನೀರಲಕೇರಿ, ಈಚನಾಳ, ರೋಡಲಬಂಡ, ಜಾವೂರ, ಜೂಲಗುಡ್ಡ ಸೇರಿದಂತೆ ತಾಲೂಕಿನ ನೂರಾರು ಗ್ರಾಮಗಳ ಜಮೀನು ಸವಳಾಗಿ ಮಾರ್ಪಟ್ಟಿದೆ.

ಖರ್ಚು ಮಾಡಿ ಬಿತ್ತಿದ ಬೀಜದ ಅಸಲು ಬರುತ್ತಿಲ್ಲ. ಸವಳು ಜಮೀನನ್ನು ಮೂಲ ರೂಪಕ್ಕೆ ತರಲು ಫಸಲು ಚೆನ್ನಾಗಿ ಬೆಳೆಯಲು ರೈತರು ಈಗ ಕೊಟ್ಟಿಗೆ ಗೊಬ್ಬರದ ಮೊರೆ ಹೋಗಿದ್ದಾರೆ. ತಿಪ್ಪೆ ಗೊಬ್ಬರದ ಹಿಂದೆ ದುಂಬಾಲು ಬಿದ್ದಿರುವ ರೈತರು ದೂರದ ಊರುಗಳಿಂದ ಹೆಚ್ಚಿಗೆ ಹಣ ನೀಡಿ ಗೊಬ್ಬರ ಖರೀದಿಸುತ್ತಿದ್ದಾರೆ.

ದೇವಪ್ಪ ರಾಠೋಡ

ಟಾಪ್ ನ್ಯೂಸ್

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

Sindhanur: ಲಾರಿ ಪಲ್ಟಿ… ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.