ಮಳೆ ಬಂದ್ರೆ ತೀವ್ರ ತೊಂದರೆ: 20ಕ್ಕೂ ಅಧಿಕ ಕುಟುಂಬಗಳ ನೀಗದ ಸಮಸ್ಯೆ
Team Udayavani, Aug 29, 2022, 6:08 PM IST
ದೇವದುರ್ಗ: ಸಮೀಪದ ಕಕ್ಕಲದೊಡ್ಡಿ ಗ್ರಾಮದ 20ಕ್ಕೂ ಅಧಿಕ ಪರಿಶಿಷ್ಟ ಜಾತಿ ಸಮುದಾಯದ ಕುಟುಂಬಗಳಿಗೆ ಮಳೆ ಬಂದರೆ ಕಣ್ಣೀರು ಕಪಾಳಕ್ಕೆ ಬರುತ್ತದೆ. ಇವರ ಮನೆಗಳು ತಗ್ಗು ಪ್ರದೇಶದಲ್ಲಿ ಇರುವ ಹಿನ್ನೆಲೆಯಲ್ಲಿ ಮಳೆ ಬಂದರೆ ಸಾಕು ಮನೆಗಳಿಗೆ ನೀರು ನುಗ್ಗುತ್ತದೆ.
ಶುಕ್ರವಾರ ತಡರಾತ್ರಿ ಸುರಿದ ಮಳೆಯಿಂದ ಈ ಮನೆಗಳಿಗೆ ನೀರು ನುಗ್ಗಿ ದವಸ ಧ್ಯಾನಗಳು ನೀರು ಪಾಲಾಗಿವೆ. ಇದು ಒಂದೆರಡು ದಿನದ ಕತೆಯಲ್ಲ. ಸುಮಾರು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ. ಮಳೆ, ಗಾಳಿಗೆ ಜೀವನವೇ ಬೇಸರಗೊಂಡಿರುವ ಕುಟುಂಬಗಳ ಕಣ್ಣೀರ ಕಥೆಯನ್ನು ಕೇಳುವವರೇ ಇಲ್ಲದಂತಾಗಿದೆ. ಅದು ಅಲ್ಲದೇ ಒಂದು ಕುಟುಂಬದಲ್ಲಿ ಮೂರ್‍ನಾಲ್ಕು ಜನರು ವಾಸಿಸುತ್ತಿದ್ದು, ಕಿರಿದಾದ ಮನೆಗಳಿವೆ. ಸಂಬಂಧಿಕರು ಬಂದರೆ ಮಲಗಲು ದೇವಸ್ಥಾನ ಆವರಣ, ಸಮುದಾಯ ಭವನಗಳನ್ನು ಅವಲಂಬಿಸುವಂತಾಗಿದೆ.
ಗ್ರಾಪಂ ಆಡಳಿತ ಮಂಡಳಿ ಈ ಕುಟುಂಬಗಳ ಸಮಸ್ಯೆ ನೀಗಿಸುವಲ್ಲಿ ವಿಫಲವಾಗಿದೆ. ಚುನಾವಣೆ ಬಂದಾಗ ಮೊಸಳೆ ಕಣ್ಣೀರು ಸುರಿಸಿ ಮತ ಪಡೆಯುವ ಚುನಾಯಿತ ಜನಪ್ರತಿನಿಧಿಗಳು ಸೌಲಭ್ಯ ಕಲ್ಪಿಸಲು ನಿರ್ಲಕ್ಷé ತಾಳಿದ ಪರಿಣಾಮ ಹಗಲು ರಾತ್ರಿ ಕಣ್ಣೀರು ಹಾಕುವಂತಾಗಿದೆ.
ಕಣ್ಣೀರಿಟ್ಟ ಮಹಿಳೆ: ಶುಕ್ರವಾರ ತಡರಾತ್ರಿ ಸುರಿದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ರಾತ್ರಿ ಜಾಗರಣೆ ಮಾಡುವ ಸ್ಥಿತಿ ಎದುರಾಯಿತು. ಹೊಲ, ಗದ್ದೆಗಳಿಗೆ ಕೆಲಸಕ್ಕೆ ಹೋದಾಗ ಕೂಡಿಟ್ಟ ಎರಡು ಸಾವಿರ ರೂ., ಕಷ್ಟ ಕಾಲಕ್ಕೆ ಆಸರೆ ಆಗುತ್ತದೆ ಎಂದು ನಂಬಿಕೆಯಿಟ್ಟಿದ್ದ ಅರ್ಧ ತೊಲೆ ಬಂಗಾರದ ಕರಳಿ ನೀರು ಪಾಲಾಗಿವೆ. ದವಸಧ್ಯಾನಗಳು ನೀರಿನಲ್ಲಿ ತೇಲಾಡುತ್ತಿದ್ದವು. ಶಾಶ್ವತ ಸೂರು ಕಲ್ಪಿಸಿ ನರಕದಿಂದ ಪಾರು ಮಾಡಿ ಎಂದು ಯಲ್ಲಮ್ಮ ಕೈಮುಗಿದು ನೋವು ತೋಡಿಕೊಂಡರು. ಹರಿಜನ, ಗಿರಿಜನ ಕಲ್ಯಾಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೋಟ್ಯಂತರ ರೂ. ಅನುದಾನ ಬಳಸಲಾಗುತ್ತಿದೆ. ಅದಷ್ಟೋ ಕುಟುಂಬಗಳು ಯಾವುದೇ ಅಭಿವೃದ್ಧಿ ಕಾಣದೇ ವಂಚಿತಗೊಂಡಿವೆ.
ಸರಕಾರಿ ಜಾಗ ಗೈರಾಣಿ ಭೂಮಿ ಸರ್ವೇ ಮಾಡಿ ಹದ್ದುಬಸ್ತ್ ಮಾಡಲು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆಸರೆ ಯೋಜನೆಯಡಿ ಕಾಯ್ದಿರಿಸುವ ಜಾಗ ಕುರಿತು ಪರಿಶೀಲನೆ ಮಾಡುತ್ತೇನೆ. ಮಳೆ ನೀರು ನುಗ್ಗಿದ ಬಹುತೇಕ ಮಹಿಳೆಯರು ಮನೆಗಳ ಕಟ್ಟಿಕೊಳ್ಳಲು ಜಾಗ ಕೊಡುವಂತೆ ಮನವಿ ಮಾಡಿದ್ದಾರೆ. -ಶ್ರೀನಿವಾಸ ಚಾಪಲ್, ತಹಶೀಲ್ದಾರ್
ಸುರಿದ ಮಳೆಗೆ ಹಣ, ಬಂಗಾರ ನೀರು ಪಾಲಾಗಿವೆ. ದವಸಧಾನ್ಯ ನೀರಿಗೆ ಹರಿದುಕೊಂಡು ಹೋಗಿವೆ. -ಯಲ್ಲಮ್ಮ, ನೊಂದ ಕಕ್ಕಲದೊಡ್ಡಿ ನಿವಾಸಿ
-ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.